ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಪೋಕ್ಲು | ಉರುಳಿದ ಮರ; ಸಂಚಾರಕ್ಕೆ ತೊಡಕು

Published 22 ಜೂನ್ 2024, 14:19 IST
Last Updated 22 ಜೂನ್ 2024, 14:19 IST
ಅಕ್ಷರ ಗಾತ್ರ

ನಾಪೋಕ್ಲು: ನಾಪೋಕ್ಲು- ವಿರಾಜಪೇಟೆ ಮುಖ್ಯ ರಸ್ತೆಯ ಕೈಕಾಡು ಬಳಿ ಮರವೊಂದು ಉರುಳಿ ಬಿದ್ದ ಪರಿಣಾಮ ರಸ್ತೆ ಸಂಚಾರಕ್ಕೆ ತೊಡಕುಂಟಾಯಿತು.

ಪಾರಾಣೆ ಗ್ರಾಮ ಪಂಚಾಯಿತಿಯ ಕೈಕಾಡು ಗ್ರಾಮದಲ್ಲಿ ಬೃಹತ್ ಗಾತ್ರದ ಮರ ಶನಿವಾರ ಬೆಳಗಿನ ಜಾವ ರಸ್ತೆ ಗಡ್ಡಲಾಗಿ ಮುರಿದುಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿತು. ಬೆಂಗಳೂರಿನಿಂದ ನಾಪೋಕ್ಲುವಿಗೆ ಬೆಳಗಿನ ಜಾವ ಆಗಮಿಸುತ್ತಿದ್ದ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸು ಸೇರಿದಂತೆ ಹಲವು ವಾಹನಗಳು ಈ ರಸ್ತೆಯಲ್ಲಿ ಸಂಚರಿಸಲಾರದೆ ಸಮಸ್ಯೆ ಉಂಟಾಯಿತು.

ಪಾರಾಣೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಡೆಯಂಡ ಕಟ್ಟಿ ಕುಶಾಲಪ್ಪ, ನಾಯಕಂಡ ಕುನ್ಯಾಣ್ಣ ಮುತ್ತಪ್ಪ, ಕದ್ದನಿಯoಡ ರೋಹನ್, ಗಿರೀಶ್, ಶರೀಣ್ ಹಾಗೂ ಕಾರ್ಮಿಕರೊಂದಿಗೆ ಬಿದ್ದ ಮರವನ್ನು ಮಿಷನ್ ಮೂಲಕ ಕತ್ತರಿಸಿ ಟ್ರ್ಯಾಕ್ಟರ್‌ಗೆ ಕಟ್ಟಿ ಎಳೆದು ತೆರವುಗೊಳಿಸುವುದರ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ನಾಪೋಕ್ಲು ಸಮೀಪದ ಕೈಕಾಡು ಗ್ರಾಮದಲ್ಲಿ ಶನಿವಾರ ರಸ್ತೆ ಗಡ್ಡಲಾಗಿ ಮುರಿದುಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿರುವುದು.
ನಾಪೋಕ್ಲು ಸಮೀಪದ ಕೈಕಾಡು ಗ್ರಾಮದಲ್ಲಿ ಶನಿವಾರ ರಸ್ತೆ ಗಡ್ಡಲಾಗಿ ಮುರಿದುಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT