ಸೋಮವಾರಪೇಟೆ: ಇಲ್ಲಿನ ಸರ್ಕಾರಿ ಮಾದರಿ ಶಾಲೆಯಶತಮಾನೋತ್ಸವ ಭವನದ ಕಾಮಗಾರಿಅರ್ಧಕ್ಕೆ ನಿಂತಿದ್ದು, ಮದ್ಯವ್ಯಸನಿಗಳ ತಾಣವಾಗಿ ಮಾರ್ಪಟ್ಟಿದೆ. 14 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ಪೂರ್ಣ ಗೊಳ್ಳುವುದು ಯಾವಾಗ ಎಂಬುದು ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ.

ಶಾಲೆಯು 131 ವರ್ಷ ಪೂರ್ಣ ಗೊಳಿಸಿದ ಪ್ರಯುಕ್ತ ಅಂದಿನ ಶಾಸ ಕರು ಮತ್ತು ಶಾಲೆಯ ಹಳೆಯ ವಿದ್ಯಾರ್ಥಿಯೂ ಆಗಿದ್ದ ಬಿ.ಎ.ಜೀವಿಜಯ ಶ್ರಮದಿಂದ ಶತಮಾನೋ ತ್ಸವದ ಹೆಸರಿನಲ್ಲಿಯೇ ಒಂದು ಬಹುಪಯೋಗಿ ಭವನ ನಿರ್ಮಿಸುವ ಯೋಜನೆ ಆರಂಭ ಗೊಂಡಿತ್ತು.

ಶೇ 30ರಷ್ಟು ಕಾಮಗಾರಿ ನಡೆಯಿ ತಾದರೂ ನಂತರದ ಅವಧಿಯಲ್ಲಿ ಅದು ಸ್ಥಗಿತಗೊಂಡಿತು. ಕಳೆದ 14 ವರ್ಷಗಳಿಂದಲೂ ಕಾಮಗಾರಿ ಮುಂದಕ್ಕೆ ತೆವಳಲೂ ಇಲ್ಲ. ಕಾಮ ಗಾರಿಗಾಗಿ ತೊಡಗಿಸಿರುವ ಸರ್ಕಾರದ ಲಕ್ಷಾಂತರ ರೂಪಾಯಿ ಹಣ ವ್ಯರ್ಥ ವಾಗಿದೆ. ಕಾಮಗಾರಿ ಅರ್ಧಕ್ಕೆ ನಿಂತಿ ರುವ ಈ ಭವನದಕಟ್ಟಡ ಇಂದು ಪುಂಡ ಪೋಕರಿಗಳ ತಾಣವಾಗಿ ಮಾರ್ಪಟ್ಟಿದೆ. ಇದರೊಳಗೆ ನಿತ್ಯವೂ ಮದ್ಯವ್ಯಸನಿಗಳು ಸೇರಿ ಮೋಜು ಮಸ್ತಿಯಲ್ಲಿ ತೊಡಗುತ್ತಿದ್ದಾರೆ.

‘ಇಲ್ಲಿ ಭವನವು ಪೂರ್ಣ ಗೊಂಡಿದ್ದರೆ ಸರ್ಕಾರಿ ಮತ್ತು ಖಾಸಗಿ ಕಾರ್ಯಕ್ರಮಗಳ ಆಯೋಜನೆಗೆ ಸೂಕ್ತವಾಗುತ್ತಿತ್ತು. ಅಡಿಪಾಯ ಹಾಕಿ ಸ್ವಲ್ಪ ಕಾಮಗಾರಿ ಮುಗಿದ ನಂತರ ರಾಜ್ಯದಲ್ಲಿ 3 ಸರ್ಕಾರಗಳು ಅಧಿಕಾರಕ್ಕೆ ಬಂದರೂ ಕೂಡ; ಒಣ ಪ್ರತಿಷ್ಠೆಯಿಂದ ಅಪೂರ್ಣಗೊಂಡಿದೆ. ನಿರ್ಮಾಣ ಹಂತದ ಈ ಭವನ ಪ್ರವೇಶಿಸಿದರೆ ನೂರಾರು ಮದ್ಯದ ಬಾಟಲಿಗಳು, ಸಿಗರೇಟಿನ ತುಂಡುಗಳು, ಗಾಂಜಾ ವ್ಯಸನಿಗಳು ಬಳಸುವ ಸಾಧನಗಳು ಕಾಣಸಿಗುತ್ತವೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎನ್.ದೀಪಕ್ ದೂರುತ್ತಾರೆ.

ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ 1887ರಲ್ಲಿ ಪ್ರಾರಂಭವಾಗಿದ್ದು, 2007ಕ್ಕೆ 120 ವರ್ಷಗಳು ತುಂಬಿದ್ದವು. ಹಳೆ ವಿದ್ಯಾರ್ಥಿಗಳ ಅಭಿಲಾಷೆಯಂತೆ, ಹಳೆ ವಿದ್ಯಾರ್ಥಿಗಳು ಮತ್ತು ಅಂದಿನ ಶಾಸಕರಾಗಿದ್ದ ಬಿ.ಎ.ಜೀವಿಜಯ ಮುಂದಾಳತ್ವದಲ್ಲಿ ₹ 1.25 ಕೋಟಿ ವೆಚ್ಚದಲ್ಲಿ ಶತಮಾನೋತ್ಸವ ಭವನ ನಿರ್ಮಿಸಲು ಅಂದಾಜು ಪಟ್ಟಿ ತಯಾ ರಿಸಲಾಗಿತ್ತು.

ಜೀವಿಜಯ ತಮ್ಮ ಶಾಸಕರ ನಿಧಿಯಿಂದ ₹ 18 ಲಕ್ಷ ಅನುದಾನ ನೀಡಿದ್ದರು. ನಂತರ, ಬೇರೆ ಬೇರೆ ಮೂಲದಿಂದ ಹಣ ಸಂಗ್ರಹಿಸುವುದಕ್ಕೆ ಮುಂದಾದರು. ಮಲೆನಾಡು ಅಭಿ ವೃದ್ಧಿ ಮಂಡಳಿಯಿಂದ ವಿವಿಧ ಹಂತ ಗಳಲ್ಲಿ ₹ 15 ಲಕ್ಷ, ರಾಜ್ಯಸಭೆ ಸದಸ್ಯ ರೆಹಮಾನ್‌ಖಾನ್ ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ₹ 4 ಲಕ್ಷ, ಕೇಂದ್ರ ಸಚಿವ ಎಂ.ವಿ.ರಾಜಶೇಖರನ್ ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ₹ 2.5 ಲಕ್ಷ ಹಾಗೂ ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ₹ 3 ಲಕ್ಷವನ್ನು ಜೀವಿಜಯ ಅವರ ಮನವಿಗೆ ಸ್ಪಂದಿಸಿ ನೀಡಿದ್ದರು.

12 ವರ್ಷದ ನಂತರ ಹಳೆ ವಿದ್ಯಾರ್ಥಿಗಳಲ್ಲಿ ಮತ್ತೊಮ್ಮೆ ಶತಮಾನೋತ್ಸವ ಭವನ ನಿರ್ಮಾಣ ವಾಗುವ ಕನಸು ಗರಿಗೆದರಿತ್ತು. ಹಿಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶತಮಾನೋತ್ಸವ ಭವನ ನಿರ್ಮಾಣಕ್ಕೆ ಮುಂದಾಗಿ, ಮುಂದುವರಿದ ಕಾಮಗಾರಿಗೆ ಯೋಜನೆ ತಯಾರು ಮಾಡಿದರು. ₹ 3.60 ಕೋಟಿ ವೆಚ್ಚದ ಸುಸಜ್ಜಿತ ಭವನಕ್ಕೆ ಅಂದಾಜುಪಟ್ಟಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ್ದರು. ಶಾಲೆಯ ಪಕ್ಕದ 30 ಸೆಂಟ್ ಸ್ಥಳದಲ್ಲಿ 80 ಚದರ ವಿಸ್ತೀರ್ಣದ ಬೃಹತ್ ಭವನದಲ್ಲಿ 1,500 ರಿಂದ 2,000 ಮಂದಿಗೆ ಆಸನದ ವ್ಯವಸ್ಥೆ ಕಲ್ಪಿಸುವ ಉದ್ದೇಶವಿತ್ತು. ಕಟ್ಟಡದ ನೆಲಮಾಳಿಗೆಯಲ್ಲಿ ಅಡುಗೆ ಮನೆ ಹಾಗೂ ಊಟದ ಸಭಾಂಗಣಕ್ಕೆ ಯೋಜನೆಯನ್ನೂ ರೂಪಿಸಲಾಗಿತ್ತು.

ಎಲ್ಲವೂ ಯೋಜನೆಯಂತೆ ನಡೆ ದಿದ್ದರೆ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‌ನಂತೆ ಭವನ ನಿರ್ಮಾಣವಾಗಬೇಕಿತ್ತು. ಆದರೆ, ಕಾಮ ಗಾರಿ ಅರ್ಧಕ್ಕೆ ನಿಂತಿದ್ದು ಕೇಳುವವರೇ ಇಲ್ಲದಂತಾಗಿರುವುದ ರಿಂದ ಅದು ಮದ್ಯವ್ಯಸನಿಗಳಿಗೆ ಸ್ವರ್ಗದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.