ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ನಾಡು ವಾಲಿಬಾಲ್ ಪ್ರೀಮಿಯರ್ ಲೀಗ್: ಕೆ.ಕೆ.ಆರ್ ತಂಡಕ್ಕೆ ಪ್ರಶಸ್ತಿ

ನಾಲ್ಕು ನಾಡು ಪ್ರೀಮಿಯರ್ ಲೀಗ್ ವಾಲಿಬಾಲ್ ಟೂರ್ನಿ
Published 30 ಜನವರಿ 2024, 14:05 IST
Last Updated 30 ಜನವರಿ 2024, 14:05 IST
ಅಕ್ಷರ ಗಾತ್ರ

ನಾಪೋಕ್ಲು: ಇಲ್ಲಿನ ಫ್ರೆಂಡ್ಸ್ ಫಾರವರ್ ವತಿಯಿಂದ ಆಯೋಜಿಸಲಾದ ಹೊನಲು ಬೆಳಕಿನ ನಾಲ್ಕು ನಾಡು ವಾಲಿಬಾಲ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೆಕೆಆರ್ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಸಮೀಪದ ಚೆರಿಯಪರಂಬವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸ್ಮೈಲಿಂಗ್ ಫಿಶ್ ತಂಡವನ್ನು ಮಣಿಸಿ ಕೆಕೆಆರ್ ತಂಡ ನಗದು ಮತ್ತು ಆಕರ್ಷಕ ಟ್ರೋಫಿ ತನ್ನದಾಗಿಸಿಕೊಂಡಿತು.

ಟೂರ್ನಿಯಲ್ಲಿ ನಾಲ್ಕು ನಾಡು ವಿಭಾಗದ ಎಂಟು ತಂಡಗಳು ಪಾಲ್ಗೊಂಡಿದ್ದವು. ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿಯನ್ನು ಸ್ಮೈಲಿಂಗ್ ಫಿಶ್ ತಂಡದ ಇರ್ಷಾದ್ ಪಡೆದುಕೊಂಡರು. ಬೆಸ್ಟ್ ಅಟ್ಯಾಕರ್ ಪ್ರಶಸ್ತಿಯನ್ನು ಕೆಕೆಆರ್ ತಂಡದ ಯಹಿಯ್ಯ ಪಡೆದರೆ, ಬೆಸ್ಟ್ ಪಾಸರ್ ಪ್ರಶಸ್ತಿಯನ್ನು ಸ್ಮೈಲಿಂಗ್ ಫಿಶ್ ತಂಡದ ಗಫೂರ್ ಪಡೆದರು.

ಬೆಸ್ಟ್ ಲಿಬರೊ ಪ್ರಶಸ್ತಿಗೆ ಕೆಕೆಆರ್ ತಂಡದ ಶರೀಫ್ ಆಯ್ಕೆಯಾದರೆ, ಬೆಸ್ಟ್ ಬ್ಲಾಕರ್ ಪ್ರಶಸ್ತಿಗೆ ಸ್ಮೈಲಿಂಗ್ ಫಿಶ್ ತಂಡದ ಯೂನಸ್ ಭಾಜನರಾದರು. ಟೂರ್ನಿಯಲ್ಲಿ ಕೆಕೆಆರ್ ತಂಡ ಬೆಸ್ಟ್ ಟೀಮ್ ಪ್ರಶಸ್ತಿ ಪಡೆದುಕೊಂಡಿತು. ಟೂರ್ನಿಯ ತೀರ್ಪುಗಾರರಾಗಿ ಕಡಂಗದ ಕರೀಂ, ಗುಂಡಿಕೆರೆಯ ಸುಹೈಲ್, ನಾಪೋಕ್ಲುವಿನ ಅಬ್ಬಾಸ್ ಕಾರ್ಯ ನಿರ್ವಹಿಸಿದರು. ವೀಕ್ಷಕ ವಿವರಣೆಯನ್ನು ಕೊಟ್ಟಮುಡಿಯ ಸೈಫುದ್ದೀನ್ ನೀಡಿದರು.

ಈ ಸಂದರ್ಭದಲ್ಲಿ ಕೆ.ಎ.ಹ್ಯಾರಿಸ್ ಮಾತನಾಡಿ, ‘ಕ್ರೀಡೆಯಿಂದ ಮನುಷ್ಯನ ಅರೋಗ್ಯದಲ್ಲಿ ದೈಹಿಕ ಮತ್ತು ಮಾನಸಿಕ ಸಮತೋಲನಕ್ಕೆ ಸಹಕಾರಿಯಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಕ್ರೀಡೆಗಳ ಆಯೋಜನೆಯಿಂದ ಪ್ರತಿಭೆಗಳನ್ನು ಗುರುತಿಸಲು ಸಾಧ್ಯ. ಕ್ರೀಡೆಯು ಜಾತಿ, ಧರ್ಮ, ಭಾಷೆ ಎಲ್ಲವನ್ನು ಬದಿಗೊತ್ತಿ ಪರಸ್ಪರ ಬಾಂಧವ್ಯ ವೃದ್ಧಿಸಲು ಉತ್ತಮ ವೇದಿಕೆಯಾಗಿದೆ’ ಎಂದರು.

ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್, ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎ.ಹಂಸ ಕೊಟ್ಟಮುಡಿ, ಬೆಳೆಗಾರ ಮಣವಟ್ಟಿರ ಪೊನ್ನಣ್ಣ, ಹೊದ್ದೂರು ಪಂಚಾಯತ್ ಸದಸ್ಯ ಮೊಯ್ದು ಕೊಟ್ಟಮುಡಿ, ನಾಪೋಕ್ಲು ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಪರವಂಡ ಸಿರಾಜ್, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮೈಸಿ ಕತ್ತಣಿರ, ಆಯೋಜಕರಾದ ಫೈಝಲ್, ಕನ್ನಡಿಯಂಡ ಹಸೈನಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT