ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಶಾಲನಗರ: ಕಾಡಾನೆ ದಾಳಿ ಮನೆಗೆ ಹಾನಿ

Published 24 ಏಪ್ರಿಲ್ 2024, 4:30 IST
Last Updated 24 ಏಪ್ರಿಲ್ 2024, 4:30 IST
ಅಕ್ಷರ ಗಾತ್ರ

ಕುಶಾಲನಗರ: ತಾಲ್ಲೂಕಿನ ಯಡವನಾಡು ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಕಾಡಾನೆ ದಾಳಿಯಿಂದ ಮನೆಗೆ ಹಾನಿಯಾಗಿದೆ.

ಗ್ರಾಮದ ರಾಧಾ ರಮೇಶ್ ಎಂಬುವರ ಮನೆ ಆವರಣಕ್ಕೆ ರಾತ್ರಿ ಕಾಡಾನೆ ನುಗ್ಗಿದೆ. ಇದರಿಂದ ಭಯಭೀತರಾದ ಮನೆ ಮಂದಿ ಜೋರಾಗಿ ಕೂಗಿದ್ದಾರೆ. ಜೊತೆಗೆ ಮನೆ ಮುಂದಿನ ಲೈಟ್ ಹಾಕಿದ್ದಾರೆ. ಇದರಿಂದ ಕಾಡಾನೆ ಏಕಾಏಕಿ ಮನೆ ಮುಂದೆ ನುಗ್ಗಿ ಮನೆಯ ಮೇಲ್ಛಾವಣಿಗೆ ಅಳವಡಿಸಿದ್ದ ಸಿಮೆಂಟ್ ಶೀಟು ಜಖಂಗೊಳಿಸಿದೆ.

ಕಾಡಾನೆ ದಾಳಿ ವಿಚಾರ ತಿಳಿದು ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.‌ ಸ್ಥಳಕ್ಕೆ ತಾಲ್ಲೂಕಿನ ಅರಣ್ಯಾಧಿಕಾರಿಗಳು ಭೇಟಿ ನೀಡಿ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮದ ಕೃಷಿಕರಾದ ಪ್ರವೀಣ್, ವರದರಾಜೇ ಅರಸು, ರಮೇಶ್, ಲವ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT