ಗುರುವಾರ , ಮೇ 6, 2021
31 °C

ಒಂಟಿ ಸಲಗ ಸಂಚಾರ: ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುಂಟಿಕೊಪ್ಪ: ಸಮೀಪದ ಕಂಬಿಬಾಣೆ ವ್ಯಾಪ್ತಿಯ ಚಿಕ್ಲಿಹೊಳೆ ರಸ್ತೆಯಲ್ಲಿ ಭಾನುವಾರ ಬೆಳಿಗ್ಗೆ ಒಂಟಿ ಸಲಗವೊಂದು ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿತು.

ಒಂದು ವಾರದಿಂದ ಸುಂಟಿಕೊಪ್ಪ ವ್ಯಾಪ್ತಿಯ ಗ್ರಾಮಗಳಲ್ಲಿ ಒಂಟಿ ಸಲಗ ಸಂಚರಿಸುತ್ತಿದ್ದು, ಭಾನುವಾರವೂ ಅದೇ ಆನೆ ಬಂದಿರಬಹುದು ಎಂದು ಗ್ರಾಮಸ್ಥರು ಶಂಕಿಸಿದ್ದಾರೆ.

ಆನೆಕಾಡು ಅಭಯಾರಣ್ಯದಿಂದ ಬಂದ ಈ ಕಾಡಾನೆಗೆ ಚಿಕ್ಲಿಹೊಳೆಯ ಸಮೀಪ ಕಂದಕವನ್ನು ತೋಡಿದ್ದು, ಇದರಿಂದಾಗಿ ಇತ್ತ ಕಡೆ ಬರುವುದಕ್ಕೆ ಸಾಧ್ಯವಾಗದೆ ಗೀಳಿಡುತ್ತಾ ಆಕ್ರೋಶ ವ್ಯಕ್ತಪಡಿಸಿತು. ಈ ಮಧ್ಯೆ ಜನರ ಕೂಗಾಟಕ್ಕೆ ಇನ್ನಷ್ಟು ಆಕ್ರೋಶಗೊಂಡ ಆನೆ, ಸೊಂಡಿಲಿನಿಂದ ಮಣ್ಣು ಎಸೆದು ಭಯ ಹುಟ್ಟಿಸಿತು. ಆದರೆ, ಹೆಚ್ಚಿನ ಸಂಖ್ಯೆಯಲ್ಲಿದ್ದ ಜನರ ಸದ್ದುಗದ್ದಲದಿಂದ ಹೆದರಿ ಕಾಡಿನೊಳಗೆ ಪಲಾಯನ ಮಾಡಿತು. ನಂತರ ಜನರು ನಿಟ್ಟುಸಿರು ಬಿಡುವಂತಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು