ನಾಪೋಕ್ಲು: ಸಮೀಪದ ಯವಕಪಾಡಿ ಗ್ರಾಮದ ದೇವಾಲಯದಲ್ಲಿ ಶನಿವಾರ ಪನ್ನಂಗಾಲ ತಮ್ಮೆಯ ಉತ್ಸವ ಜರುಗಿತು.

ದೈವಶಕ್ತಿಯ ಆವಾಹನೆಯಾಗಿ ಕೊಡೆ ವೃತ್ತಾಕಾರದಲ್ಲಿ ಸುತ್ತುವಾಗ ಭಕ್ತರ ಮೈಯಲ್ಲಿ ರೋಮಾಂಚನ. ಮತ್ತೊಂದೆಡೆ ಹಬ್ಬದಲ್ಲಿ ಪಾಲ್ಗೊಂಡವರು ಕತ್ತಿಯಿಂದ ಮೈಗೆ ಕಡಿದುಕೊಂಡು ಆವೇಶಭರಿತರಾಗಿ ಹೂಂಕರಿಸುತ್ತಾ ನರ್ತಿಸಿದರೆ ವೀಕ್ಷಕರ ಮನದಲ್ಲಿ ನವಿರಾದ ಕಂಪನ. ಇನ್ನೊಂದೆಡೆ ದೇವಿಯ ವಿಗ್ರಹ ಹೊತ್ತು ಪ್ರದಕ್ಷಿಣೆ…

ಸಾಂಪ್ರದಾಯಿಕ ಗ್ರಾಮೀಣ ಉತ್ಸವದ ಇಂತಹ ಕ್ಷಣಗಳು ಜರುಗಿದ್ದು ಸಮೀಪದ ಯವಕಪಾಡಿ ಗ್ರಾಮದಲ್ಲಿ. ವಿಜೃಂಭಣೆಯಿಂದ ನಡೆಯುವ ಈ ಉತ್ಸವವನ್ನು ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮಗಳ ಹಲವು ಭಕ್ತರು ಆಗಮಿಸಿದ್ದರು.

ಉತ್ಸವದ ಆರಂಭದಲ್ಲಿ ಗ್ರಾಮದ ಅಂಜಪರವಂಡ ಕುಟುಂಬದ ಐನ್ ಮನೆಯಿಂದ ಭಂಡಾರಪೆಟ್ಟಿಗೆಯನ್ನು ದೇವಾಲಯಕ್ಕೆ ತರಲಾಯಿತು. ಪನ್ನಂಗಾಲ ತಮ್ಮೆ ದೇವಾಲಯದಲ್ಲಿ ಪೂಜೆ, ಅಭಿಷೇಕ, ಸಾಂಪ್ರದಾಯಿಕ ಆಚರಣೆಗಳು ನೆರವೇರಿದವು. ಶ್ರದ್ಧಾಭಕ್ತಿಯಿಂದ ಓಲೆಗರಿಯಲ್ಲಿ ತಯಾರಿಸಿದ ಎರಡು ಕೊಡೆಗಳನ್ನು ಕೊಡೆ ಹಬ್ಬದಲ್ಲಿ ಬಳಸಲಾಯಿತು. ಈ ಕೊಡೆಯಲ್ಲಿ ಪನ್ನಂಗಾಲ ತಮ್ಮೆ ದೇವಿ ನೆಲೆಸಿದ್ದು ಅಣ್ಣನಾದ ಇಗ್ಗುತ್ತಪ್ಪ ಮನೆಗೆ ತಂಗಿಯನ್ನು ಕರೆತರುವ ಪದ್ಧತಿಯನ್ನು ಉತ್ಸವದ ರೂಪದಲ್ಲಿ ಆಚರಿಸಲಾಗುತ್ತಿದೆ.

ಎರಡು ವರ್ಷಗಳಿಗೊಮ್ಮೆ ಮಧ್ಯಾಹ್ನ ಪಾಡಿ ಇಗ್ಗುತ್ತಪ್ಪ ದೇವಾಲಯ ಸಮೀಪದ ಅಮ್ಮಂಗೇರಿಯಿಂದ ಬಿದಿರಿನ ಹೊಸ ಕೊಡೆಯನ್ನು ಪನ್ನಂಗಾಲ ತಮ್ಮೆ ದೇವಾಲಯದ ಸಮೀಪದ ಗದ್ದೆಗೆ ಸಾಂಪ್ರದಾಯಿಕ ರೀತಿಯಲ್ಲಿ ತರಲಾಗುತ್ತದೆ. ಹರಕೆಯ ಎತ್ತುಗಳೊಂದಿಗೆ ದೇವಾಲಯಕ್ಕೆ ಭಕ್ತರು ಆಗಮಿಸಿದಾಗ ದೇವರ ಮೂರ್ತಿ ಹಾಗೂ ಕೊಡೆ ಮೆರವಣಿಗೆ ನಡೆಯುತ್ತದೆ. ಈ ಸಂದರ್ಭದಲ್ಲಿ ಭಕ್ತರು ಭಾವಪರವಶತೆಯಿಂದ ತಲೆಗೆ ಕತ್ತಿಯಿಂದ ಕಡಿದುಕೊಂಡು ಆವೇಶಭರಿತರಾಗಿ ನರ್ತಿಸಿದರು. ಸಾಂಪ್ರದಾಯಿಕ ಆಚರಣೆಗಳನ್ನು ವೀಕ್ಷಿಸಲು ಭಕ್ತರು ಅಧಿಕ ಸಂಖ್ಯೆಯಲ್ಲಿ ನೆರೆದಿದ್ದರು.

ಯವಕಪಾಡಿ ಗ್ರಾಮದ ಅಂಜಪರವಂಡ, ಕರ್ತಂಡ, ಐರೀರ, ಅಪ್ಪಾರಂಡ ಕುಟುಂಬಸ್ಥರು ಪರಿಶಿಷ್ಟ ಜಾತಿಯ ಒಂಬತ್ತು ಕುಡಿಗಳು ಹಾಗೂ ಒಂದು ಕುಡಿಯರ ಕುಟುಂಬದವರ ಉಸ್ತುವಾರಿಯಲ್ಲಿ ಪನ್ನಂಗಾಲ ತಮ್ಮೆ ಉತ್ಸವ ಜರುಗಿತು.

ಸಂಜೆ ದೇವರ ಜಳಕ ಹಾಗೂ ರಾತ್ರಿ ಕರಿಚೌಂಡಿ ಬಾರಣೆ ನಡೆಯಿತು. ಕುರುಂದ ಆಟ ಹಾಗೂ ವಿವಿಧ ಪೂಜಾ ಕಾರ್ಯಗಳೊಂದಿಗೆ ಎರಡು ದಿನಗಳ ಪನ್ನಂಗಾಲ ತಮ್ಮೆ ಉತ್ಸವ ಭಾನುವಾರ ಕೊನೆಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.