ನಾಪೋಕ್ಲು: ಕಾಳುಮೆಣಸಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದರೂ ಈ ಬಾರಿ ಇಳುವರಿ ಕಡಿಮೆಯಾಗಿದೆ. ಜೊತೆಗೆ ಕಾರ್ಮಿಕರ ಕೊರತೆಯಿಂದಾಗಿ ಬೆಳೆಗಾರರ ಮೊಗದಲ್ಲಿ ಸಂತಸ ಕಾಣಿಸುತ್ತಿಲ್ಲ.
ಇದುವರೆಗೆ ಕಾಫಿ ಕೊಯ್ಲು ಕೆಲಸದಲ್ಲಿ ತೊಡಗಿಕೊಂಡಿದ್ದ ಕಾರ್ಮಿಕರು ಕಾಳುಮೆಣಸು ಕೀಳಲು ಒಪ್ಪುತ್ತಿಲ್ಲ. ಕಾಳುಮೆಣಸನ್ನು ಕೊಯ್ಯಲು ಕಾರ್ಮಿಕರು ದುಬಾರಿ ದರ ಕೇಳುತ್ತಿರುವುದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ.

ಕಾಳುಮೆಣಸು ಭಾರತದ ಪ್ರಮುಖ ಸಾಂಬಾರು ಬೆಳೆ. ಕೊಡಗಿನಲ್ಲಿ ಇದನ್ನು ಕಾಫಿ ತೋಟಗಳಲ್ಲಿ ಉಪಬೆಳೆಯಾಗಿ ಬೆಳೆಯ ಲಾಗುತ್ತಿದೆ. ಕಾಫಿಯ ತೋಟದ ನೆರಳಿನ ಮರಗಳಿಗೆ ಕಾಳುಮೆಣಸನ್ನು ನೆಟ್ಟು ಉಪಬೆಳೆಯಾಗಿ ಬೆಳೆಯಲಾಗುತ್ತಿದೆ.

ಕಾಳು ಮೆಣಸು ರೈತರಿಗೆ ಚಿನ್ನವಿದ್ದಂತೆ ಎಂಬ ನಂಬಿಕೆ ಹಿಂದಿನ ಕಾಲದಿಂದಲೂ ಚಾಲ್ತಿಯಲ್ಲಿದೆ. ಕಷ್ಟಕಾಲಕ್ಕೆಂದು ಹಣ ಕೂಡಿಡುವ ಬದಲು ಚಿನ್ನ ಮಾಡಿಸಿದಂತೆ ಕಾಳು ಮೆಣಸು ಇದ್ದರೆ ಕಷ್ಟಕಾಲಕ್ಕೆ ನೆರವಾಗುತ್ತದೆ ಎಂಬ ನಂಬಿಕೆ ಇದೆ.

ಹಿಂದೆಲ್ಲ ಕಾಳುಮೆಣಸಿನ ಬಳ್ಳಿಯಿಂದ ಕ್ವಿಂಟಲ್ಗಟ್ಟಲೆ ಕಾಳು ಮೆಣಸು ಕುಯ್ಯುತ್ತಿದ್ದರು. ಈಗೀಗ ಅಲ್ಲಲ್ಲಿ ಕಾಳುಮೆಣಸಿನ ಬಳ್ಳಿಗೆ ರೋಗ ತಗಲಿದ್ದು, ಕೆಲವೆಡೆ ಬಳ್ಳಿಗಳು ಸಾಯತೊಡಗಿವೆ. ಕೀಳುವ ಅವಧಿಯಲ್ಲಿ ಕೂಲಿ ಕಾರ್ಮಿಕರ ಕೊರತೆ ರೈತರನ್ನು ಬಹುವಾಗಿ ಕಾಡುತ್ತಿದೆ.

ಈ ವರ್ಷ ನಾಪೋಕ್ಲುವಿನ ಕೆಲವು ಭಾಗಗಳಲ್ಲಿ ಅಧಿಕ ಫಸಲು ಕಂಡುಬಂದಿದ್ದರೂ ಉಳಿದೆಡೆ ಫಸಲು ಕಡಿಮೆ. ಹಲವು ಭಾಗಗಳಲ್ಲಿ ಇನ್ನೂ ಕಾಳುಮೆಣಸು ಕೊಯ್ಲು ಕೆಲಸ ಆರಂಭಿಸಿಲ್ಲ. ಕಾರ್ಮಿಕರ ಕೊರತೆಯಿಂದ ಕಾಳುಮೆಣಸನ್ನು ಕೀಳದೇ ಬಿದ್ದುದನ್ನು ಹೆಕ್ಕಿ ಸಂಗ್ರಹಿಸುತ್ತಿದ್ದಾರೆ.

ಒಂದು ಕೆ.ಜಿ. ಕಾಳುಮೆಣಸಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿ 350 ರೂ. ಧಾರಣೆಯಿದ್ದು, ಕೃಷಿಕರನ್ನು ಸೆಳೆಯುತ್ತಿದೆ. ಪ್ರಸಕ್ತ ವರ್ಷ ವಿಯೆಟ್ನಾಂ ದೇಶದಲ್ಲಿ ಕಾಳುಮೆಣಸಿಗೆ ಕೊರತೆ ಉಂಟಾಗಿದೆ. ಅಲ್ಲಿ ಬೆಳೆ ಕ್ಷೀಣಿಸಿರುವುದೇ ಕಾಲುಮೆಣಸು ಕೊರತೆಗೆ ಮೂಲಕಾರಣ ಎನ್ನಲಾಗಿದೆ. ಇದು ದರ ಏರಿಕೆಗೆ ಕಾರಣವಾಗಿದೆ. ಕೇರಳದಲ್ಲಿ ಕಾಳುಮೆಣಸನ್ನು ವಿಫುಲವಾಗಿ ಬೆಳೆಯಲಾಗುತ್ತಿದೆ. ಈ ವರ್ಷ ಶೇ.30 ರಿಂದ ಶೇ.35 ರಷ್ಟು ಮಾತ್ರ ಫಸಲು ಬಂದಿದೆ.

ಜಿಲ್ಲೆಯಲ್ಲಿ ಕೆಲವು ವರ್ಷಗಳ ಹಿಂದೆ ತೀವ್ರ ರೋಗಬಾಧೆಗೆ ತುತ್ತಾಗಿ ಕಾಳುಮೆಣಸು ಬಳ್ಳಿಗಳು ನಾಶವಾದವು. ಜಿಲ್ಲೆಯ ಹಲವು ತೋಟಗಳಲ್ಲಿ ಬಳ್ಳಿ ಸರ್ವನಾಶ ಕಂಡಿತ್ತು. ಒಂದು ತೋಟದಲ್ಲಿ ಕಾಣಿಸಿಕೊಂಡ ರೋಗಬಾಧೆ ಅಕ್ಕಪಕ್ಕದ ತೋಟಗಳಿಗೆಲ್ಲ ಹಬ್ಬಿತ್ತು. ಕ್ರಿಮಿ ನಾಶಕಗಳನ್ನು ಸಕಾಲದಲ್ಲಿ ಸಿಂಪಡಿಸಿದರೂ ರೋಗಬಾಧೆಯಿಂದ ಕಾಳುಮೆಣಸು ಮುಕ್ತವಾಗಿಲ್ಲ. ಕೊಯ್ದ ಕಾಳುಮೆಣಸು ಕಾಳುಗಳು ಭಾಗಶ: ಜಳ್ಳಾಗಿವೆ. ಕಾಳುಮೆಣಸು ಬೆಲೆ ಏರುತ್ತಿದ್ದರೂ ರೈತರು ಫಸಲು ಪಡೆಯಲಾರದೇ ಪರಿತಪಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.