ಶುಕ್ರವಾರ, ಜೂನ್ 5, 2020
27 °C

ಹುಟ್ಟು ಹಬ್ಬಕ್ಕಾಗಿ ಕೂಡಿಟ್ಟಿದ್ದ ಹಣವನ್ನು ಪಿಎಂ ಕೇರ್ ನಿಧಿಗೆ ನೀಡಿದ ಬಾಲಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜಿಲ್ಲೆಯ ಮುಳಬಾಗಿಲು ನಗರದ 8 ವರ್ಷದ ಬಾಲಕಿ ಚರಿತಾ ಆರ್‌.ರಾಯಲ್‌ ತನ್ನ ಹುಟ್ಟು ಹಬ್ಬಕ್ಕಾಗಿ ಡಬ್ಬಿ ಗಡಿಗೆಯಲ್ಲಿ ಕೂಡಿಟ್ಟಿದ್ದ ಸುಮಾರು ₹ 11 ಸಾವಿರವನ್ನು ಪ್ರಧಾನಮಂತ್ರಿಗಳ ಕೊರೊನಾ ಪರಿಹಾರ ನಿಧಿಗೆ ನೀಡುವ ಮೂಲಕ ಸಾರ್ಥಕತೆ ಮೆರೆದಿದ್ದಾಳೆ.

ಮುಳಬಾಗಿಲಿನಲ್ಲಿ ವಾಸವಿರುವ ರಮೇಶ್‌ಕುಮಾರ್‌ ಮತ್ತು ಲಾವಣ್ಯ ದಂಪತಿಯ ಮಗಳಾದ ಚರಿತಾ ಖಾಸಗಿ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದಾಳೆ. ಪೋಷಕರು ಹಾಗೂ ಸಂಬಂಧಿಕರು ಕೊಡುವ ಹಣವನ್ನು ಡಬ್ಬಿ ಗಡಿಗೆಯಲ್ಲಿ ಕೂಡಿಡುವ ಚರಿತಾ ತನ್ನ ಹುಟ್ಟು ಹಬ್ಬದ ದಿನದಂದು ಆ ಹಣವನ್ನು ಸಮಾಜ ಸೇವಾ ಕಾರ್ಯಕ್ಕೆ ಬಳಕೆ ಮಾಡುತ್ತಾ ಬಂದಿದ್ದಾಳೆ.

ಚರಿತಾ ಕಳೆದೊಂದು ವರ್ಷದಿಂದ ಕೂಡಿಟ್ಟಿದ್ದ ಹಣವು ದೇಶದೆಲ್ಲೆಡೆ ಕೊರೊನಾ ಸೋಂಕಿನಿಂದ ತೊಂದರೆಗೆ ಸಿಲುಕಿರುವವರ ಕಷ್ಟ ಪರಿಹಾರಕ್ಕೆ ಬಳಕೆಯಾಗಲಿ ಎಂಬ ಸದುದ್ದೇಶದಿಂದ ಪ್ರಧಾನಮಂತ್ರಿಗಳ ಕೊರೊನಾ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿ, ಪೋಷಕರೊಂದಿಗೆ ಇಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರಿಗೆ ಹಣ ನೀಡಿದಳು. ಬಾಲಕಿಯ ಸೇವಾ ಮನೋಭಾವಕ್ಕೆ ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು