ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಶ್ವ ಮಾನವ ಸಂದೇಶ ಪಾಲಿಸಿ’

Last Updated 8 ಜನವರಿ 2021, 7:22 IST
ಅಕ್ಷರ ಗಾತ್ರ

ಕೆಜಿಎಫ್‌: ‘ಹುಟ್ಟುವಾಗ ವಿಶ್ವಮಾನವನಾಗಿ ಹುಟ್ಟುವ ಮಾನವ ಬೆಳೆಯುತ್ತ ಸ್ವಾರ್ಥಿಯಾಗಿ ಬೆಳೆಯದೆ ವಿಶ್ವಮಾನವನಾಗಿ ಬೆಳೆಯಬೇಕು’ ಎಂದು ಕನ್ನಡ ಶಿಕ್ಷಕ ಎಚ್‌. ನಾಗರಾಜ್‌ ಹೇಳಿದರು.

ಬೆಮಲ್‌ ನಗರದಲ್ಲಿ ಬುಧವಾರ ನಡೆದ ಕುವೆಂಪು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮನುಷ್ಯ ದೊಡ್ಡವನಾಗಿ ಬೆಳೆಯುತ್ತ ಸಮಾಜದಲ್ಲಿ ಸ್ವಾರ್ಥಿಯಾಗಿ, ಅಲ್ಪಬುದ್ಧಿಯವನಾಗುತ್ತಾನೆ. ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯದ ಪೂರ್ಣ ದೃಷ್ಟಿ ಎಂಬ ಪಂಚಸೂತ್ರಗಳನ್ನು ಅಳವಡಿಸಿಕೊಂಡರೆ ವಿಶ್ವ ಮಾನವನಾಗಿ ರೂಪಿತವಾಗಬಹುದು ಎಂದು ಹೇಳಿದರು.

ಸಮುದಾಯದ ರಾಜ್ಯ ಘಟಕದ ಅಧ್ಯಕ್ಷ ಅಚ್ಯುತ ಮಾತನಾಡಿ, ಕುವೆಂಪು ಜನ್ಮ ದಿನಾಚರಣೆ ಸಂದರ್ಭದಲ್ಲಿ ಅವರ ವಿಚಾರಗಳನ್ನು ತಿಳಿಯಬೇಕು. ಅವರ ವಿಚಾರವನ್ನು ಮೈಗೂಡಿಸಿಕೊಳ್ಳಬೇಕು. ಉತ್ತಮ ಸಮಾಜ ನಿರ್ಮಾಣ ಮಾಡುವುದಕ್ಕೆ ಕಂಕಣ ತೊಡಬೇಕು ಎಂದರು.

ವಿದ್ಯಾರ್ಥಿಗಳು ಕುವೆಂಪು, ಶಿವರಾಮ ಕಾರಂತ ಅವರ ಕೃತಿಗಳನ್ನು ಓದಬೇಕು. ಅವರ ಆದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಶಿವಪ್ರಸಾದ್‌ ರೈ, ನೀತಾರೈ ಕುಟುಂಬದವರಿಗೆ ಅಭಿನಂದಿಸಲಾಯಿತು. ಅಲಿಕ್‌, ರವೀಂದ್ರ, ವಿಶಾಲಾಕ್ಷಿ ಇದ್ದರು. ಜನಾರ್ದನ್‌ ಮತ್ತು ಶರಣಪ್ಪ ಕುವೆಂಪು ಅವರ ಕವನಗಳನ್ನು ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT