ಮಂಗಳವಾರ, ಅಕ್ಟೋಬರ್ 4, 2022
25 °C

ಬಿಜೆಪಿಯಿಂದ ಅಂಬೇಡ್ಕರ್‌ ಜ್ಯೋತಿ ಯಾತ್ರೆ: ಛಲವಾದಿ ನಾರಾಯಣಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಬಿಜೆಪಿ ರಾಜ್ಯ ಎಸ್‌ಸಿ ಮೋರ್ಚಾ ಆಶ್ರಯದಲ್ಲಿ ನ.26ರಿಂದ ಡಿ.6ವರೆಗೆ ಅಂಬೇಡ್ಕರ್ ಜ್ಯೋತಿ ಯಾತ್ರೆ ನಡೆಸಲಾಗುವುದು’ ಎಂದು ಮೋರ್ಚಾದ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೇಳಿದರು.

‘ಐದು ತಂಡ ಮಾಡಿಕೊಂಡು, 10 ದಿನ ರಾಜ್ಯದಾದ್ಯಂತ ಯಾತ್ರೆ ಸಂಚರಿಸಲಿದೆ. ಅಂಬೇಡ್ಕರ್‌  ಪರಿನಿರ್ವಾಹಣ ದಿನದಂದು ಸಮಾರೋಪ ನಡೆಯಲಿದೆ’ ಎಂದು ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯದ ಐದು ವಿಭಾಗಗಳಲ್ಲಿ 2 ಲಕ್ಷಕ್ಕೂ ಅಧಿಕ ಜನರನ್ನು ಸೇರಿಸಿ ಅಂಬೇಡ್ಕರ್‌ ಹೆಸರಿನಲ್ಲಿ ‘ಅಂಬೇಡ್ಕರ್‌ ಉತ್ಸವ’ ಹಮ್ಮಿಕೊಳ್ಳಲಾಗುವುದು’ ಎಂದರು.

‘ನಮ್ಮ ಕಾರ್ಯಕ್ರಮಗಳು ಗೊತ್ತಾಗುತ್ತಿದ್ದಂತೆ ಕಾಂಗ್ರೆಸ್‌ನವರು ಕೆ.ಎಚ್‌.ಮುನಿಯಪ್ಪ ಹಾಗೂ ಡಾ.ಜಿ.ಪರಮೇಶ್ವರ ಸಾರಥ್ಯದಲ್ಲಿ ದಲಿತೋತ್ಸವ ನಡೆಸಲು ಮುಂದಾಗಿದ್ದಾರೆ. ಈ ನಾಯಕರನ್ನು ಪಕ್ಷದಲ್ಲೇ ಕಟ್ಟಿ ಹಾಕಲು ಈ ತಂತ್ರ ರೂಪಿಸಿದೆ. ಉತ್ಸವ ಆರಂಭವಾಗುವಷ್ಟರಲ್ಲಿ ಈ ಇಬ್ಬರು ನಾಯಕರು ಕಾಂಗ್ರೆಸ್‌ನಲ್ಲಿ ಉಳಿಯುವುದೇ ಅನುಮಾನ. ಮುನಿಯಪ್ಪ ಈಗಾಗ…

ಮೈಸೂರಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ

‘ಮೈಸೂರಿನಲ್ಲಿ ಅಕ್ಟೋಬರ್‌ನಲ್ಲಿ ಎರಡು ದಿನ ಬಿಜೆಪಿ ಎಸ್‌ಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಣಿ ಆಯೋಜಿಸಲಾಗುವುದು. ಈ ಸಂಬಂಧ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಲಾಲ್‌ ಸಿಂಗ್‌ ಆರ್ಯ ಸೂಚನೆ ನೀಡಿದ್ದಾರೆ’ ಎಂದು ಮೋರ್ಚಾದ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು