ಕೆಜಿಎಫ್: ಕಾರ್ ಶೆಡ್ನಲ್ಲಿ ಶೀಟ್ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ನೆರೆ ಮನೆಯ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಫ್ರಾನ್ಸಿಸ್ ಬೆನೆಟೊ ಸೇರಿದಂತೆ ನಾಲ್ಕು ಮಂದಿಯನ್ನು ಆಂಡರ್ಸನ್ಪೇಟೆ ಪೊಲೀಸರು ಗುರುವಾರ ರಾತ್ರಿ ಬಂಧಿಸಿದ್ದಾರೆ.

ಘಟನೆಯಲ್ಲಿ ನೆರೆಮನೆಯ ಜೆಫ್ರಿ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿದೆ. ಬಿ.ಎಂ.ರಸ್ತೆಯ ಸಂತ ಜೋಸೆಫ್ ಚರ್ಚ್ ಬಳಿ ಘಟನೆ ನಡೆದಿದೆ.

ಆರೋಪಿಗಳು ಗಾಯಾಳುವನ್ನು ಥಳಿಸುತ್ತಿದ್ದ ವಿಷಯ ತಿಳಿದ ಸಬ್ ಇನ್ಸ್ಪೆಕ್ಟರ್ ಮುನಿಯಪ್ಪ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಫ್ರಾನ್ಸಿಸ್ ಬೆನೆಟೊ, ಆತನ ಸಂಬಂಧಿಗಳಾದ ರಾಬಿನ್, ಬ್ರಿಟೊ ಮತ್ತು ಫ್ರಾನ್ಸಿಸ್ ಕೆವಿನ್ ಎಂಬುವರನ್ನು ಬಂಧಿಸಿದ್ದಾರೆ. ಫ್ರಾನ್ಸಿಸ್ ಪಾವಿ ಮತ್ತು ವೇಲಾಂಗಿಣಿ ಎಂಬುವರು ನಾಪತ್ತೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.