ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಂತರ ಜಿಲ್ಲಾ ಅಥ್ಲೆಟಿಕ್ಸ್: ಜಿಲ್ಲೆಯ 18 ಕ್ರೀಡಾಳು ಆಯ್ಕೆ

Published 21 ಸೆಪ್ಟೆಂಬರ್ 2023, 16:55 IST
Last Updated 21 ಸೆಪ್ಟೆಂಬರ್ 2023, 16:55 IST
ಅಕ್ಷರ ಗಾತ್ರ

ಕೋಲಾರ: ಮಂಗಳೂರಿನಲ್ಲಿ ಸೆ.‌27 ರಿಂದ 30ರವರೆಗೆ ನಡೆಯಲಿರುವ ಅಂತರ ಜಿಲ್ಲೆಗಳ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಜಿಲ್ಲೆಯಿಂದ 18 ಕ್ರೀಡಾಳು ಆಯ್ಕೆಯಾಗಿದ್ದಾರೆ.

ಈ ಕ್ರೀಡಾಕೂಟವು 14 ರಿಂದ 23 ವಯಸಿನ ಬಾಲಕ, ಬಾಲಕಿಯರಿಗೆ ಏರ್ಪಡಿಸಲಾಗಿದೆ. ಕೋಲಾರ ಜಿಲ್ಲಾ ಅಥ್ಲೆಟಿಕ್‌ ಸಂಸ್ಥೆಯಿಂದ 15 ಬಾಲಕರು ಹಾಗೂ 3 ಬಾಲಕಿಯರು ಪಾಲ್ಗೊಳ್ಳಲಿದ್ದಾರೆ.

ಬಾಲಕರ ವಿಭಾಗದಲ್ಲಿ ಎ.ಅಜಿತ್, ಮಿತೇಶ್ ಸಿ.ಜಿ, ಕೆ.ಬಿ.ಸುಮಂತ್, ಆದಿತ್ಯ, ಮನೋಜ್ ನಾಯಕ್, ಆರ್.ಕಮಲೇಶ್, ನಂದನ್ ಆರ್, ನಂದನ್ ಎಂ.ಸಿ, ಮಾರುತಿ ಎಚ್.ಎಲ್, ಸಾಯಿ ಮೀತೇಶ್ ಎನ್, ರೋಹನ್ ಆರ್, ಉಜ್ವಲ್ ಕೆ,ವಿದ್ಯಾಸಾಗರ್ ಎಂ, ಚೇತನ್ ಆರ್ಯ ಜೆ, ಲಲಿತ್ ಪ್ರಸಾದ್ ಆರ್. ಹಾಗೂ ಬಾಲಕಿಯರ ವಿಭಾಗದಲ್ಲಿ ಅನಿತಾ ವಿ, ಅಂಜಲಿ ಡಿ.ಎನ್ ಹಾಗೂ ಭೂಮಿಕಾ ವಿ‌ ಭಾಗವಹಿಸುತ್ತಿದ್ದಾರೆ. ಸೆ.26ರಂದು ತೆರಳಲಿದ್ದಾರೆ ಎಂದು ಸಂಸ್ಥೆ ಅಧ್ಯಕ್ಷ ಎನ್.ಮುನಿಯಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಆರ್.ರಾಘವೇಂದ್ರ, ಗೌರವಾಧ್ಯಕ್ಷ ಎಚ್.ಜಗನ್ನಾಥನ್, ಉಪಾಧ್ಯಕ್ಷ ಗೌಸ್‍ಖಾನ್, ಕಾರ್ಯದರ್ಶಿ ರಾಜೇಶ್ ಬಾಬು ಆರ್, ಕೆ.ಜಿ.ಎಫ್ ರಾಮು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT