ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ವಚನಗಳಿಂದ ಸಮಾಜದಲ್ಲಿ ಜಾಗೃತಿ

Last Updated 3 ಮೇ 2022, 14:37 IST
ಅಕ್ಷರ ಗಾತ್ರ

ಕೋಲಾರ: ‘ವಚನಗಳ ಮೂಲಕ ಅಸಮಾನತೆ, ಅಸ್ಪೃಶ್ಯತೆ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿ ಸಹಬಾಳ್ವೆಗೆ ಮಾರ್ಗದರ್ಶನ ನೀಡಿದ ಬಸವಣ್ಣನವರ ಆದರ್ಶವನ್ನು ಪ್ರತಿಯೊಬ್ಬರೂ ಪಾಲಿಸಬೇಕು’ ಎಂದು ರೋಟರಿ ಸೆಂಟ್ರಲ್ ಅಧ್ಯಕ್ಷ ಸಿಎಂಆರ್ ಶ್ರೀನಾಥ್ ಹೇಳಿದರು.

ಇಲ್ಲಿ ಮಂಗಳವಾರ ಭಾರತ ಸೇವಾದಳ ಕಚೇರಿಯಲ್ಲಿ ನಡೆದ ಬಸವೇಶ್ವರ ಜಯಂತಿಯಲ್ಲಿ ಮಾತನಾಡಿ, ‘ಬಸವಣ್ಣನವರು ಮಹಿಳೆಯರಿಗೆ ಹಕ್ಕುಗಳ ಕುರಿತು ಅರಿವು ಮೂಡಿಸಿ ಧಾರ್ಮಿಕ ಸ್ವಾತಂತ್ರ್ಯ ನೀಡಿ, ಸಮಾಜದಲ್ಲಿನ ಅಂಧಕಾರ ಹೋಗಲಾಡಿಸಲು ಶ್ರಮಿಸಿದರು’ ಎಂದು ಬಣ್ಣಿಸಿದರು.

‘ಬುದ್ದ, ಬಸವ, ಅಂಬೇಡ್ಕರ್ ಸಮಾನತೆಯ ತ್ರಿಮೂರ್ತಿಗಳು. ಈ ಮೂವರ ಚಿಂತನೆಯೂ ಒಂದೇ. ಮಹಿಳೆಯರಿಗೆ ಪ್ರಾತಿನಿಧ್ಯದ ಕುರಿತು ಬುದ್ದ ಪ್ರತಿಪಾದಿಸಿದರು, ಬಸವಣ್ಣ ಧಾರ್ಮಿಕ ಸ್ವಾತಂತ್ರ್ಯ ನೀಡಿ ಮಹಿಳೆಯರಿಗೆ ಲಿಂಗಧಾರಣೆ ಮಾಡಿ ಸಮಾಜಕ್ಕೆ ಆದರ್ಶವಾದರು. 20ನೇ ಶತಮಾನದಲ್ಲಿ ಅಂಬೇಡ್ಕರ್ ಸಮಾನ ಹಕ್ಕುಗಳನ್ನು ಒದಗಿಸಲು ಹೋರಾಟ ನಡೆಸಿದರು’ ಎಂದು ಭಾರತ ಸೇವಾದಳ ಜಿಲ್ಲಾ ಅಧ್ಯಕ್ಷ ಕೆ.ಎಸ್.ಗಣೇಶ್ ತಿಳಿಸಿದರು.

‘ಸಾವಿತ್ರಿ ಬಾಪುಲೆ, ಜ್ಯೋತಿ ಬಾಪುಲೆ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇಂದಿನ ಐಪಿಎಸ್ ಕಾಯ್ದೆಗಳು 12ನೇ ಶತಮಾನದಲ್ಲಿನ ಬಸವಣ್ಣನವರ ಕೊಲ ಬೇಡ, ಹುಸಿಯ ನುಡಿಯಲು ಬೇಡ ಎಂಬ ವಚನದಲ್ಲಿ ಅಡಕವಾಗಿವೆ. ಅವರ ಅನುಭವ ಮಂಟಪವೇ ಇಂದಿನ ಲೋಕಸಭೆ, ವಿಧಾನಸಭೆಯಾಗಿದೆ. ಇಲ್ಲಿ ಎಲ್ಲಾ ಜಾತಿ ಧರ್ಮಗಳಿಗೂ ಅವಕಾಶವಿದೆ’ ಎಂದರು.

‘ಬುದ್ದ, ಬಸವಣ್ಣ, ಅಂಬೇಡ್ಕರ್ ಅವರ ಹಾದಿಯಲ್ಲಿ ಸಮಾಜ ನಡೆಯಬೇಕಿದೆ. ಶಾಲೆಗಳಲ್ಲಿ ವಚನ ಸಾಹಿತ್ಯವನ್ನು ಭಾರತ ಸೇವಾದಳದಿಂದ ವಿತರಿಸುವ ಕೆಲಸವಾಗಲಿ’ ಎಂದು ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಅಪ್ಪಿ ನಾರಾಯಣಸ್ವಾಮಿ ಸಲಹೆ ನೀಡಿದರು.

ದಾರಿದೀಪ: ‘12 ಜ್ಯೋತಿರ್ಲಿಂಗಗಳಿರುವ ಕ್ಷೇತ್ರಗಳಲ್ಲೂ ಬಸವ ಪೀಠಗಳಿವೆ. ಬಸವಣ್ಣನವರ ಅನುಯಾಯಿಗಳು ಅನ್ನದಾನ, ವಿದ್ಯಾದಾನದ ಮೂಲಕ ಅವರ ಆದರ್ಶ ಪಾಲಿಸುತ್ತಿದ್ದಾರೆ. ವಿದೇಶದಲ್ಲೂ ಬಸವ ತತ್ವಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಸುಂದರ, ನೆಮ್ಮದಿಯ ಸಮಾಜ ನಿರ್ಮಾಣಕ್ಕೆ ಬಸವಣ್ಣರ ವಚನಗಳು ದಾರಿದೀಪ’ ಎಂದು ಭಾರತ ಸೇವಾದಳ ಜಿಲ್ಲಾ ಕಾರ್ಯದರ್ಶಿ ಸುಧಾಕರ್ ಅಭಿಪ್ರಾಯಪಟ್ಟರು.

ಸೇವಾದಳ ಸಂಘಟಕ ದಾನೇಶ್, ತಾಲ್ಲೂಕು ಉಪಾಧ್ಯಕ್ಷ ಸಂಪತ್, ಮುಖಂಡರಾದ ಚಲಪತಿ, ಮುನಿವೆಂಕಟ ಯಾದವ್, ಕೆ.ಜಯದೇವ್, ಮಂಜುಳಾ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT