ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಗಾರಪೇಟೆ | 27 ವಾರ್ಡ್‌ಗಳಲ್ಲಿ ಸ್ವಚ್ಛತಾ ಅಭಿಯಾನ

Published : 19 ಸೆಪ್ಟೆಂಬರ್ 2024, 14:24 IST
Last Updated : 19 ಸೆಪ್ಟೆಂಬರ್ 2024, 14:24 IST
ಫಾಲೋ ಮಾಡಿ
Comments

ಬಂಗಾರಪೇಟೆ: ಜಿಲ್ಲೆಯಲ್ಲಿ ಮಾದರಿ ಪುರಸಭೆ ಎನಿಸಿಕೊಂಡ ಬಂಗಾರಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಡೆಂಗಿಜ್ವರ ಸೇರಿದಂತೆ ಇನ್ನಿತರ ಮಾರಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಪಟ್ಟಣದ 27 ವಾರ್ಡ್‌ಗಳಲ್ಲಿ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಗಿದೆ.

ಪುರಸಭೆ ಅಧ್ಯಕ್ಷ ಗೋವಿಂದ ಮಾತನಾಡಿ, ವಾರ್ಡ್‌ಗಳಲ್ಲಿ ಅನೈರ್ಮಲ್ಯದಿಂದ ಕೂಡಿದ ಚರಂಡಿಗಳನ್ನು ಶುಚಿಗೊಳಿಸಿದ್ದೇವೆ. ಇದೇ ರೀತಿ ಪ್ರತಿ ವಾರ್ಡ್‌ನಲ್ಲೂ ಸ್ವಚ್ಛ ಅಭಿಯಾನ ಕೈಗೊಳ್ಳುತ್ತೇವೆ. ಜನರು ಪಟ್ಟಣದ ಎಲ್ಲೆಂದರಲ್ಲಿ ಕಸ ಬಿಸಾಡಬಾರದು. ಇದರಿಂದ ಕಸ ಬಿಸಾಡುವ ಸ್ಥಳವು ರೋಗ ಹರಡುವ ತಾಣವಾಗಿ ಮಾರ್ಪಡುತ್ತದೆ ಅಷ್ಟೇ ಅಲ್ಲದೆ ಪರಿಸರಕ್ಕೂ ಮಾರಕವಾಗಲಿದೆ ಎಂದರು. 

ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ ಮಾತನಾಡಿ, ಪಟ್ಟಣದ 27 ವಾರ್ಡ್‌ಗಳಲ್ಲೂ ಸ್ವಚ್ಛತೆಗೆ ಆದ್ಯತೆ ನೀಡಲಾದ್ದು, ಎಲ್ಲ ಕಡೆ ಬ್ಲೀಚಿಂಗ್ ಪುಡಿ ಹಾಕಿಸಿ ಸೊಳ್ಳೆಗಳು ಸೇರಿದಂತೆ ಇನ್ನಿತರ ಕೀಟಗಳನ್ನು ನಾಶಪಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಈಗ ಗಾಳಿ ಜಾಸ್ತಿ ಇರುವುದರಿಂದ ಫಾಗಿಂಗ್ ಮಾಡಲು ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ ಫಾಗಿಂಗ್ ಮಾಡಿಸಲಾಗುವುದು ಎಂದರು.

ಪುರಸಭೆ ಸದಸ್ಯ ಎಸ್.ವೆಂಕಟೇಶ್ ಮಾತನಾಡಿದರು.

ಈ ವೇಳೆ ಶಾಂತಿನಗರದ ಪುರಸಭೆ ಉಪಾಧ್ಯಕ್ಷ ಚಂದ್ರವೇಣಿ ಮಂಜುನಾಥ, ಸದಸ್ಯರಾದ ರತ್ನಮ್ಮ, ತಿಮ್ಮಯ್ಯ, ಕಿಟ್ಟಣ್ಣ ಪುರಸಭೆ ಅಧಿಕಾರಿ ಸಂತೋಷ್, ಗೋವಿಂದರಾಜು, ಪೌರಕಾರ್ಮಿಕರು ಭಾಗವಹಿಸಿದ್ದರು.

ಬಂಗಾರಪೇಟೆ ಪಟ್ಟಣದ ಸ್ವಚ್ಛತಾ ಅಭಿಯಾನದ ಅಂಗವಾಗಿ ಶಾಂತಿನಗರದಿಂದ ಪುರಸಭೆ ಅಧ್ಯಕ್ಷ ಗೋವಿಂದ ಎಂ ನೇತೃತ್ವದಲ್ಲಿ ಸ್ವಚ್ಛತೆಯನ್ನು ಮಾಡಿದರು.
ಬಂಗಾರಪೇಟೆ ಪಟ್ಟಣದ ಸ್ವಚ್ಛತಾ ಅಭಿಯಾನದ ಅಂಗವಾಗಿ ಶಾಂತಿನಗರದಿಂದ ಪುರಸಭೆ ಅಧ್ಯಕ್ಷ ಗೋವಿಂದ ಎಂ ನೇತೃತ್ವದಲ್ಲಿ ಸ್ವಚ್ಛತೆಯನ್ನು ಮಾಡಿದರು.

ಪುರಸಭೆಯ ನೂತನವಾಗಿ ಅಧ್ಯಕ್ಷರಾಗಿರುವ ಗೋವಿಂದ ಹಾಗೂ ಮುಖ್ಯಾಧಿಕಾರಿ ಸತ್ಯನಾರಾಯಣ ರವರು ಪಟ್ಟಣದ 27 ವಾರ್ಡ್‌ಗಳಲ್ಲಿ ಸಹ ಪ್ರತಿದಿನ ಒಂದೊಂದು ವಾರ್ಡ್ ನಲ್ಲಿ ಸ್ವಚ್ಚತಾ ಅಭಿಯಾನವನ್ನು ಹಮ್ಮಿಕೊಂಡಿದ್ದು ಸ್ವಚ್ಚತೆ ಮಾಡುತ್ತಿರುವುದು ಹಾಗೂ ಪಟ್ಟಣದ ಕಾರಹಳ್ಳಿ ವೃತ್ತದಲ್ಲಿ ಐ ಮಸ್ಟ್ ದೀಪ ಕೆಳಗೆ ಬಿದ್ದು ಹೊಡೆದು ಹೋಗಿತ್ತು ತಕ್ಷಣ ನೂತನ ಅಧ್ಯಕ್ಷರು ಮತ್ತು ಅಧಿಕಾರಿಗಳು ಮೂರು ದಿನಗಳಲ್ಲಿ ಸರಿಪಡಿಸಿದ್ದಾರೆ ಇದರಿಂದ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರಾಜ್ಯದ ಹಲವು ಕಡೆ ಡೆಂಗ್ಯಿ ಜ್ವರ ಕಾಡುತ್ತಿದೆ.ಇದರಿಂದ ಹೆಚ್ಚುತ್ತಿರುವ ಪುರಸಭೆ ಪ್ರತಿದಿನ ಒಂದೊಂದು ವಾರ್ಡ್ಗಳಲ್ಲಿ ಒಂದು ತಿಂಗಳು ಪಟ್ಟಣದಾದ್ಯಂತ ಸ್ವಚ್ಛತಾ ಅಭಿಯಾನದ ಅಂಗವಾಗಿ ಶಾಂತಿನಗರದಿಂದ ಪುರಸಭೆ ಅಧ್ಯಕ್ಷ ಗೋವಿಂದ ಎಂ ನೇತೃತ್ವದಲ್ಲಿ ಪೌರ ಕಾರ್ಮಿಕರು ಸ್ವಚ್ಚತೆಯನ್ನು ಮಾಡುವುದರ ಮೂಲಕ ನಾಗರಿಕರಲ್ಲಿ ಅರಿವು ಮೂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT