ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಳಬಾಗಿಲು: ಕೆರೆಯ ತೂಬಿಗೆ ಸಿಮೆಂಟ್ ಮೋಲ್ಡಿಂಗ್

Published 14 ಜೂನ್ 2024, 12:40 IST
Last Updated 14 ಜೂನ್ 2024, 12:40 IST
ಅಕ್ಷರ ಗಾತ್ರ

ಮುಳಬಾಗಿಲು: ತಾಲ್ಲೂಕಿನ ನಂಗಲಿ ದೊಡ್ಡ ಕೆರೆಯ ತೂಬಿನಲ್ಲಿ ವ್ಯರ್ಥವಾಗಿ ಹರಿದು ಹೋಗುತ್ತಿದ್ದ ನೀರನ್ನು ಶುಕ್ರವಾರ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಸಿಮೆಂಟ್ ಮೋಲ್ಡಿಂಗ್ ಪದ್ಧತಿಯಿಂದ ನಿಲ್ಲಿಸಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಮಳೆಯಿಂದಾಗಿ ತುಂಬಿ ಹರಿದಿದ್ದ ಕೆರೆಯಲ್ಲಿ ಕೆರಸಿಮಂಗಲ ಕಡೆಗೆ ಇರುವ ತೂಬಿನಿಂದ ನೀರು ಸೋರಿಕೆಯಾಗಲಾರಂಭಿಸಿತ್ತು. ಭಾರೀ ಪ್ರಮಾಣದಲ್ಲಿ ಪೋಲಾಗುತ್ತಿದ್ದ ನೀರನ್ನು ನಿಲ್ಲಿಸಲು ಸಾರ್ವಜನಿಕರು ಮರಳಿನ ಮೂಟೆಗಳನ್ನು ಹಾಕಿ ನಿಲ್ಲಿಸುವ ಪ್ರಯತ್ನ ಮಾಡಿದ್ದರು. ಆದರೆ ಆಳವಾದ ಕೆರೆಯ ನೀರಿನಲ್ಲಿ ಮುಳುಗಿ ತೂಬನ್ನು ಸರಿ ಪಡಿಸಲು ಆಗಿರಲಿಲ್ಲ. ನಾಲ್ಕು  ವರ್ಷಗಳಿಂದಲೂ ನೀರು ತೂಬಿನಿಂದ ಹರಿದು ಹೋಗುತ್ತಿತ್ತು. ಈ ಕುರಿತು ‘ಕೆರೆಯಿಂದ ಪೋಲಾಗುತ್ತಿರುವ ನೀರು’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಏ. 1ರಂದು ಸುದ್ದಿ ಪ್ರಕಟವಾಗಿತ್ತು.

ಇತ್ತೀಚೆಗೆ ಕೆರೆಯ ನೀರು ಕಡಿಮೆಯಾಗಿತ್ತು. ಹಾಗಾಗಿ, ಶುಕ್ರವಾರ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಾದ ಹರಿಕೃಷ್ಣ, ಪ್ರಶಾಂತ್, ಪ್ರಸನ್ನ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಸಿಮೆಂಟ್ ಮೋಲ್ಡಿಂಗ್ ಮೂಲಕ ತೂಬನ್ನು ದುರಸ್ತಿಗೊಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT