ಕೋಲಾರ: ‘ರಾಜ್ಯ ಕಾಂಗ್ರೆಸ್ ಸರ್ಕಾರ ಜನರ ಜೇಬಿನಿಂದ ನೇರವಾಗಿ ಹಣ ಪಡೆಯುತ್ತಿರುವ ಅತಿ ಭ್ರಷ್ಟ ಸರ್ಕಾರವಾಗಿದೆ. ಇಡೀ ದೇಶದಲ್ಲಿ ಇಂಥ ಕೆಟ್ಟ ಸರ್ಕಾರ ಮತ್ತೊಂದಿಲ್ಲ. ಅಧಿಕಾರದಲ್ಲಿ ಮುಂದುವರಿಯಲು ಇವರಿಗೆ ಯಾವುದೇ ನೈತಿಕತೆ ಇಲ್ಲ’ ಎಂದು ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಕಳೆದ 11 ವರ್ಷಗಳಲ್ಲಿ ದೇಶ ಮೆಚ್ಚುವಂಥ ಸಾಧನೆ ಮಾಡಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಶೂನ್ಯ ಅಂಕ ನೀಡಿ ಟೀಕಿಸಿರುವುದು ಇಡೀ ರಾಜ್ಯಕ್ಕೆ ಅಗೌರವ ತೋರಿದಂತಾಗಿದೆ. ಕಾಂಗ್ರೆಸ್ನವರ ಮನಸ್ಥಿತಿಯೇ ಹೀಗೆ. ಇಡೀ ದೇಶದಲ್ಲಿ ಶೂನ್ಯ ಸಾಧನೆ ಮಾಡಿದ ಯಾವುದಾದರೂ ರಾಜ್ಯ ಸರ್ಕಾರವಿದ್ದರೆ ಅದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ’ ಎಂದು ಹರಿಹಾಯ್ದರು.

‘ಆವಿಷ್ಕಾರ, ತಂತ್ರಜ್ಞಾನ, ಉದ್ಯಮ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿರುವ ಹಾಗೂ ಏಳೂವರೆ ಕೋಟಿ ಜನಸಂಖ್ಯೆಯಿರುವ ರಾಜ್ಯದ ಪ್ರತಿನಿಧಿಯಾಗಿ ಸಿದ್ದರಾಮಯ್ಯ ಈ ರೀತಿ ಮಾತನಾಡಿರುವುದು ಸರಿಯಲ್ಲ. ವೈಯಕ್ತಿಕವಾಗಿ ಏನಾದರೂ ಮಾತನಾಡಿಕೊಳ್ಳಲಿ. ಆದರೆ, ಮುಖ್ಯಮಂತ್ರಿಯಂಥ ಜವಾಬ್ದಾರಿ ಸ್ಥಾನದಲ್ಲಿ ಮಾತನಾಡಿರುವುದನ್ನು ನಾನು ಖಂಡಿಸುತ್ತೇನೆ’ ಎಂದರು.

‘ವಾಲ್ಮೀಕಿ ಅಭಿವೃದ್ಧಿ ನಿಗಮದ ನಡೆದಿರುವ ಹಗರಣವನ್ನು ಸ್ವತಃ ಮುಖ್ಯಮಂತ್ರಿ ಒಪ್ಪಿಕೊಂಡಿದ್ದಾರೆ. ಅವರ ಸುಪರ್ದಿಯಲ್ಲಿರುವ ಆರ್ಥಿಕ ಇಲಾಖೆಯೇ ಭಾಗಿಯಾಗಿದೆ. ಇದೇನು ಸರ್ಕಾರ ಹೊರ ತಂದ ಹಗರಣ ಅಲ್ಲ. ತೊಂದರೆಗೆ ಒಳಗಾದ ಅಧಿಕಾರಿಯೇ ವಿಚಾರ ತಿಳಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಜಾನೆಯಿಂದ ನೇರವಾಗಿ ಕಾಂಗ್ರೆಸ್ ಪಕ್ಷಕ್ಕೆ, ವಿವಿಧ ಕಂಪನಿಗಳಿಗೆ ಹಣ ವರ್ಗಾವಣೆ ಆಗಿದೆ. ಮೈಸೂರಿನ ‘ಮುಡಾ’ ವಿಚಾರವಾಗಿಯೂ ಆರೋಪ ಸಾಬೀತಾಗಿ ರಾಜೀನಾಮೆ ಕೊಡಬೇಕಾರ ಪರಿಸ್ಥಿತಿ ಇದ್ದರೂ ಹಟಮಾರಿತನ ಪ್ರದರ್ಶಿಸುತ್ತಿದ್ದಾರೆ. ಇ.ಡಿ ಸಂಸ್ಥೆಯನ್ನು ಸ್ಥಾಪಿಸಿದ್ದೇ ಕಾಂಗ್ರೆಸ್ ಸರ್ಕಾರ. ಈಗ ದಾಳಿ ನಡೆಸಿದ ಆ ಸಂಸ್ಥೆಯನ್ನೇ ಟೀಕಿಸುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಆರ್ಸಿಬಿ ತಂಡದ ವಿಜಯೋತ್ಸವ ವೇಳೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಪ್ರಕರಣದಲ್ಲಿ ಸಂಪೂರ್ಣ ಜವಾಬ್ದಾರಿ ಅಧಿಕಾರಿಗಳದ್ದಲ್ಲ. ರಾಜ್ಯ ಸರ್ಕಾರ ಎರಡು ಕಡೆ ಕಾರ್ಯಕ್ರಮ ಆಯೋಜನೆ ಮಾಡಿದ್ದೇ ಮೊದಲನೇ ತಪ್ಪು. ಇವರ ಪ್ರಚಾರದ ಗೀಳಿಗೆ 11 ಮಂದಿ ಅಮಾಯಕರು ಬಲಿಯಾಗಿದ್ದಾರೆ. ಹೀಗಾಗಿ, ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರು ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

‘ಕ್ರೀಡಾಭಿಮಾನಿಯಾಗಿರುವ ರಾಜ್ಯಪಾಲರು ಸರ್ಕಾರದ ಆಹ್ವಾನದ ಮೇರೆಗೆ ತೆರಳಿದ್ದಾರೆ. ಮುಖ್ಯಮಂತ್ರಿಯೇ ಅದನ್ನು ಹೇಳಿದ್ದಾರೆ’ ಎಂದರು.

‘ಜಾತಿಗಣತಿ ಮಾಡುವ ಅಧಿಕಾರವಿಲ್ಲದಿದ್ದರೂ ರಾಜ್ಯ ಸರ್ಕಾರ ರಾಜಕೀಯ ದುರುದ್ದೇಶದಿಂದ ಸಮೀಕ್ಷೆ ನಡೆಸಿ ವರದಿ ನೀಡಿದೆ. ಗ್ಯಾರಂಟಿ ಯೋಜನೆಗಳ ವೈಫಲ್ಯದಿಂದ ಶೂನ್ಯ ಸಾಧನೆಯ ಸರ್ಕಾರ ಎಂಬ ಪಟ್ಟ ಹೊಂದಿರುವ ಕಾಂಗ್ರೆಸ್ನವರಿಗೆ ಸ್ವಲ್ಪ ಮಟ್ಟಿನ ಜ್ಞಾನ ಬಂದಿದೆ. ತಪ್ಪಿನ ಅರಿವು ಆಗಿದೆ. ಇದೇ ವರದಿ ಸರಿಪಡಿಸುವ ಬದಲಿಗೆ ಕೇಂದ್ರ ಸರ್ಕಾರ ಮಾಡಲು ಹೊರಟಿರುವ ಸಮೀಕ್ಷೆಗೆ ಸಹಕರಿಸಲಿ’ ಎಂದು ಸಲಹೆ ನೀಡಿದರು.

ಮಾಜಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ‘ಹೆಲಿಕಾಪ್ಟರ್ ಹೊಂದಿರುವವರು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಮಾವು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿ ಪ್ರತಿಭಟನೆಯಲ್ಲಿ ತೊಡಗಿದ್ದರೂ ಇಲ್ಲಿಗೆ ಬಂದು ಸಮಸ್ಯೆ ಆಲಿಸಿಲ್ಲ. ತೋಟಗಾರಿಕೆ ಸಚಿವರು ಮಧ್ಯಾಹ್ನ ಎದ್ದೇಳುತ್ತಾರೆ. ಇವರು ಎಂದಾದರೂ ರೈತರ ಸಮಸ್ಯೆಗೆ ಸ್ಪಂದಿಸಿದ್ದಾರೆಯೇ’ ಎಂದು ಪ್ರಶ್ನಿಸಿದರು.

‘ಕಾಂಗ್ರೆಸ್ ಸರ್ಕಾರ ಬಂದು ಎರಡು ವರ್ಷಗಳಾಗಿದ್ದು ಜಿಲ್ಲೆಯಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ ಹೇಳಲಿ. ನಮ್ಮ ಅವಧಿಯ ಕೆಲಸಗಳಿಗೆ ಭೂಮಿಪೂಜೆ ಮಾಡಲು ಕಾರಿನಲ್ಲಿ ಗಡಾರಿ, ಚನಿಕೆ ಇಟ್ಟುಕೊಂಡು ಓಡಾಡುತ್ತಿದ್ದಾರೆ. ಇಡೀ ಜಿಲ್ಲೆಯಲ್ಲಿ ಎಲ್ಲಾದರೂ 1 ಕಿ.ಮೀ ರಸ್ತೆ ಕಾಮಗಾರಿ ಮಾಡಿದ್ದರೆ ತೋರಿಸಲಿ’ ಎಂದು ಸವಾಲು ಹಾಕಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ಮಾಜಿ ಸಚಿವ ವರ್ತೂರು ಪ್ರಕಾಶ್, ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ, ಮಾಜಿ ಜಿಲ್ಲಾ ಅಧ್ಯಕ್ಷ ಡಾ.ವೇಣುಗೋಪಾಲ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್, ರಾಜು, ಮಾಧ್ಯಮ ಪ್ರಮುಖ್ ಎನ್.ಎಸ್.ಪ್ರವೀಣ್ ಗೌಡ, ಸಹ ಪ್ರಮುಖ್ ಕೆಂಬೋಡಿ ನಾರಾಯಣಸ್ವಾಮಿ, ಮುಖಂಡ ಮಾಗೇರಿ ನಾರಾಯಣಸ್ವಾಮಿ ಇದ್ದರು.

ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಇಲ್ಲಿಯವರೆ ಉತ್ತಮವಾಗಿದೆ. ಮುಂದೆಯೂ ಜತೆಜತೆಯಾಗಿ ಹೋಗುತ್ತೇವೆ. ಎಲ್ಲಾ ಚುನಾವಣೆಗಳನ್ನು ಜೊತೆಯಲ್ಲಿ ಎದುರಿಸುತ್ತೇವೆ
ಡಾ.ಸಿ.ಎನ್.ಅಶ್ವತ್ಥನಾರಾಯಣ ಶಾಸಕ

‘ಶೇ 25 ಕಮಿಷನ್ ಪಡೆದ ಶಾಸಕ ಎಂಎಲ್ಸಿ’

‘ನಾನು ಬಿಜೆಪಿ ಸೇರಿದ ವೇಳೆ ಮುಖ್ಯಮಂತ್ರಿ ಆಗಿದ್ದ ಬಸವರಾಜ ಬೊಮ್ಮಾಯಿ ಅವರ ಬಳಿ ಕೋಲಾರ ಅಭಿವೃದ್ಧಿಗಾಗಿ ಎರಡು ಹಂತದಲ್ಲಿ ₹ 50 ಕೋಟಿ ಅನುದಾನ ತಂದು ಲ್ಯಾಂಡ್ ಆರ್ಮಿ ಹಾಗೂ ನಿರ್ಮಿತಿ ಕೇಂದ್ರಕ್ಕೆ ನೀಡಿದ್ದೆ. ಆ ಬಳಿಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತು. ಆಗ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಗುತ್ತಿಗೆದಾರರ ಬಳಿ ಶೇ 25 ಕಮಿಷನ್ ಪಡೆದು ತಮಗೆ ಬೇಕಾದವರಿಗೆ ಕಾಮಗಾರಿ ನೀಡಿದ್ದಾರೆ. ಬೇಕಿದ್ದರೆ ಅವರ ಹೆಸರೂ ಹೇಳುವೆ’ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಗಂಭೀರ ಆರೋಪ ಮಾಡಿದರು. ಇದನ್ನು ಸಮರ್ಥಿಸಿ ಮಾಜಿ ಸಂಸದ ಎಸ್.ಮುನಿಸ್ವಾಮಿ ‘ವರ್ತೂರು ಪ್ರಕಾಶ್ ತಂದ ಹಣವನ್ನು ಶಾಸಕರು ಕಮಿಷನ್ ಪಡೆದು ಕೆಲಸ ಮಾಡಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಈಗ ಪದೇಪದೇ ಲೋಕಾಯುಕ್ತ ದಾಳಿ ಟ್ರ್ಯಾಪ್ ನಡೆಯುತ್ತಿವೆ. ನಮ್ಮ ಅವಧಿಯಲ್ಲಿ ಈ ರೀತಿ ದಾಳಿ ನಡೆದಿರಲಿಲ್ಲ’ ಎಂದರು

ನಮ್ಮ ಸರ್ಕಾರಕ್ಕೆ ಹೋಲಿಕೆ ಬೇಡ

‘ರಾಜ್ಯ ಬಿಜೆಪಿ ಸರ್ಕಾರಕ್ಕೂ ಕಾಂಗ್ರೆಸ್ ಸರ್ಕಾರಕ್ಕೂ ಹೋಲಿಕೆ ಮಾಡಬೇಡಿ. ಕೋಲಾರ ಜಿಲ್ಲೆಗೆ ನಮ್ಮ ಅವಧಿಯಲ್ಲಿ ಏನಾಗಿದೆ? ಈಗಿನ ಸರ್ಕಾರದ ಅವಧಿಯಲ್ಲಿ ಏನಾಗಿದೆ ಹೋಲಿಸಿ ನೋಡಿ. ಬೇಕಾದರೆ ಇನ್ನೂ ಮೂರು ವರ್ಷ ಕಾದು ನೋಡಿ. ಮಾವು ಬೆಳೆಗಾರರು ಸಂಕಷ್ಟದಲ್ಲಿದ್ದರೂ ಕ್ರಮಕ್ಕೆ ಮುಂದಾಗುತ್ತಿಲ್ಲ. ತೋಟಗಾರಿಕೆ ಸಚಿವರು ಎಲ್ಲಿದ್ದಾರೆ ಎಂಬುದನ್ನು ಹುಡುಕಬೇಕಾದ ಪರಿಸ್ಥಿತಿ ಇದೆ. ಪ್ರತಿದಿನ ರೈತರ ವಿರೋಧಿಯಾಗಿ ಕೆಲಸ ಮಾಡುತ್ತಿದೆ’ ಎಂದು ಡಾ.ಅಶ್ವತ್ಥನಾರಾಯಣ ಗುಡುಗಿದರು.

ಡಾ.ಅಶ್ವತ್ಥನಾರಾಯಣ ಹೇಳಿದ ಕೇಂದ್ರ ಬಿಜೆಪಿ ಸರ್ಕಾರದ ಪ್ರಮುಖ ಸಾಧನೆಗಳೇನು?

* ನಾವು ಅಧಿಕಾರಕ್ಕೆ ಬರುವ ಮುನ್ನ ಬಡತನ ಪ್ರಮಾಣ ಶೇ 29ಕ್ಕೆ ತಲುಪಿತ್ತು. ಕಳೆದ 11 ವರ್ಷಗಳಲ್ಲಿ ಆ ಪ್ರಮಾಣವನ್ನು ಶೇ 11ಕ್ಕೆ ಇಳಿಸಿದ್ದೇವೆ.

10 ವರ್ಷಗಳಲ್ಲಿ ನಾಲ್ಕು ಕೋಟಿ ಮನೆ ನಿರ್ಮಿಸಿ ಕೊಟ್ಟಿದ್ದೇವೆ.

* ಯುಪಿಎ ಅವಧಿಯ 10 ವರ್ಷಗಳಲ್ಲಿ 2 ಕೊಟಿ ಉದ್ಯೋಗ ನೀಡಲಾಗಿತ್ತು. ಎನ್ಡಿಎ ಅವಧಿಯ 11 ವರ್ಷಗಳಲ್ಲಿ 17 ಕೋಟಿ ಉದ್ಯೋಗ ನೀಡಲಾಗಿದೆ. ಕೌಶಲಕ್ಕೆ ಒತ್ತು ನೀಡಲಾಗಿದೆ.

* ದೇಶದ ಸುರಕ್ಷತೆ ವಿಚಾರದಲ್ಲಿ ಭಯೋತ್ಪಾದಕರಿಗೆ ದೇಶ ವಿರೋಧಿಗಳಿಗೆ ಮೋದಿ ಸ್ಪಷ್ಟ ಸಂದೇಶ ನೀಡಿದ್ದಾರೆ. ನಮ್ಮ ವಿಚಾರಕ್ಕೆ ಬಂದರೆ ಬಿಡುವುದಿಲ್ಲವೆಂದು ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ್ದಾರೆ. ಅದಕ್ಕೆ ಈಚೆಗೆ ನಡೆದ ಆಪರೇಷನ್ ಸಿಂಧೂರವೇ ಸಾಕ್ಷಿ.

* ಆರ್ಥಿಕ ಶಕ್ತಿಯಲ್ಲಿ 11ನೇ ಸ್ಥಾನದಲ್ಲಿ ಭಾರತ ಈಗ 4ನೇ ಸ್ಥಾನಕ್ಕೇರಿದೆ.

* ದೇಶದಲ್ಲಿ ಡಿಜಿಟಲ್ ಕ್ರಾಂತಿ ನಡೆದಿದೆ.

* ಕೋಲಾರದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ₹ 2 ಸಾವಿರ ಕೋಟಿ ಚೆನ್ನೈ–ಬೆಂಗಳೂರು ಎಕ್ಸ್ಪ್ರೆಸ್ ಕಾರಿಡಾರ್ಗೆ ₹ 6 ಸಾವಿರ ಕೋಟಿ ರೈಲ್ವೆ ಇಲಾಖೆಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ₹ 500 ಕೋಟಿ ಖರ್ಚು ಮಾಡಲಾಗಿದೆ. ಇಎಸ್ಐ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಹಲವಾರು ಕೈಗಾರಿಕೆಗಳು ಬಂದಿವೆ. ಜಲಜೀವನ ಮಿಷನ್ ಅಡಿ ಕುಡಿಯುವ ನೀರು ಪೂರೈಕೆಗೆ ಜಿಲ್ಲೆಗೆ ₹ 2180 ಕೋಟಿ ಸಿಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.