ಬಂಗಾರಪೇಟೆ: ರಸ್ತೆ ಬದಿ, ಮಾರುಕಟ್ಟೆ, ತಳ್ಳು ಗಾಡಿ ವ್ಯಾಪಾರಿ, ಹಣ್ಣಿನಂಗಡಿ ಹೀಗೆ ಎಲ್ಲಿ ನೋಡಿದರೂ ಸೀತಾಫಲ ಹಣ್ಣುಗಳದೇ ಕಾರುಬಾರು.

ಗ್ರಾಮೀಣ ಭಾಗದವರು ಅರಣ್ಯ ಪ್ರದೇಶ, ಹೊಲದ ಅಂಚು, ಗುಡ್ಡುಗಾಡು ಪ್ರದೇಶದಲ್ಲಿ ಬೆಳೆಯುವ ಸೀತಾಫಲ ಹಣ್ಣನ್ನು ಸಂಗ್ರಹಿಸಿ ಮಾರಾಟ ಮಾಡುವ ಮೂಲಕ ಉತ್ತಮ ಆದಾಯ ಗಳಿಸುತ್ತಿದ್ದಾರೆ.

ಕಾಡಂಚಿನ ಜನತೆಗೆ ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ನೈಸರ್ಗಿಕವಾಗಿ ಸೀತಾಫಲ ಹಣ್ಣು ಹೇರಳವಾಗಿ ಸಿಗುತ್ತವೆ. ಹಾಗಾಗಿ ಜನತೆ ಆ ಹಣ್ಣುಗಳನ್ನು ಸಂಗ್ರಹಿಸಿ ಸ್ಥಳೀಯ ವ್ಯಾಪಾರಿಗಳಿಗೆ ಮಾರಾಟ ಮಾಡಿ ಜೀವಾನೋಪಾಯ ನಡೆಸುತ್ತಿದ್ದಾರೆ.

ಮುಂಜಾನೆಯಿಂದಲೇ ಮಹಿಳೆಯರು, ದನ ಮತ್ತು ಕುರಿಗಾಹಿಗಳು ಅರಣ್ಯದಲ್ಲಿ ಬೆಳೆದಿರುವ ಸೀತಾಫಲವನ್ನು ಬುಟ್ಟಿಗಳಲ್ಲಿ ಸಂಗ್ರಹಿಸಿ ಒಂದು ಬುಟ್ಟಿ ₹600ಕ್ಕೆ ಸ್ಥಳೀಯ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ವ್ಯಾಪಾರಿಗಳು ಬೆಂಗಳೂರು, ಹೈದರಾಬಾದ್ ಮತ್ತು ತಮಿಳುನಾಡು ಸೇರಿದಂತೆ ಮುಂತಾದ ನಗರದಗಳಿಗೆ ರಫ್ತು ಮಾಡುತ್ತಾ, ಗ್ರಾಮೀಣ ಆರ್ಥಿಕತೆಯನ್ನು ಹೆಚ್ಚಿಸುತ್ತಿದೆ.

ಸೀತಾಫಲ ಸಂಗ್ರಹಣೆ ಮತ್ತು ಮಾರಾಟ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮೀಣ ಭಾಗದ ಜನತೆಗೆ ಆರ್ಥಿಕ ಬೆಂಬಲ ನೀಡುವಂತಾಗಿದೆ.

ಸೀತಾಫಲ ಒಣ ಭೂಮಿಯಲ್ಲಿ ಬೆಳೆಯುವ ಹಣ್ಣಾಗಿದ್ದು, ಯಾವುದೇ ರಾಸಾಯನಿಕಗಳ ಬಳಕೆ ಇಲ್ಲದ ಹೆಚ್ಚು ಪೋಷಕಾಂಶಗಳಿರುವ ಹಣ್ಣಾಗಿದೆ.

ಸೀತಾಫಲ ಮಾರಾಟದಿಂದ ಪ್ರತಿ ದಿನ ₹1 ಸಾವಿರ ಸಿಗುವುದರಿಂದ ಮನೆ ಖರ್ಚು ನಿರ್ವಹಿಸಲು ಅನುಕೂಲವಾಗಿದೆ.
ರಾಧಾ ಸೀತಾಫಲ ಸಂಗ್ರಹಿಸುವ ಮಹಿಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.