ಶ್ರೀನಿವಾಸಪುರ:ಪಟ್ಟಣದಲ್ಲಿ ಭಾನುವಾರ ರಾತ್ರಿ ಜನ್ಮಭೂಮಿ ವೇದಿಕೆ ವತಿಯಿಂದ ಶ್ರೀನಿವಾಸಪುರ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಸಕ ಕೆ.ಆರ್.ರಮೇಶ್ ಕುಮಾರ್, ತೆಲುಗು ಚಿತ್ರಗೀತೆಗಳಿಗೆ ದಣಿವರಿಯದೆ ಕುಣಿಯುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗಾಯಕಿ ಮಂಗ್ಲಿ ಅವರ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆ ಸಂದರ್ಭದಲ್ಲಿ ವೇದಿಕೆ ಮೇಲಿದ್ದ ಶಾಸಕ ರಮೇಶ್ ಕುಮಾರ್ ಅವರನ್ನು ಹಾಡೊಂದಕ್ಕೆ ಕುಣಿಯುವಂತೆ ಕೇಳಿಕೊಳ್ಳಲಾಯಿತು. ಅವರು ಮೊದಲು ನಿರಾಕರಿಸಿದರಾದರೂ ಪ್ರೇಕ್ಷಕರಿಂದ ಒತ್ತಾಯ ಹೆಚ್ಚಿದಾಗ ಖ್ಯಾತ ನಟ ಹಾಗೂ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಟಿ.ರಾಮರಾವ್ ಅವರು ನಟಿಸಿದ್ದ ಚಿತ್ರಗಳ ಜನಪ್ರಿಯ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ಅಚ್ಚರಿ ಉಂಟು ಮಾಡಿದರು.
ಪ್ರೇಕ್ಷಕರ ಸಿಳ್ಳು ಹಾಗೂ ಪ್ರೋತ್ಸಾಹದ ನುಡಿಗಳಿಂದ ಉತ್ತೇಜಿತರಾದ ರಮೇಶ್ ಕುಮಾರ್, ಸುಮಾರು ಅರ್ಧ ಗಂಟೆ ಕಾಲ ಬೇರೆ ಬೇರೆ ಹಾಡುಗಳಿಗೆ ಹೆಜ್ಜೆ ಹಾಕಿ ಪ್ರೇಕ್ಷಕರ ಜೋರು ಚಪ್ಪಾಳೆ ಗಿಟ್ಟಿಸಿದರು.