ಗಣಪತಿ ವಿಸರ್ಜನೆ ವೇಳೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುಂದಾಲೋಚನೆ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಗಣೇಶ ಮೂರ್ತಿ ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು. ಡ್ರೋನ್ ಕ್ಯಾಮೆರಾ ಕೂಡ ನಿಗಾ ವಹಿಸಲಿದೆ. ಗಣೇಶ ಮೂರ್ತಿಯ ವಿಸರ್ಜನೆಯಾಗಿ ಅದು ಪುನಃ ಸ್ವಸ್ಥಾನ ಸೇರುವ ತನಕ ಪೊಲೀಸರು ಬೆಂಗಾವಲು ಒದಗಿಸುತ್ತಾರೆ. ವಿಸರ್ಜನೆಗೆ ತೆರಳುವ ಮಾರ್ಗದಲ್ಲಿ ಬರುವಾಗ ಗಣಪತಿ ಮೂರ್ತಿಗೆ ವಿದ್ಯುತ್ ತಂತಿಗಳು ತಗಲುತ್ತದೆಯೇ ಎಂಬುದರ ಬಗ್ಗೆ ಸಂಘಟಕರು ಎಚ್ಚರ ವಹಿಸಬೇಕು. ಪೊಲೀಸರು ಕೂಡ ಮಾರ್ಗದ ಪರಿಶೀಲನೆ ನಡೆಸಲಿದ್ದಾರೆ ಎಂದು ಹೇಳಿದರು.