ಮುಳಬಾಗಿಲು: ತಾಲ್ಲೂಕಿನ ದೇವರಾಯ ಸಮುದ್ರ ವ್ಯಾಪ್ತಿಯಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪಿಸುವ ಕುರಿತು ಪ್ರಸ್ತಾಪ ಆಗಿ ಇನ್ನೇನು ಜಮೀನು ಸ್ವಾಧೀನ ಪಡೆದು ಸರ್ವೆ ಕಾರ್ಯ ನಡೆಯುತ್ತದೆ ಎಂಬ ಹಂತಕ್ಕೆ ಬಂದಿದ್ದ ಯೋಜನೆ ವರ್ಷಗಳೇ ಕಳೆದರೂ ಯಾವುದೇ ಪ್ರಕ್ರಿಯೆ ಪ್ರಾರಂಭವಾಗಿಲ್ಲ. ಕೈಗಾರಿಕೆಗಳು ಸ್ಥಾಪನೆಯಾದರೆ ಉದ್ಯೋಗ ಸಿಗಬಹುದು ಎಂದು ಕನಸು ಕಂಡಿದ್ದ ವಿದ್ಯಾವಂತರ ಕನಸು ನನಸಾಗಿಯೇ ಉಳಿದಿದೆ.

ತಾಲ್ಲೂಕಿನ ದೇವರಾಯ ಸಮುದ್ರದ ಬಳಿ ಮಾಜಿ ಶಾಸಕ ಎಚ್.ನಾಗೇಶ್, ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ 1559 ಎಕರೆ ಪ್ರದೇಶದಲ್ಲಿ ಕೋಲಾರ ತಾಲ್ಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದ ಮಾದರಿಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಯೋಜನೆ ರೂಪಿಸಿದ್ದರು.

ಆದರೆ, ವರ್ಷಗಳು ಕಳೆಯುತ್ತಿದ್ದರೂ ಯಾವುದೇ ಕೈಗಾರಿಕೆಗಳು ಅಥವಾ ಗಾರ್ಮೆಂಟ್ಸ್ ತಲೆ ಎತ್ತದ ಕಾರಣದಿಂದ ಉನ್ನತ ವಿಧ್ಯಾಭ್ಯಾಸ ಪದೆದವರು ಕೇವಲ ₹10-15 ಸಾವಿರಕ್ಕೆ ಖಾಸಗಿ ಕಂಪನಿಗಳಲ್ಲಿ ದುಡಿಯುತ್ತಿದ್ದಾರೆ. ಇದರಿಂದ ತಾಲ್ಲೂಕಿನ ಜನ ಇನ್ನಾದರೂ ಕೈಗಾರಿಕಾ ಪ್ರದೇಶ ಆರಂಭವಾಗಲೇ ಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಮುಳಬಾಗಿಲು ರಾಷ್ಟ್ರೀಯ ಹೆದ್ದಾರಿ 75ಕ್ಕೆ ಹೊಂದಿಕೊಂಡಂತೆ ಇರುವ ದೇವರಾಯ ಸಮುದ್ರದ ಸುತ್ತಮುತ್ತಲಿನ ದೊಡ್ಡಿಗಾನಹಳ್ಳಿ, ಕುರುಬರಹಳ್ಳಿ, ಬೆಟಗೇರಹಳ್ಳಿ ಮತ್ತಿತರರ ಗ್ರಾಮಗಳ ಸುತ್ತಲೂ ಕೈಗಾರಿಕಾ ಪ್ರದೇಶವನ್ನು ಸ್ಥಾಪಿಸಲು ಅಂದಿನ ಸರ್ಕಾರ ಮುಂದಾಗಿತ್ತು. ಭೂಸ್ವಾಧೀನ ಮಾಡಲು ನಿರ್ಧರಿಸಿ ಕೈಗಾರಿಕಾ ಪ್ರದೇಶದ ವ್ಯಾಪ್ತಿಯ ಜಮೀನು ಸರ್ವೆ ಮಾಡಲು ಅಂದಿನ ಅಧಿಕಾರಿಗಳು ಮುಂದಾಗಿದ್ದರು. ಆದರೆ, ಏಕಾಏಕಿ ಕೈಗಾರಿಕಾ ಪ್ರದೇಶ ಸ್ಥಾಪನೆ ವಿಚಾರವೇ ಮರೆತು ಕೆಐಎಡಿಬಿ ಯಾವುದೇ ಚಕಾರವೆತ್ತದೆ ಸುಮ್ಮನ ಇರುವುದನ್ನು ಕಂಡು ತಾಲ್ಲೂಕಿನ ಜನರು ಕೈಗಾರಿಕಾ ಸ್ಥಾಪನೆ ಕುರಿತು ಯಾವುದೇ ಮಾಹಿತಿ ಇಲ್ಲದೆ ಮೌನವಾಗಿದ್ದಾರೆ.

ರಾಜ್ಯ ರಾಜಧಾನಿ ಬೆಂಗಳೂರಿಗೆ ಕೇವಲ 80 ಕಿಲೋಮೀಟರ್ ದೂರದಲ್ಲಿರುವ ಮುಳಬಾಗಿಲು ತಾಲ್ಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ 75 ಹಾಗೂ ಈಚೆಗೆ ಚೆನ್ನೈ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ಬಂಗಾರಪೇಟೆ ಹಾಗೂ ಕೋಲಾರದಲ್ಲಿ ರೈಲ್ವೆ ಸಂಪರ್ಕ ಇರುವುದರಿಂದ ಕೈಗಾರಿಕಾ ಪ್ರದೇಶ ಸ್ಥಾಪಿಸಿದರೆ ಸರಕು ಸಾಗಾಟಕ್ಕೆ ಅನುಕೂಲವಾಗುತ್ತಿತ್ತು. ಈ ವಿಚಾರ ಮನದಲ್ಲಿ ಇಟ್ಟುಕೊಂಡು ಕೈಗಾರಿಕೆಗಳ ಸ್ಥಾಪನೆ ಮಾಡಿದ್ದರೆ ನಿರುದ್ಯೋಗ ಸಮಸ್ಯೆ ನಿಗಲಿದೆ ಎಂದು ಯುವ ಜನರ ಆಗ್ರಹವಾಗಿದೆ.

ಶಾಸಕ ಸಮೃದ್ಧಿ ಮಂಜುನಾಥ್ ಈಚೆಗೆ ವಿಧಾನ ಸೌಧದಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆ ಕುರಿತು ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರಿಸಿದ್ದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ದೇವರಾಯ ಸಮುದ್ರ ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶ ಸ್ಥಾಪನೆ ಪ್ರಸ್ತಾಪ ಅಧಿಸೂಚನೆ ಹೊರಡಿಸಲಾಗುವುದು ಎಂದು ಹೇಳಿದ್ದರು. ಆದರೆ, ಇದುವರೆಗೂ ಪ್ರಕ್ರಿಯೆ ಪ್ರಾರಂಭವಾಗಿಲ್ಲ ಎಂದು ಜನರು ಪ್ರಶ್ನಿಸುವಂತಾಗಿದೆ.

ದುಗ್ಗಸಂದ್ರ ಹೋಬಳಿಯಲ್ಲಿ ನ್ಯಾಷನಲ್ ಇನ್ವೆಸ್ಟ್ ಮೆಂಟ್ ಅಂಡ್ ಮಾನುಫ್ಯಾಕ್ಚರಿಂಗ್ ಜೋನ್( ಎನ್.ಐ.ಎಂ.ಝಡ್) ಸಾವಿರಾರು ಎಕರೆ ಪ್ರದೇಶದಲ್ಲಿ ಸ್ಥಾಪಿಸುವ ಯೋಜನೆಯೂ ನನೆಗುದಿಗೆ ಬಿದ್ದಿದೆ.

ನೆರೆಯ ಆಂಧ್ರಪ್ರದೇಶದಲ್ಲಿ ಕೈಗಾರಿಕಾ ಪ್ರದೇಶ: ಮುಳಬಾಗಿಲು ತಾಲ್ಲೂಕಿಗೆ ಕೇವಲ 18 ಕಿಲೋಮೀಟರ್ ಅಂತರದಲ್ಲಿ ಇರುವ ಆಂಧ್ರಪ್ರದೇಶದ ನಾಲ್ಕು ರಸ್ತೆಗಳು ಬಳಿ ಸುಮಾರು 2 ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶವನ್ನು ಸ್ಥಾಪಿಸಿ ನೂರಾರು ಕೈಗಾರಿಕೆಗಳು, ಗಾರ್ಮೆಂಟ್ಸ್, ಕಂಪನಿಗಳು ತಲೆ ಎತ್ತಿವೆ. ಅಲ್ಲಿನ ಮಹಿಳೆಯರು, ಯುವಕರು ಹಾಗೂ ವಿದ್ಯಾವಂತರಿಗೆ ನಿರುದ್ಯೋಗ ಸಮಸ್ಯೆ ಸ್ವಲ್ಪ ಪ್ರಮಾಣದಲ್ಲಿ ತಗ್ಗಿದೆ. ಇದೇ ರೀತಿಯಲ್ಲಿ ತಾಲ್ಲೂಕಿನಲ್ಲೂ ಪ್ರಾರಂಭವಾಗಬೇಕು ಎಂಬುವುದು ಜನರ ಒತ್ತಾಯವಾಗಿದೆ.

ಉದ್ಯೋಗಕ್ಕಾಗಿ ಆಂಧ್ರಪ್ರದೇಶಕ್ಕೆ ವಲಸೆ: ಆಂಧ್ರಪ್ರದೇಶದ ನಾಲ್ಕು ರಸ್ತೆಗಳ ಬಳಿ ಇರುವ ಗಾರ್ಮೆಂಟ್ಸ್ಗಳಿಗೆ ತಾಲ್ಲೂಕಿನಿಂದ ಪ್ರತಿನಿತ್ಯ ನೂರಾರು ಮಂದಿ ಉದ್ಯೋಗಕ್ಕಾಗಿ ಹೋಗುತ್ತಿದ್ದಾರೆ. ಇದೇ ಗಾರ್ಮೆಂಟ್ಸ್ ಮಾದರಿಯಲ್ಲಿ ಸರ್ಕಾರ ತಾಲ್ಲೂಕಿನಲ್ಲಿ ಸ್ಥಾಪನೆ ಮಾಡಿದ್ದರೆ ಆಂಧ್ರಪ್ರದೇಶಕ್ಕೆ ವಲಸೆ ಹೋಗುವುದನ್ನು ತಪ್ಪಿಸಬಹುದಾಗಿದೆ.

ಪಿಯು ಹೆಚ್ಚು ಅಂಕಗಳಿಂದ ಪಾಸು ಮಾಡಿ ನೀಟ್, ಜೆ.ಇ.ಇ , ಸಿ.ಇ.ಟಿ ಮತ್ತಿತರ ಪರೀಕ್ಷೆ ಬರೆದು ಎಂಜಿನಿಯರಿಂಗ್ ಪದವಿಗೆ ಸೇರುವ ವಿದ್ಯಾರ್ಥಿಗಳು ಪದವಿ ಮುಗಿಸಿದ ನಂತರ ಸೂಕ್ತವಾದ ಕೆಲಸ ಸಿಗದ ಕಾರಣದಿಂದ ಕೆಲವರು ನರಸಾಪುರ, ವೇಮಗಲ್, ಬೆಂಗಳೂರು, ನಾಲ್ಕು ರೋಡ್ಸ್ ಮತ್ತಿತರ ಕಡೆ ಕೇವಲ ₹10-15 ಸಾವಿರಕ್ಕೆ ದುಡಿಯುತ್ತಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮಿಗಳ ಪಾಲು: ಇನ್ನು ದೇವರಾಯ ಸಮುದ್ರದ ಬಳಿ ಕೈಗಾರಿಕಾ ಪ್ರದೇಶ ಸ್ಥಾಪಿಸಲು ಉದ್ದೇಶಿಸಲಾದ ತಕ್ಷಣ ಈಚೆಗೆ ಎಲ್ಲೆಲ್ಲಿ ಸರ್ಕಾರಿ ಗೋಮಾಳ, ಖರಾಬು ಇದೆಯೋ ಅವುಗಳಿಗೆ ಕೆಲವರು 53 ಮತ್ತು 57 ಅರ್ಜಿ ಹಾಕಿಕೊಂಡಿದ್ದರೆ. ಮತ್ತೆ ಕೆಲವರು ಕೇವಲ ಸ್ವಾಧೀನದಲ್ಲಿ ಇದ್ದುಕೊಂಡೇ ನಕಲಿ ದಾಖಲೆ ಸೃಷ್ಟಿ ಮಾಡಿ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಮಾರುತ್ತಿರುವ ಘಟನೆ ನಡೆಯುತ್ತಿದೆ ಎಂದು ದೂರುತ್ತಾರೆ ಸ್ಥಳೀಯರು.

ಅಧಿಕಾರಿಗಳು ಮಾಹಿತಿ ನೀಡಬೇಕಾಗಿದೆ

ಕೋಲಾರ ತಾಲ್ಲೂಕಿನ ನರಸಾಪುರ ಸಮೀಪದ ವೇಮಗಲ್ ಬಳಿಯಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆಯಾದ ಸಮಯದಲ್ಲೇ ಮುಳಬಾಗಿಲು ಬಳಿಯ ದೇವರಾಯ ಸಮುದ್ರ ಬಳಿಯೂ ಕೈಗಾರಿಕಾ ಪ್ರದೇಶವನ್ನು ಸ್ಥಾಪಿಸಲು ಯೋಜನೆ ಹಮ್ಮಿಕೊಳ್ಳಲಾಗಿತ್ತು. ಅದರಂತೆ ಮೊದಲ ಹಂತದಲ್ಲಿ 450 ಎಕರೆ ಭೂಮಿ ಸ್ವಾಧೀನ ಮಾಡಿಕೊಳ್ಳಲು ನಿರ್ಧರಿಸಿ ಸರ್ವೆ ಕೆಲಸಕ್ಕೂ ಚಾಲನೆ ನೀಡಲಾಗಿತ್ತು. ಆದರೆ ತಡವಾಗುತ್ತಿರುವ ಕುರಿತು ಅಧಿಕಾರಿಗಳು ಮಾಹಿತಿ ನೀಡಬೇಕಾಗಿದೆ. ಎಚ್.ನಾಗೇಶ್ ಮಾಜಿ ಶಾಸಕ ಕೆಲವರಿಗಾದರೂ ಉದ್ಯೋಗ ಭರವಸೆ ದೇವರಾಯ ಸಮುದ್ರದ ಬಳಿ ಸ್ಥಾಪನೆ ಮಾಡಲು ನಿರ್ಧರಿಸಿರುವ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಯೋಜನೆಯ ಕುಂಠಿತಕ್ಕೆ ಕಾರಣಗಳು ಏನೇ ಇದ್ದರೂ ಇನ್ನಾದರೂ ಕೈಗಾರಿಕಾ ಪ್ರದೇಶವನ್ನು ಸರ್ಕಾರ ಸ್ಥಾಪಿಸಿದರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಎಂಜಿನಿಯರಿಂಗ್ ವಿದ್ಯಾಭ್ಯಾಸ ಪಡೆದಿರುವ ಕೆಲವರಿಗಾದರೂ ಉದ್ಯೋಗ ಸಿಗಲಿದೆ. ಬಾಬು ಮೆಕಾನಿಕಲ್ ಎಂಜಿನಿಯರಿಂಗ್ ಪದವೀಧರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.