ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಬೆಳೆ ಪರಿವರ್ತನೆಯಿಂದ ರೋಗಾಣು ಕ್ಷೀಣ

ರೈತರಿಗೆ ಬಿತ್ತನೆ ರಾಗಿ ವಿತರಣೆ
Last Updated 26 ಜುಲೈ 2021, 4:33 IST
ಅಕ್ಷರ ಗಾತ್ರ

ಕೋಲಾರ: ‘ಪದೇ ಪದೇ ತರಕಾರಿ ಬೆಳೆದರೆ ರೋಗಾಣುಗಳ ಸಂಖ್ಯೆ ಹೆಚ್ಚಾಗುತ್ತದೆ. ವರ್ಷದಲ್ಲಿ ಒಂದು ಬಾರಿ ರಾಗಿ ಬೆಳೆದರೆ ಮುಂದಿನ ಬೆಳೆಗಳಲ್ಲಿ ಉತ್ತಮ ಪ್ರತಿಫಲ ಕಾಣಬಹುದು’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಶಿವಲಿಂಗಯ್ಯ ತಿಳಿಸಿದರು.

ಕೃಷಿ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರ, ರೇಷ್ಮೆ ಮತ್ತು ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಡಿ ತಾಲ್ಲೂಕಿನ ದಿನ್ನೆ ಹೊಸಹಳ್ಳಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರೈತ ತರಬೇತಿ ಕಾರ್ಯಕ್ರಮದಲ್ಲಿ ರೈತರಿಗೆ ಬಿತ್ತನೆ ರಾಗಿ ವಿತರಿಸಿ ಮಾತನಾಡಿದರು.

ರಾಗಿ ಬೆಳೆಯುವುದರಲ್ಲಿ ಹಲವು ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಬೇಸಿಗೆಯಲ್ಲಿ ರಾಗಿ ಬೆಳೆದರೆ ಹಾಗೂ ಪರಿವರ್ತನೆ ಮಾಡಿದರೆ ರೋಗಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದರು.

ರಾಗಿಯಲ್ಲಿ ವಿವಿಧ ತಳಿಗಳು ಇವೆ. ಇದರಲ್ಲಿ ಎಂಎಲ್-365 ತಳಿಯನ್ನು ವರ್ಷಪೂರ್ತಿ ಬೆಳೆಯಬಹುದಾಗಿದೆ. ಈ ತಳಿಯನ್ನು 105 ರಿಂದ 110 ದಿನಗಳ ಒಳಗೆ ಬೆಳೆಯಬಹುದು. ಈ ರಾಗಿಯಿಂದ ಮುದ್ದೆ ಮಾಡಿದರೆ ಬೇಗ ಹಳಸುವುದಿಲ್ಲ. ಇದಕ್ಕೆ ಇಣಕು ರೋಗ ಬರುವುದಿಲ್ಲ. ಇಳುವರಿ ಹೆಚ್ಚಾಗಿ ಬರುತ್ತದೆ ಎಂದು ವಿವರಿಸಿದರು.

ಸಹ ಪ್ರಾಧ್ಯಾಪಕ ಸಿ. ನಾರಾಯಣಸ್ವಾಮಿ ಮಾತನಾಡಿ, ರಾಗಿಗೆ ಪೋಷಕಾಂಶ ಹಾಗೂ ಕೊಟ್ಟಿಗೆ ಗೊಬ್ಬರವನ್ನು ಹೆಚ್ಚಾಗಿ ಉಪಯೋಗಿಸಬೇಕು ಎಂದು ತಿಳಿಸಿದರು.

ಹವಾಮಾನಕ್ಕೆ ತಕ್ಕಂತೆ ಬೆಳೆಯುವ ಪದ್ಧತಿಯನ್ನು ಪ್ರತಿಯೊಬ್ಬ ರೈತರು ಅಳವಡಿಕೊಳ್ಳಬೇಕು ಎಂದುದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ. ರಮೇಶ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಮಾಲಾ, ಮುಖಂಡರಾದ ಟಿ. ರಾಜೇಂದ್ರ, ಎನ್‌. ಶ್ರೀನಿವಾಸ್, ರಾಜೇಶ್, ಮಂಜುನಾಥ್, ದೇವರಾಜ್, ಡಿ.ಎಂ. ಕೃಷ್ಣಪ್ಪ, ನಾರಾಯಣಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT