ಬೆಂಗಳೂರು: ಕೋಲಾರದ ವೇಮಗಲ್ನಲ್ಲಿ ತಲೆ ಎತ್ತುತ್ತಿರುವ ಹೆಲಿಕಾಪ್ಟರ್ ನಿರ್ಮಾಣ ಘಟಕದ ವಿರುದ್ಧ ಸ್ಥಳೀಯ ಶಾಸಕ ಕೊತ್ತೂರು ಮಂಜುನಾಥ್ ಧ್ವನಿ ಎತ್ತಿರುವ ಬಗ್ಗೆ ಜೆಡಿಎಸ್ ಕಿಡಿಕಾರಿದೆ.

ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್, ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಗೇಟ್ಗೆ ಅಡ್ಡಲಾಗಿ ಹಳ್ಳ ತೋಡಿ ಎಂದು ಪ್ರಚೋದನೆ ನೀಡಿರುವ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಅವರ ನಡೆ ಗೂಂಡಾಗಿರಿ. ಇದಕ್ಕೆ ನಮ್ಮ ದಿಕ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಕರ್ನಾಟಕಕ್ಕೆ ಬರುವ ಕೈಗಾರಿಕೆಗಳನ್ನು ಉಳಿಸಿಕೊಳ್ಳುವುದು ಬಿಟ್ಟು, ಈ ರೀತಿ ಧಮ್ಕಿ , ಪ್ರಚೋದನೆ ನೀಡುತ್ತಿರುವುದು ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕನಿಗೆ ಶೋಭೆ ತರುವುದಿಲ್ಲ. ಶಾಸಕ ಎಂದರೆ ಜನರ ಮತ್ತು ಸಾರ್ವಜನಿಕ ಆಸ್ತಿಯ ರಕ್ಷಕರಾಗಿರಬೇಕು ಎಂದು ಎಚ್ಚರಿಸಿದೆ.

ಅದನ್ನು ಬಿಟ್ಟು ಹೆಲಿಕಾಪ್ಟರ್ ಘಟಕಕ್ಕೆ ತೊಂದರೆ ಕೊಡುವಂತೆ ಬೆಂಕಿ ಹಚ್ಚುವ ಮಾತುಗಳನ್ನು ಆಡಿರುವ ಕೋಲಾರ ಕ್ಷೇತ್ರದ ಕಾಂಗ್ರೆಸ್ ಶಾಸಕನಿಂದ ಜನರ ರಕ್ಷಣೆ ಹೇಗೆ ಸಾಧ್ಯ ? ಎಂದು ಪ್ರಶ್ನಿಸಿದೆ.

ಅಭಿವೃದ್ಧಿಗೆ ಸಹಕರಿಸದೆ, ಇಂತಹ ಗೂಂಡಾ ಪ್ರವೃತ್ತಿ ತೋರಿದರೆ, ರಾಜ್ಯಕ್ಕೆ ಹೂಡಿಕೆದಾರರು ಬರುವುದಾದರೂ ಹೇಗೆ ? ಅಭಿವೃದ್ಧಿ ವಿರೋಧಿ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ಗೆ ಧಿಕ್ಕಾರ ಎಂದು ಪುನರುಚ್ಚಿರಿಸಿದೆ.

ತಮಗೆ ಶಿಷ್ಟಾಚಾರದ ಪ್ರಕಾರ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ ಎಂದು ಹೆಲಿಕಾಪ್ಟರ್ ನಿರ್ಮಾಣ ಘಟಕದ ವಿರುದ್ಧ ಶಾಸಕ ಕೊತ್ತೂರು ಮಂಜುನಾಥ್ ಮುನಿಸಿಕೊಂಡಿದ್ದಾರೆ.
.ಶಾಸಕರೇ,ಕೈಗಾರಿಕೆಗಳಿಗೆ ಧಮ್ಕಿ ಹಾಕುತ್ತೀರಾ?:ಕೊತ್ತೂರು ಮಂಜುನಾಥ್ ವಿರುದ್ಧ ಕಿಡಿ.ನಾನು ರೈತ ಪರ; ನಮಗೆ ಕೈಗಾರಿಕೆ ಬೇಕಿಲ್ಲ–ಶಾಸಕ ಕೊತ್ತೂರು ಮಂಜುನಾಥ್ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.