ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್‌ನಲ್ಲಿ ಕನ್ನಡ ಕಟ್ಟಿದ ‘ಶೇಖರಪ್ಪ’

ನಿವೃತ್ತಿಯ ನಂತರವೂ ಕನ್ನಡದ ಕೆಲಸ
Last Updated 1 ನವೆಂಬರ್ 2019, 12:05 IST
ಅಕ್ಷರ ಗಾತ್ರ

ಕೆಜಿಎಫ್: ನಾಡು ನುಡಿಗೆ ಅಪಚಾರವಾದರೆ ಮೊದಲು ಧ್ವನಿ ಎತ್ತುವ ಕನ್ನಡ ಸಂಘಟನೆಗಳ ಮುಖಂಡರ ಪ್ರಮುಖರ ಸಾಲಿನಲ್ಲಿ ಬೆಮಲ್ ಬಾ.ಹಾ.ಶೇಖರಪ್ಪ ನಿಲ್ಲುತ್ತಾರೆ.

ಬೆಮಲ್ ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ನಿವೃತ್ತಿಯಾಗಿದ್ದರೂ, ಕನ್ನಡದ ಕೆಲಸ ಮಾಡುತ್ತಲೇ ಇದ್ದಾರೆ. ಆಹ್ವಾನವಿರಲಿ, ಇಲ್ಲದೇ ಇರಲಿ ಕನ್ನಡ ಕಾರ್ಯಕ್ರಮಕ್ಕೆ ಇವರ ಹಾಜರಾತಿ ಇದ್ದೆ ಇರುತ್ತದೆ. ಕನ್ನಡ ಭಾಷೆಗೆ ಅವಮಾನವಾದರೆ ಕೂಡಲೇ ಸಂಬಂಧಪಟ್ಟ ಇಲಾಖೆಗಳಿಗೆ, ಕನ್ನಡದ ಹಿರಿಯ ಹೋರಾಟಗಾರರಿಗೆ ದೂರು ಸಲ್ಲಿಸಿ, ಅದು ಸರಿಯಾಗುವ ತನಕ ಬಿಡುವುದಿಲ್ಲ. ಯಾರು ಏನೇ ಅಂದುಕೊಳ್ಳಲಿ, ಕನ್ನಡದ ಕೆಲಸ ಮಾಡುವುದಕ್ಕೆ ಅಂಜಿಕೆ ಏಕೆ ಎನ್ನುವುದು ಅವರ ಅಭಿಪ್ರಾಯ.

ಮೂಲತಃ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಬಾಗವಾಡಿ ಗ್ರಾಮದ ಅವರು 1973 ರಲ್ಲಿ ಕೆಜಿಎಫ್ ಗೆ ಬಂದಾಗ, ಬೆಮಲ್ ಮತ್ತು ಕೆಜಿಎಫ್ ಸಂಪೂರ್ಣ ತಮಿಳುಮಯವಾಗಿತ್ತು. ರಾಜ್ಯದ ಬೇರೆ ಜಿಲ್ಲೆಗಳಿಂದ ಬಂದ ಕಾರ್ಮಿಕರು ಕನ್ನಡದ ಕಂಪನ್ನು ಹರಡಲು ಸಾಹಸಮ ಪಡುತ್ತಿದ್ದರು. ಅವರ ಜತೆಗೂಡಿದ ಶೇಖರಪ್ಪ ಬಲ ತುಂಬಿದರು.

ಕೇಂದ್ರ ಸರ್ಕಾರಿ ಸ್ವಾಮ್ಯದ ಬೆಮಲ್‌ನಲ್ಲಿ ಕನ್ನಡದ ಬಗ್ಗೆ ಇದ್ದ ಅನಾದರದ ವಿರುದ್ಧ ಹೋರಾಟ ನಡೆಸುತ್ತಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ಎರಡು ಬಾರಿ ಬೆಮಲ್ ಗೆ ಕರೆಸಿ ಆಡಳಿತ ವರ್ಗಕ್ಕೆ ಎಚ್ಚರಿಕೆ ಕೊಡಿಸಿದ್ದರು.

ಕನ್ನಡ ಮಿತ್ರರು, ಕನ್ನಡ ಸಂಘ, ಕನ್ನಡ ಶಕ್ತಿ ಕೇಂದ್ರ, ಶರಣ ಸಾಹಿತ್ಯ ಪರಿಷತ್ತು, ಬಸವ ಸಮಿತಿ ಮೊದಲಾದ ಸಂಘಟನೆಮಗಳ ಮೂಲಕ ಕನ್ನಡದ ಕೆಲಸಗಳಿಗೆ ಕೈ ಜೋಡಿಸಿದ್ದಾರೆ.

ಇವರ ಕನ್ನಡ ಸೇವೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕ್ಯಾಲಿಫೋರ್ನಿಯ ಕನ್ನಡ ಸಂಘದ ಪ್ರಶಸ್ತಿ, ಕಸಾಪ ಶತಮಾನೋತ್ಸವ ಪ್ರಶಸ್ತಿ, ಕರಾವಳಿ ಸಾಂಸ್ಕೃತಿಕ
ಪ್ರತಿಷ್ಠಾನದ ಪ್ರಶಸ್ತಿಗೆ
ಭಾಜನರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT