ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಮಗಲ್: ಅದ್ದೂರಿ ಹೂವಿನ ಕರಗ ಮಹೋತ್ಸವ

Published 30 ಏಪ್ರಿಲ್ 2024, 14:38 IST
Last Updated 30 ಏಪ್ರಿಲ್ 2024, 14:38 IST
ಅಕ್ಷರ ಗಾತ್ರ

ವೇಮಗಲ್: ಪಟ್ಟಣದ ಧರ್ಮರಾಯಸ್ವಾಮಿ ದ್ರೌಪದಮ್ಮ ದೇವಿಯ 49ನೇ ವರ್ಷದ ಹಸಿ ಕರಗ ಮಹೋತ್ಸವ ಸೋಮವಾರ ರಾತ್ರಿ ವಿಜೃಂಭಣೆಯಿಂದ ಜರುಗಿತು.

ಉತ್ಸವದ ಅಂಗವಾಗಿ ದೇವಾಲಯಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಮಲ್ಲಿಗೆಯಿಂದ ತಯಾರಿಸಿದ್ದ ಹಸಿಕರಗವನ್ನು ಹೊತ್ತು ಪಟ್ಟಣದ ಕಲ್ವಮಂಜಲಿ ರಸ್ತೆಯಲ್ಲಿ ಸಾಗಿದರು. ಹಸಿಕರಗ ಸಾಗುತ್ತಿದ್ದರೆ ಕರಗಕ್ಕೆ ಮಲ್ಲಿಗೆ ಹೂವು ಎಸೆಯುತ್ತ ಗೋವಿಂದಾ ಗೋವಿಂದಾ ನಮಸ್ಮಾರಣೆಯಲ್ಲಿ ಪಟ್ಟಣದ ಬೀದಿಗಳಲ್ಲಿ ಭಕ್ತರು ಪೂಜೆ ಸಲ್ಲಿಸಿದರು. ವೀರಕುಮಾರರು ಕತ್ತಿ ಹಿಡಿದು ಕರಗವನ್ನು ಹಿಂಬಾಲಿಸಿದರು. 

ವಹ್ನಿಕುಲದ ಗೌಡರು, ಯಜಮಾನರು, ಕುಲದ ಅಧ್ಯಕ್ಷರು, ಕುಲದ ಸರ್ವ ಸದಸ್ಯರು, ಪಟ್ಟಣದ ಹಿರಿಯ ಮುಖಂಡರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT