ಮಾಲೂರು: ನೂರಾರು ವರ್ಷ ಇತಿಹಾಸವಿರುವ ಪಟಾಲಮ್ಮ ಜಾತ್ರೆ ಹಾಗೂ ಧರ್ಮರಾಯಸ್ವಾಮಿ ಕರಗ ಉತ್ಸವ ಮೇ 5ರಂದು ನಡೆಯಲಿದ್ದು, ಮೇ 1ರಂದು ಉತ್ಸವಕ್ಕೆ ಚಾಲನೆ ನೀಡಲಾಗಿದೆ.

ಒಂದು ವಾರದ ಉತ್ಸವವನ್ನು ಊರ ಹಬ್ಬವಾಗಿ ಆಚರಿಸುವ ಜಾತ್ರಾ ಮಹೋತ್ಸವ ಹಾಗೂ ಕರಗ ಶಕ್ತ್ಯುತ್ಸವ ಆಚರಣೆಗಳು 450 ವರ್ಷಗಳಿಂದ ಆಚರಣೆಯಲ್ಲಿವೆ. ತಾಲ್ಲೂಕಿನ ತಿಗಳರ ಸಮುದಾಯದಿಂದ ಆಚರಿಸುವ ಕರಗ ಉತ್ಸವದಲ್ಲಿ ಮುಸ್ಲಿಂ ಮುಖಂಡರು ಪಾಲ್ಗೊಳ್ಳುವ ಮೂಲಕ ಸಾಮರಸ್ಯದ ಸಂದೇಶವಿದೆ.

ಮೂರು ತಿಂಗಳ ಮುನ್ನವೇ ತರಬೇತಿ: ಕರಗ ಹೊರುವ ಪೂಜಾರಿ ಸುಮಾರು ಮೂರು ತಿಂಗಳ ದೈಹಿಕ ತಯಾರಿ ಜತೆಗೆ ನೀತಿ-ನಿಯಮಗಳನ್ನು ಆಚರಣೆ ಮಾಡುವುದು ಕಡ್ಡಾಯ. ವಹ್ನಿಕುಲ ಮುಖಂಡರ ಕಠಿಣ ತರಬೇತಿಗಳನ್ನು ನಡೆಸುವುದರಿಂದ ಕರಗದ ಪೂಜಾರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಇವರೊಂದಿಗೆ ಸುಮಾರು 250 ರಿಂದ 300 ಮಂದಿ ವೀರಪುತ್ರರು ನೀತಿ - ನಿಯಮಗಳನ್ನು ಪಾಲಿಸುತ್ತಾ ಪೂಜೆಗಳಲ್ಲಿ ಪಾಲ್ಗೊಂಡು ಉತ್ಸವ ಮುಗಿಯುವವರೆಗೂ ತಮ್ಮ ಮನೆಗಳಿಂದ ದೂರವಿರುತ್ತಾರೆ.

ಕರಗದ ವೈಶಿಷ್ಟ್ಯ: ಶಿರದ ಮೇಲೆ ಘಮ್ಮನೆಯ ಮಲ್ಲಿಗೆ ಹೂಗಳಿಂದ ತಯಾರಾಗುವ ಕರಗ, ಬಣ್ಣ ಬಣ್ಣದ ಸುನಾರಿ ಹಾಗು ಕನಕಾಂಬರ ಹೂಗಳಿಂದ ಶೃಂಗಾರಗೊಳ್ಳುತ್ತದೆ. ದೇಗುಲದ ಗರ್ಭಗುಡಿಯಿಂದಾಚೆಗೆ ಧರ್ಮರಾಯನ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಹೊರ ಬರುತ್ತಿದ್ದಂತೆ ಪಟಾಕಿ ಸಿಡಿಸುವುದು ಕರಗ ಹೊರಡುತ್ತಿರುವ ಸಂದೇಶ ನೀಡುತ್ತದೆ. ಮೆರವಣಿಗೆಯಲ್ಲಿ ಕರಗಕ್ಕೆ ಭಕ್ತರು ಮಲ್ಲಿಗೆ ಸುರಿದು ಕಣ್ತುಂಬಿಸಿಕೊಳ್ಳುತ್ತಾರೆ. ಇದನ್ನು ನೋಡಲು ಸ್ಥಳೀಯರು ಹಾಗೂ ಹೊರ ಜಿಲ್ಲೆ, ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ.

ಭಾನುವಾರ ರಾತ್ರಿ ಆಚರಸಲ್ಪಡುವ ಹೂವಿನ ಕರಗಕ್ಕೂ ಮುನ್ನ ಸಾಕಷ್ಟು ಕಾರ್ಯಕ್ರಮಗಳು ನಡೆಯುತ್ತವೆ. ಗುರುವಾರ ಸಂಜೆ ಹಸಿಕರಗ ಮೆರವಣಿಗೆ ನಡೆಯಿತು. ಶುಕ್ರವಾರದ ಸಿಡಿ-ದೀಪೋತ್ಸವ ನಡೆಯಿತು. ಶನಿವಾರ ಕಲ್ಯಾಣೋತ್ಸವ, ಪಟಾಲಮ್ಮ-ಮುತ್ಯಾಲಮ್ಮ ಜಾತ್ರಾ ಮಹೋತ್ಸವದ ಆಚರಣೆ, ಭಾನುವಾರ ಐತಿಹಾಸಿಕ ಧರ್ಮರಾಯಸ್ವಾಮಿ ದ್ರೌಪದಾಂಬ ಹೂವಿನ ಕರಗ, ಸೋಮವಾರ ಗಾವು, ಮಂಗಳವಾರದಂದು ವಸಂತೋತ್ಸವ ನಡೆಯುತ್ತದೆ. ಈ ಉತ್ಸವಕ್ಕೆ ಊರಿನ ಹೆಣ್ಣು ಮಕ್ಕಳು, ಬಂಧುಗಳು ಸೇರಿ ಸಂಭ್ರಮದಿಂದ ಆಚರಿಸಲಾಗುತ್ತದೆ.

ಮೇ 5ರಂದು ನಡೆಯುವ ಹೂವಿನ ಕರಗ ಮಹೋತ್ಸವು ಕೇಂದ್ರಬಿಂದು. ಜಾತ್ರೆ ಅಂಗವಾಗಿ ಪಟ್ಟಣದ ನಾನಾ ದೇವಾಲಯಗಳಲ್ಲಿ ವಿಶೇಷ ಪೂಜೆ, ಮುತ್ತಿನ ಪಲ್ಲಕ್ಕಿಗಳು ನಡೆಯುತ್ತವೆ. ಈ ಕರಗ ಉತ್ಸವಕ್ಕೆ ಲಕ್ಷಾಂತರ ಮಂದಿ ಸಾಕ್ಷಿಯಾಗುತ್ತಾರೆ. ಜಾತ್ರೆಯು ತಾಲ್ಲೂಕು ಆಡಳಿತದ ಸಹಕಾರದಲ್ಲಿ ಪುರಸಭೆ ಮೂಲಸೌಲಭ್ಯಗಳನ್ನು ಒದಗಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.