ಕೋಲಾರ: ನಗರದಲ್ಲಿ ಇದೇ ಪ್ರಥಮ ಬಾರಿ ಜಿಲ್ಲಾ ಮೇಲ್ ಮರುವತ್ತೂರ್ ಆದಿಪರಾಶಕ್ತಿ ಆಧ್ಯಾತ್ಮಿಕ ಸಮಿತಿ ಶಾಖೆಯಿಂದ ಸೆ.14ರ ಭಾನುವಾರ ಆಡಿಪೂರಂ ಗಂಜಿ ಮಡಿಕೆ ಮೆರವಣಿಗೆ ಹಾಗೂ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಅಖಿಲ ಕರ್ನಾಟಕ ಓಂ ಶಕ್ತಿ ಕನ್ನಡ ವೇದಿಕೆ ರಾಜ್ಯ ಅಧ್ಯಕ್ಷ ದಿವಾಕರ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆದಿಪರಾಶಕ್ತಿ ಅಮ್ಮ ತಮಿಳುನಾಡಿನಲ್ಲಿ ನೆಲೆಸಿದ್ದರೂ ಕರ್ನಾಟಕದಲ್ಲಿ ಬಹಳಷ್ಟು ಭಕ್ತರು ಇದ್ದಾರೆ. ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಬೃಹತ್ ಕಾರ್ಯಕ್ರಮ ನಡೆಯಲಿದೆ. ಅಧ್ಯಕ್ಷತೆಯನ್ನು ಎಂಎಎಸ್ಎಂ ರಾಜ್ಯ ಅಧ್ಯಕ್ಷ ಎಸ್.ರಾಜಗೋಪಾಲ್ ವಹಿಸಲಿದ್ದು, ರಾಜ್ಯ ಕಾರ್ಯದರ್ಶಿ ಡಿ.ಉದಯ್ ಕುಮಾರ್ ನೇತೃತ್ವದಲ್ಲಿ ನಡೆಯಲಿದೆ ಎಂದರು.

ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಮುನಿಸ್ವಾಮಿ, ‘ಜಿಲ್ಲೆಯಲ್ಲಿ ಮುನ್ನೂರಕ್ಕೂ ಹೆಚ್ಚಿನ ಮೇಲ್ ಮರುವತ್ತೂರ್ ಆದಿಪರಾಶಕ್ತಿ ಆಧ್ಯಾತ್ಮಿಕ ಸಮಿತಿಗಳು ಇವೆ. ಕಾರ್ಯಕ್ರಮದಲ್ಲಿ ಕೋಲಾರ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಮನವಿ ಮಾಡಿದರು,

ಪತ್ರಿಕಾಗೋಷ್ಠಿಯಲ್ಲಿ ಎಂಎಎಸ್ಎಂ ರಾಜ್ಯ ಕಾರ್ಯದರ್ಶಿ ಡಿ.ಉದಯ್ ಕುಮಾರ್, ರಾಜ್ಯ ಉಪಾಧ್ಯಕ್ಷ ಎ.ಸುನೀಲ್ ಶೆಟ್ಟಿ, ಜಿಲ್ಲಾ ಅಧ್ಯಕ್ಷ ಎ.ದಿನಕರ್, ಖಜಾಂಜಿ ಕೆ.ಮುನಿಸ್ವಾಮಿ, ತಾಲೂಕು ಕಾರ್ಯದರ್ಶಿ ಪಿ.ವಿ.ಸಿ ಕೃಷ್ಣಪ್ಪ, ಕೆ.ಜಿ.ಎಫ್ ಉಪಾಧ್ಯಕ್ಷ ಆರ್.ಶೇಖರನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.