ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ: 18 ಮಂದಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

ಶಿಕ್ಷಕರ ದಿನಾಚರಣೆಯಲ್ಲಿ ಇಂದು ಪ್ರಶಸ್ತಿ ಪ್ರದಾನ
Published : 4 ಸೆಪ್ಟೆಂಬರ್ 2024, 14:26 IST
Last Updated : 4 ಸೆಪ್ಟೆಂಬರ್ 2024, 14:26 IST
ಫಾಲೋ ಮಾಡಿ
Comments

ಕೋಲಾರ: ಶಿಕ್ಷಕರ ದಿನಾಚರಣೆ ಅಂಗವಾಗಿ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಹಾಗೂ ಕಿರಿಯ ಪ್ರಾಥಮಿಕ ವಿಭಾಗಗಳಿಂದ ಒಟ್ಟು 18 ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.

‘ಪ್ರತಿ ವಿಭಾಗದಲ್ಲಿ ತಲಾ ಒಬ್ಬೊಬ್ಬರಂತೆ ಪ್ರತಿ ತಾಲ್ಲೂಕಿಗೆ ತಲಾ ಮೂವರಂತೆ ಒಟ್ಟು 18 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಗುರುವಾರ ಬೆಳಿಗ್ಗೆ 10.30ಕ್ಕೆ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ನಡೆಯುವ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ₹ 5 ಸಾವಿರ ನಗದು, ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರಲಿದೆ’ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ (ಡಿಡಿಪಿಐ) ಕೃಷ್ಣಮೂರ್ತಿ ತಿಳಿಸಿದ್ದಾರೆ.

ಡಿಡಿಪಿಐ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯಲ್ಲಿ ಶಿಕ್ಷಕರ ವಿವಿಧ ಸಂಘಟನೆಗಳ ಮುಖಂಡರು ಸೇರಿ ಜಿಲ್ಲೆಯ ಆರು ತಾಲ್ಲೂಕುಗಳಿಂದ ಒಟ್ಟು 18 ಮಂದಿ ಶಿಕ್ಷಕರನ್ನು ಆಯ್ಕೆ ಮಾಡಿದ್ದಾರೆ.

‘ಶಿಕ್ಷಕರ ಕಾರ್ಯ ಚಟುವಟಿಕೆಗಳು, ಶೈಕ್ಷಣಿಕ ಪ್ರಗತಿಗೆ ನೀಡಿರುವ ಕೊಡುಗೆ, ಶಾಲಾ ಪರಿಸರ ನಿರ್ಮಾಣ, ಶಾಲೆಯಲ್ಲಿ ಶಿಸ್ತು, ದಾನಿಗಳ ನೆರವಿನಿಂದ ಶಾಲೆ ಅಭಿವೃದ್ದಿಗೆ ಕೈಗೊಂಡ ಕ್ರಮಗಳು ಸೇರಿದಂತೆ ಎಲ್ಲಾ ಆಯಾಮಗಳಲ್ಲೂ ಅವರ ಪ್ರಗತಿದಾಯಕ ಅಂಶ ಪರಿಶೀಲಿಸಿ ಈ ಆಯ್ಕೆ ಮಾಡಲಾಗಿದೆ’ ಎಂದು ಹೇಳಿದ್ದಾರೆ.

‘ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ ಶಿಕ್ಷಕರಿಗೆ ಶಾಲೆ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಮತ್ತಷ್ಟು ಪ್ರೇರಣೆ ನೀಡುವ ಪ್ರಯತ್ನ ಇದಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಜಿಲ್ಲೆಯ ಎಲ್ಲಾ ಶಾಸಕರು, ಜಿಲ್ಲಾಧಿಕಾರಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ’ ಎಂದಿದ್ದಾರೆ.

ಡಿಡಿಪಿಐ ಕೃಷ್ಣಮೂರ್ತಿ ಅಧ್ಯಕ್ಷರ ಆಯ್ಕೆ ಸಮಿತಿಯಲ್ಲಿ ಡಯಟ್ ಪ್ರಾಂಶುಪಾಲ ರಾಮಕೃಷ್ಣಯ್ಯ, ಬಿಇಡಿ ಕಾಲೇಜು ಉಪಪ್ರಾಂಶುಪಾಲ ಜಗದೀಶ್, ಶಿಕ್ಷಣ ತಜ್ಞರಾದ ಕೆ.ವಿ.ಜಗನ್ನಾಥ್, ಸವಿತಾ ಶರ್ಲೀನ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪ್ರೌಢಶಾಲಾ ಸಹಶಿಕ್ಷಕರ ಸಂಘ, ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷರು, ನೋಡಲ್ ಅಧಿಕಾರಿಯಾಗಿ ಶಂಕರೇಗೌಡ, ಶಿಕ್ಷಣಾಧಿಕಾರಿಗಳಾದ ವೀಣಾ, ಸಗೀರಾ ಅಂಜುಂ, ವಿಷಯ ಪರಿವೀಕ್ಷಕ ಸೈಯದ್ ಸನಾವುಲ್ಲ ಇದ್ದರು.

ಪ್ರಶಸ್ತಿಗೆ ಭಾಜನರಾದ ಪ್ರೌಢಶಾಲಾ ಶಿಕ್ಷಕರು: ಕೋಲಾರ ತಾಲ್ಲೂಕಿನ ಬಾಲಕಿಯರ ಪಿಯು ಕಾಲೇಜಿನ ಎನ್.ಎಸ್.ಭಾಗ್ಯ, ಬಂಗಾರಪೇಟೆ ತಾಲ್ಲೂಕಿನ ದೊಡ್ಡಚಿನ್ನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಜಿ.ಟಿ.ರಾಮಚಂದ್ರಪ್ಪ, ಕೆಜಿಎಫ್ ತಾಲ್ಲೂಕು ಸುಂದರಪಾಳ್ಯ ಸರ್ಕಾರಿ ಪ್ರೌಢಶಾಲೆಯ ಎನ್.ವಿ.ಪರಮೇಶ್, ಮಾಲೂರು ತಾಲ್ಲೂಕು ಕುಡಿಯನೂರು ಪ್ರೌಢಶಾಲೆಯ ಹೇಮಾವತಿ, ಮುಳಬಾಗಿಲು ತಾಲ್ಲೂಕು ತಾಯಲೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಜೀಬ್‍ಖಾನ್, ಶ್ರೀನಿವಾಸಪುರ ತಾಲ್ಲೂಕಿನ ಪಾತಪಲ್ಲಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಆರ್.ಲಕ್ಷ್ಮಯ್ಯ.

ಪ್ರಶಸ್ತಿಗೆ ಭಾಜನರಾದ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು: ಬಂಗಾರಪೇಟೆ ತಾಲ್ಲೂಕು ದೋಣಿಮಡಗು ಶಾಲೆಯ ಬಡ್ತಿ ಮುಖ್ಯಶಿಕ್ಷಕ ಜಿ.ಮುನಿಸ್ವಾಮಿ, ಕೆಜಿಎಫ್ ತಾಲ್ಲೂಕಿನ ದೊಡ್ಡಕಾರಿ ಗ್ರಾಮದಸರ್ಕಾರಿ ವರಲಕ್ಷ್ಮಮ್ಮ, ಕೋಲಾರ ತಾಲ್ಲೂಕಿನ ಅಂಕತಟ್ಟಿ ಶಾಲೆಯ ಶಿಕ್ಷಕ ಎಸ್.ರಮೇಶಬಾಬು, ಮಾಲೂರು ತಾಲ್ಲೂಕಿನ ಸಂತೇಹಳ್ಳಿ ಶಾಲೆ ಬಡ್ತಿ ಮುಖ್ಯಶಿಕ್ಷಕಿ ಎಚ್.ಆರ್.ಜ್ಯೋತಿಪ್ರಭಾ, ಮುಳಬಾಗಿಲು ತಾಲ್ಲೂಕು ಕೊಲದೇವಿ ಶಾಲೆಯ ಶಿಕ್ಷಕ ಸಿ.ಎನ್.ರಮೇಶ್, ಶ್ರೀನಿವಾಸಪುರ ತಾಲ್ಲೂಕು ಯದರೂರು ಶಾಲೆ ಸಹಶಿಕ್ಷಕ ವಿ.ಮುನಿಸ್ವಾಮಿ.

ಪ್ರಶಸ್ತಿಗೆ ಭಾಜನರಾದ ಕಿರಿಯ ಪ್ರಾಥಮಿಕ ವಿಭಾಗದ ಶಿಕ್ಷಕರು: ಬಂಗಾರಪೇಟೆ ತಾಲ್ಲೂಕು ರಾಮಸಂದ್ರ ಶಾಲೆಯ ಆನಂದ್, ಕೆಜಿಎಫ್ ತಾಲ್ಲೂಕಿನ ಮರವೂರು ಶಾಲೆ ಪ್ರಭಾರಿ ಮುಖ್ಯಶಿಕ್ಷಕ ಬಿ.ನಾರಾಯಣಪ್ಪ, ಕೋಲಾರ ತಾಲ್ಲೂಕಿನ ಕೊಳಗಂಜನಹಳ್ಳಿ ಶಾಲೆಯ ಶಿಕ್ಷಕಿ ಸಿ.ಮುನಿಯಪ್ಪ, ಮಾಲೂರು ತಾಲ್ಲೂಕು ಚಿಕ್ಕಶಿವಾರ ಶಾಲೆಯ ಕೆ.ವಿ.ಪ್ರಮೀಳಾ, ಮುಳಬಾಗಿಲು ತಾಲ್ಲೂಕಿನ ಗೊಟ್ಟುಕುಂಟೆ ಶಾಲೆಯ ವಿ.ಉಮಾ, ಶ್ರೀನಿವಾಪುರ ತಾಲ್ಲೂಕು ಕೆಂಪರೆಡ್ಡಿವಾರಿಪಲ್ಲಿ ಶಾಲೆಯ ಶಿಕ್ಷಕ ವೈ.ಆರ್.ಲಕ್ಷ್ಮಿನಾರಾಯಣ.

₹ 5 ಸಾವಿರ ನಗದು, ನೆನಪಿನ ಕಾಣಿಕೆ,ಪ್ರಶಸ್ತಿ ಪತ್ರ ಪ್ರತಿ ವಿಭಾಗದಲ್ಲಿ ಒಬ್ಬರಂತೆ ಪ್ರತಿ ತಾಲ್ಲೂಕಿನ ಮೂವರು ಆಯ್ಕೆ ಡಿಡಿಪಿಐ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT