ಕೋಲಾರ: ಮದ್ಯಪಾನ ತಪಾಸಣೆ ವೇಳೆ ಬೈಕ್ ಕಳವು ಮಾಡಿಕೊಂಡು ಬರುತ್ತಿದ್ದ ಇಬ್ಬರು ಆರೋಪಿಗಳನ್ನು ಗುರುತಿಸಿ ಬಂಧಿಸುವಲ್ಲಿ ಗಲ್ಪೇಟೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಅಲ್ಲದೇ, ಅವರು ವಿವಿಧೆಡೆ ಕಳ್ಳತನ ಮಾಡಿದ್ದ 26 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಮೆಕ್ಯಾನಿಕ್ ಆಗಿರುವ ನಗರದ ಆಜಾದ್ ನಗರದ ಜುನೈದ್ ಪಾಷಾ (23) ಹಾಗೂ ಬೀಡಿ ಕಾಲೊನಿಯ ಬಾಬಾ ಜಾನ್ (24) ಬಂಧಿತರು.

ಗಲ್ಪೇಟೆ ಸರ್ಕಲ್ ಇನ್ಸ್ಪೆಕ್ಟರ್ ಎಂ.ಜೆ.ಲೋಕೇಶ್ ತಮ್ಮ ಸಿಬ್ಬಂದಿ ವಾಸುದೇವ ಮೂರ್ತಿ, ಕೃಷ್ಣಮೂರ್ತಿ ಹಾಗೂ ಶ್ರೀನಿವಾಸ್ ಜೊತೆ ಸಂಜೆ 5.30ರ ಸುಮಾರಿಗೆ ನಗರ ಹೊರವಲಯದ ಬೇತಮಂಗಲ ಜಿಗ್ಜಾಗ್ ಬಳಿ ವಾಹನ ಚಲಾಯಿಸುವವರ ತಪಾಸಣೆಯಲ್ಲಿ ತೊಡಗಿದ್ದರು.

ಈ ವೇಳೆ ನಗರದ ಕಡೆಯಿಂದ ಇಬ್ಬರು ವ್ಯಕ್ತಿಗಳು ನಂಬರ್ ಪ್ಲೇಟ್ ಇಲ್ಲದ ಫಸೀನೊ ದ್ವಿಚಕ್ರ ವಾಹನದಲ್ಲಿ ಬರುತ್ತಿರುವುದನ್ನು ಕಂಡಿದ್ದಾರೆ. ತಮ್ಮನ್ನು ಕಂಡು ಬೇರೆಡೆಗೆ ಹೋಗಲು ಪ್ರಯತ್ನಸಿದ ಆರೋಪಿಗಳನ್ನು ಪೊಲೀಸರು ಬೆನ್ನಟ್ಟಿ ಹಿಡಿದು ವಿಚಾರಿಸಿದ್ದಾರೆ.

ಇಬ್ಬರೂ ಆ ದ್ವಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗುತ್ತಿರುವ ಅನುಮಾನ ಪೊಲೀಸರಿಗೆ ಬಂದಿದೆ. ಆರೋಪಿಗಳು ಹಾಗೂ ದ್ವಿಚಕ್ರ ವಾಹನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿ ಕೋಲಾರ ನಗರ ಮತ್ತು ಜಿಲ್ಲೆಯ ಇತರೆ ಕಡೆಗಳಲ್ಲಿ ಕಳ್ಳತನ ಮಾಡಿದ್ದ ವಿವಿಧ ಮಾದರಿಯ 26 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುತ್ತಾರೆ. ವಶ ಪಡಿಸಿಕೊಂಡಿರುವ ದ್ವಿಚಕ್ರ ವಾಹನಗಳ ಒಟ್ಟು ಮೌಲ್ಯ ಸುಮಾರು ₹ 20 ಲಕ್ಷ ಆಗಿರುತ್ತದೆ.

ಗಲ್ಪೇಟೆ ಠಾಣೆಯ ಸಿಪಿಐ ಲೋಕೇಶ್, ಪಿಎಸ್ಐ ವಿಠಲ್ ವೈ,ತಲವಾರ್ ಹಾಗೂ ಸಿಬ್ಬಂದಿ ಕಾರ್ಯವನ್ನು ಎಸ್ಪಿ ನಿಖಿಲ್ ಶ್ಲಾಘಿಸಿದ್ದಾರೆ.