ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ: ಜಿಲ್ಲೆಯಲ್ಲಿ ಐದು ಕೋವಿಡ್‌ ಪ್ರಕರಣ!

213 ಮಂದಿಗೆ ಕೊರೊನಾ ತಪಾಸಣೆ; ಮತ್ತಷ್ಟು ಮುನ್ನೆಚ್ಚರಿಕೆ ಕ್ರಮ
Published 28 ಡಿಸೆಂಬರ್ 2023, 15:35 IST
Last Updated 28 ಡಿಸೆಂಬರ್ 2023, 15:35 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಮೂರು ದಿನಗಳಲ್ಲಿ ಒಟ್ಟು ಐದು ಕೋವಿಡ್‌–19 ಪ್ರಕರಣಗಳು ದಾಖಲಾಗಿದ್ದು, ಮತ್ತಷ್ಟು ಕಟ್ಟೆಚ್ಚರ ವಹಿಸಲಾಗಿದೆ.

ಈ ವರೆಗೆ ಒಟ್ಟು 213 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಆರೋಗ್ಯ ಇಲಾಖೆ ಗುರುವಾರ ಬಿಡುಗಡೆ ಮಾಡಿದ ಕೋವಿಡ್‌ ಬುಲೆಟಿನ್‌ನಲ್ಲಿ 3 ಪಾಸಿಟಿವ್‌ ಪ್ರಕರಣ ಇರುವುದು ದಾಖಲಾಗಿದೆ. ಈ ಮೂರೂ ಪ್ರಕರಣ ಒಂದೇ ದಿನ ದಾಖಲಾಗಿವೆ. ಹಿಂದಿನ ದಿನಗಳಲ್ಲಿ ಎರಡು ಪ್ರಕರಣ ದಾಖಲಾಗಿದ್ದವು.

ಕೋಲಾರ ತಾಲ್ಲೂಕಿನ ವಿಟ್ಟಪ್ಪನಹಳ್ಳಿಯ ವ್ಯಕ್ತಿಯೊಬ್ಬರಿಗೆ ಪಾಸಿಟಿವ್‌ ಬಂದಿದ್ದು, ಎಸ್ಎನ್‌ಆರ್‌ ಜಿಲ್ಲಾಸ್ಪತ್ರೆಯ ಕೋವಿಡ್‌ ವಾರ್ಡ್‌ನಲ್ಲಿ ದಾಖಲಿಸಲಾಗಿದೆ. ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿಯೇ ಕೋವಿಡ್‌ ಪರೀಕ್ಷೆ ಮಾಡಲಾಗುತ್ತಿದೆ. ಕೋವಿಡ್‌ ಬಂದೂ ತೀವ್ರತರದ ಲಕ್ಷಣ ಇರದಿದ್ದರೆ ಮನೆಯಲ್ಲೇ ಐಸೋಲೇಷನ್‌ ಆಗಲು ಸೂಚಿಸಲಾಗುತ್ತಿದೆ.

ಕೋವಿಡ್‌ ಪ್ರಕರಣ ನಿಭಾಯಿಸಲು ಜಿಲ್ಲೆಯ ಆರೋಗ್ಯ ಇಲಾಖೆ ಅಧಿಕಾರಿಗಳು ವೈದ್ಯರು, ಸಿಬ್ಬಂದಿ, ಅರೆ ವೈದ್ಯಕೀಯ ಸಿಬ್ಬಂದಿ ಸಜ್ಜಾಗಿದ್ದಾರೆ. ಬಹುತೇಕ ಸಾರ್ವಜನಿಕ ಆಸ್ಪತ್ರೆ, ಜಿಲ್ಲಾಸ್ಪತ್ರೆಯಲ್ಲಿ ಲಿಕ್ವಿಡ್‌ ಮೆಡಿಕಲ್‌ ಪ್ಲಾಂಟ್‌ ಇವೆ. ಆಮ್ಲಜನಕ ಸಿಲಿಂಡರ್‌ ಭರ್ತಿ ಮಾಡಿಡಲು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಗದೀಶ್‌ ಈಗಾಗಲೇ ಸೂಚನೆ ನೀಡಿದ್ದಾರೆ. ವೆಂಟಿಲೇಟರ್‌ ಬಳಕೆಗೆ ತರಬೇತಿ ನೀಡಲಾಗಿದೆ. ಔಷಧಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಕೋವಿಡ್‌ ಸಂಬಂಧಿಸಿದ ಪ್ರಕರಣಗಳು ಬಂದಾಗ ಕಡ್ಡಾಯವಾಗಿ ಚಿಕಿತ್ಸೆ ನೀಡಬೇಕೆಂದು ಖಾಸಗಿ ಆಸ್ಪತ್ರೆಗಳಿಗೂ ಸೂಚನೆ ನೀಡಿದ್ದಾರೆ.

ಸರ್ಕಾರದ ಹೊಸ ಮಾರ್ಗಸೂಚಿ ಪ್ರಕಾರ 60 ವರ್ಷ ಮೀರಿದಂಥ ಎಲ್ಲಾ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್‌ ಬಳಸಬೇಕು. ಅದೇ ರೀತಿ ಸಕ್ಕರೆ ಕಾಯಿಲೆ, ಯಕೃತ್‌ ಸಮಸ್ಯೆ ಸೇರಿದಂತೆ ವಿವಿಧ ರೀತಿಯ ಅನಾರೋಗ್ಯ ಸಮಸ್ಯೆ ಹೊಂದಿರುವವರು ಮಾಸ್ಕ್‌ ಹಾಕಿಕೊಳ್ಳಬೇಕು. ಆರೋಗ್ಯ ಇಲಾಖೆ ಸಿಬ್ಬಂದಿ ಕೂಡ ಮಾಸ್ಕ್‌ ಕಡ್ಡಾಯವಾಗಿ ಬಳಸಬೇಕು. 

ಒಂದೇ ದಿನ ಮೂರು ಪ್ರಕರಣ ದಾಖಲು ಕೋಲಾರದ ವಿಟ್ಟಪ್ಪನಹಳ್ಳಿಯ ವ್ಯಕ್ತಿಗೆ ಪಾಸಿಟಿವ್‌ ಎಸ್ಎನ್‌ಆರ್‌ ಆಸ್ಪತ್ರೆಯ ಕೋವಿಡ್‌ ವಾರ್ಡ್‌ನಲ್ಲಿ ದಾಖಲು

ಆರೋಗ್ಯ ಇಲಾಖೆಯಿಂದ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ. ಈವರೆಗೆ 213 ಮಂದಿಯನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿದೆ

-ಡಾ.ಜಗದೀಶ್‌ ಜಿಲ್ಲಾ ಆರೋಗ್ಯಾಧಿಕಾರಿ

ಕೋಲಾರ ತಾಲ್ಲೂಕಿನಲ್ಲಿ ಕೇವಲ 1 ಕೋವಿಡ್‌ ಪ್ರಕರಣ ದಾಖಲಾಗಿದೆ. ಸರ್ಕಾರದ ಮಾರ್ಗಸೂಚಿಗಳನ್ನು ಎಲ್ಲರೂ ಪಾಲಿಸಬೇಕು ಗಾಬರಿಯಾಗುವ ಅಗತ್ಯವಿಲ್ಲ

- ಡಾ.ನಾರಾಯಣಸ್ವಾಮಿ ತಾಲ್ಲೂಕು ಆರೋಗ್ಯಾಧಿಕಾರಿ ಕೋಲಾರ

ಕೋಲಾರ ಜಿಲ್ಲೆಯ ವೈದ್ಯಕೀಯ ಸೌಲಭ್ಯ * ಆಮ್ಲಜನಕ ಸಹಿತ ಹಾಸಿಗೆ; 619 * ಐಸೋಲೇಷನ್‌ ಹಾಸಿಗೆ; 474 * ಐಸಿಯು ಹಾಸಿಗೆ; 168 * ವೆಂಟಿಲೇಟರ್‌; 120 * ಆಮ್ಲಜನಕ ಘಟಕ (ಪಿಎಸ್‌ಎ); 12 * ಆಮ್ಲಜನಕ ಸಿಲಿಂಡರ್‌; 443 * ಆ್ಯಂಬುಲೆನ್ಸ್‌; 46

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT