ಕೋಲಾರ: ಜಿಲ್ಲೆಯ ಪೊಲೀಸರ ಸತತ ನಿಗಾ ಹಾಗೂ ನಿಯಂತ್ರಣ ಪ್ರಯತ್ನದ ಹೊರತಾಗಿಯೂ ಮುಂದುವರಿದಿರುವ ಜೂಜಾಟ, ಡ್ರಗ್ಸ್ ಮಾರಾಟ, ವ್ಹೀಲಿಂಗ್, ಅಕ್ರಮ ಮದ್ಯ ಮಾರಾಟ, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ಸೇರಿದಂತೆ ಹಲವಾರು ಕಾನೂನು ಬಾಹಿರ ಚಟುವಟಿಕೆಗಳು ಹೊಸ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ಅವರಿಗೆ ಸವಾಲಾಗಿ ಪರಿಣಮಿಸಿವೆ.

ಹೊಸ ವರ್ಷದ ಮೊದಲನೇ ದಿನವೇ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿರುವ ಅವರ ಮುಂದೆ ಇಂಥ ಹತ್ತಾರು ಹಳೆ ಸಮಸ್ಯೆಗಳು ಇವೆ. ಕಾನೂನು ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳುವ, ಅಪರಾಧ ಪ್ರಕರಣ ನಿಯಂತ್ರಿಸುವುದರೊಂದಿಗೆ ವಿವಿಧ ಇಲಾಖೆಗಳೊಂದಿಗೆ ಜೊತೆಗೂಡಿ ಅವರ ಸಹಕಾರ ಪಡೆದು ಕೆಲಸ ಮಾಡುವ ಅಗತ್ಯವೂ ಇದೆ. ಹಿಂದಿನ ಎಸ್ಪಿ ನಿಖಿಲ್ ಬಿ. ತಮ್ಮ ಒಂದೂವರೆ ವರ್ಷದ ಅದಿಕಾರಾವಧಿಯಲ್ಲಿ ಈ ಸಮಸ್ಯೆ ಮಟ್ಟಹಾಕಲು ಪ್ರಯತ್ನ ಹಾಕಿದ್ದರು. ಆದರೂ ಕೆಲ ಪ್ರಕರಣಗಳು ಏರುಗತಿಯಲ್ಲಿಯೇ ಸಾಗಿವೆ.

ಬಾಲಕಿಯರ ಮೇಲಿನ ಅಪರಾಧ ಪ್ರಕರಣಗಳು ಹೆಚ್ಚಿವೆ. ಅದಕ್ಕೆ ಪೋಕ್ಸೊ, ಬಾಲ್ಯ ವಿವಾಹ, ಬಾಲ ಗರ್ಭಿಣಿ ಪ್ರಕರಣಗಳು ಹಾಗೂ ಅದರ ಅಂಕಿಅಂಶಗಳು ಸಾಕ್ಷಿ. ಕಳೆದ ಎಂಟು ತಿಂಗಳಲ್ಲಿ 114 ಪೋಕ್ಸೊ ಪ್ರಕರಣಗಳು, 105 ಬಾಲ್ಯ ವಿವಾಹ ಪ್ರಕರಣಗಳು, 40ಕ್ಕೂ ಹೆಚ್ಚು ಬಾಲಗರ್ಭಿಣಿಯರ ಪ್ರಕರಣಗಳು ನಡೆದಿವೆ. ಕೆಲ ಪ್ರಕರಣಗಳನ್ನು ರಾಜಿ ಮಾಡಿ ಮುಚ್ಚಿ ಹಾಕುವುದು, ಪ್ರಕರಣ ದಾಖಲಿಸಿಕೊಳ್ಳದೆ ಇರುವ ಬಗ್ಗೆ ದೂರುಗಳಿವೆ. ಮಕ್ಕಳು ಮತ್ತು ಮಹಿಳೆಯರು ಧೈರ್ಯದಿಂದ ಪೊಲೀಸ್ ಠಾಣೆಗೆ ಬಂದು ದೂರು ನೀಡುವಂಥ ವಾತಾವರಣ ನಿರ್ಮಾಣವಾಗಬೇಕಿದೆ. ಜೊತೆಗೆ ಶಾಲಾ ಕಾಲೇಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಕಾರವನ್ನು ಕೂಡ ಪಡೆಯಬೇಕಿದೆ.

ಮಾದಕ ವಸ್ತುಗಳ ಸಾಗಣೆ, ಮಾರಾಟ ಸಂಬಂಧ ಗಡಿ ಜಿಲ್ಲೆ ಕೋಲಾರದಲ್ಲಿ 2025ರಲ್ಲಿ 30 ಪ್ರಕರಣಗಳು ದಾಖಲಾಗಿದ್ದವು. ಅದರಲ್ಲೂ ಕೈಗಾರಿಕಾ ಪ್ರದೇಶಗಳಾದ ವೇಮಗಲ್, ನರಸಾಪುರ ಹಾಗೂ ಮಾಲೂರಿನಲ್ಲಿ ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟದ ಹೆಚ್ಚಿನ ಪ್ರಕರಣಗಳು ಕಂಡುಬರುತ್ತಿವೆ. ಹೊರರಾಜ್ಯಗಳಿಂದ ಪ್ರಮುಖವಾಗಿ ಉತ್ತರ ಭಾರತದಿಂದ ಬಂದು ಈ ಪ್ರದೇಶದ ಕಾರ್ಖಾನೆ, ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಕೆಲ ಕಾರ್ಮಿಕರು ಡ್ರಗ್ಸ್ ಮಾರಾಟ ಮಾಡುತ್ತಿರುವ ಪ್ರಕರಣಗಳು ಈಚೆಗೆ ಪತ್ತೆಯಾಗಿವೆ. ಜೊತೆಗೆ ಕಾರ್ಮಿಕರ ನಡುವೆ ಕಿರಿಕ್, ಜಗಳ ಹೆಚ್ಚಿದ್ದು ಅದಕ್ಕೆ ಡ್ರಗ್ಸ್ ಸೇವನೆ ಕಾರಣ ಎನ್ನಲಾಗುತ್ತಿದೆ. ಈಚೆಗೆ ಹೊರರಾಜ್ಯದ ಇಬ್ಬರ ಕಾರ್ಮಿಕರು ಕೊಲೆಯೂ ನಡೆದು ಹೋಯಿತು. ಕಾರ್ಮಿಕರು, ಶಾಲಾ ಕಾಲೇಜು ಮಕ್ಕಳ ಮೇಲೆ ಹೆಚ್ಚು ನಿಗಾ ಇಡಬೇಕಿದೆ. ಇದಕ್ಕೆ ಆಯಾಯ ಕಂಪನಿಗಳ ಮಾಲೀಕರು, ಪೋಷಕರು ನೆರವಾಗಬೇಕಿದೆ. ಈಗಾಗಲೇ ಶಾಲಾ ಕಾಲೇಜುಗಳಲ್ಲಿನ ‘ಡ್ರಗ್ಸ್ ನಿಯಂತ್ರಣ ಸಮಿತಿ’ ರಚಿಸಿದ್ದು, ಪರಿಶೀಲನೆ ನಡೆಯಬೇಕಿದೆ.

ಗಡಿ ತಾಲ್ಲೂಕುಗಳಾದ ಶ್ರೀನಿವಾಸಪುರ, ಮುಳಬಾಗಿಲು, ಮಾಲೂರಿನಲ್ಲಿ ಜೂಜಾಟ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿಲ್ಲ. ಅಂದರ್ ಬಾಹರ್ ಇಸ್ಪೀಟ್ ಆಟ, ಕೋಳಿ ಅಂಕ ಪ್ರಕರಣಗಳು ನಡೆಯುತ್ತಿದೆ. ಪೊಲೀಸರು ಡ್ರೋಣ್ ಮೂಲಕ ಪತ್ತೆ ಹಚ್ಚಿ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಈ ಸಂಬಂಧ ಇನ್ನೂ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವ ದೂರುಗಳಿದ್ದು, ಕಡಿವಾಣ ಹಾಕಬೇಕಿದೆ.

ಪತ್ರಕರ್ತರ ಸಂಘದ ಮುಂದಿನ ಅಂತರಗಂಗೆ ರಸ್ತೆ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ, ವಿವಿಧೆಡೆ ರಾಜಾರೋಷವಾಗಿ ವ್ಹೀಲಿಂಗ್ ನಡೆಯುತ್ತಿದೆ. ಪೊಲೀಸರು ಈಗಾಗಲೇ ಹಲವರನ್ನು ಬಂಧಿಸಿದ್ದಾರೆ. ಮತ್ತಷ್ಟು ಹೆಚ್ಚಿನ ನಿಗಾ ಇಡಬೇಕಿದೆ.

ಇನ್ನು ಮಾಲೂರು ತಾಲ್ಲೂಕು ಸೇರಿದಂತೆ ಕೆಲವೆಡೆ ಕಲ್ಲು ಗಣಿಗಾರಿಕೆಯಲ್ಲಿ ನಿಯಮ ಉಲ್ಲಂಘಿಸುತ್ತಿರುವ ಆರೋಪಿಗಳು ಇವೆ. ಸ್ಫೋಟ ನಡೆದೂ, ಕಲ್ಲು ಕುಸಿದೋ ಹಲವಾರು ಕಾರ್ಮಿಕರ ಮೃತಪಟ್ಟಿದ್ದು, ಈ ಬಗ್ಗೆ ಹೆಚ್ಚಿನ ನಿಗಾ ಇಡಬೇಕಿದೆ.

2025ರಲ್ಲಿ ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಸರಗಳ್ಳತನ, ಮನೆಗಳ್ಳತನ ಸೇರಿದಂತೆ 533 ಕಳ್ಳತನ ಪ್ರಕರಣಗಳ ದಾಖಲಾಗಿದ್ದವು. ಅವುಗಳನ್ನು ಪತ್ತೆ ಮಾಡಿ ₹ 2.57 ಕೋಟಿ ಮೌಲ್ಯದ ವಸ್ತುಗಳನ್ನು ಮಾಲೀಕರಿಗೆ ಹಿಂತಿರುಗಿಸಿದ್ದಾರೆ. ಇದು ಪೊಲೀಸರ ಶ್ಲಾಘನೆಯ ಕೆಲಸ.

ಜಿಲ್ಲೆಯನ್ನು ಬಾಧಿಸುತ್ತಿರುವ ಪ್ರಮುಖ ಕಾನೂನು ಬಾಹಿರ ಚಟುವಟಿಕೆಗಳು

* ಡ್ರಗ್ಸ್ ಘಾಟು (ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚು)

* ಜೂಜಾಟ (ಇಸ್ಪೀಟ್ ಕೋಳಿ ಅಂಕ) * ಕಲ್ಲು ಗಣಿಗಾರಿಕೆ ನಿಯಮ ಉಲ್ಲಂಘನೆ; ಸ್ಫೋಟಕ ಕಲ್ಲುಬಿದ್ದು ಕಾರ್ಮಿಕರ ಸಾವು

* ಎಕ್ಸ್ಪ್ರೆಸ್ವೇನಲ್ಲಿ ಅತಿಯಾದ ವೇಗದಿಂದ ಚಾಲನೆ ಅಪಘಾತ * ಅತಿಯಾದ ವ್ಹೀಲಿಂಗ್ ಕೋಲಾರ ನಗರದಲ್ಲಿ ಸಂಚಾರ ಅಸ್ತವ್ಯಸ್ತ

* ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರ ಕಿರಿಕ್ ಕೊಲೆ * ಸರಗಳ್ಳತನ ಮನೆ ಅಂಗಡಿ ರೈತರ ಜಮೀನಿನಲ್ಲಿ ಉಪಕರಣ ಕಳ್ಳತನ ಶ್ರೀಗಂಧ ಕಳ್ಳತನ

* ಸೈಬರ್ ಅಪರಾಧ * ಪೋಕ್ಸೊ ಬಾಲ್ಯವಿವಾಹ ಬಾಲ ಗರ್ಭಿಣಿಯರ ಪ್ರಕರಣ ಹೆಚ್ಚಳ

* ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ

* ಜಾಲತಾಣಗಳಲ್ಲಿ ವಿಕೃತಿ

* ಪದೇಪದೇ ರೈತರು–ಅರಣ್ಯಾಧಿಕಾರಿಗಳ ಘರ್ಷಣೆ

* ಚೈನ್ ಲಿಂಕ್ ವ್ಯವಹಾರ

4 ವರ್ಷಗಳಲ್ಲಿ ನಾಲ್ವರು ಎಸ್ಪಿ

ಕೋಲಾರ ಜಿಲ್ಲೆಯಲ್ಲಿ ಪದೇಪದೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಬದಲಾಯಿಸಲಾಗುತ್ತಿದೆ. ಈಗಾಗಲೇ ನಾಲ್ಕು ವರ್ಷಗಳಲ್ಲಿ ನಾಲ್ವರು ಎಸ್ಪಿಗಳನ್ನು ಜಿಲ್ಲೆ ಕಂಡಿದೆ. 2023ರ ಜನವರಿ 12ರಂದು ಡಿ.ದೇವರಾಜ್ ವರ್ಗಾವಣೆಯಾದರು. ನಂತರ ಬಂದ ಎಂ.ನಾರಾಯಣ 2024ರ ಜುಲೈ 3ರಂದು ವರ್ಗಾವಣೆಗೊಂಡರು. ಅವರ ಬಳಿಕ ಎಸ್ಪಿಯಾದ ನಿಖಿಲ್ ಬಿ. 2025ರ ಡಿ.31ರಂದು ವರ್ಗಾವಣೆ ಆದರು. ಒಂದೂವರೆ ವರ್ಷವಷ್ಟೇ ಅವರು ಇಲ್ಲಿದ್ದರು. ಈಗ ಹೊಸದಾಗಿ ಕನ್ನಿಕಾ ಸಿಕ್ರಿವಾಲ್ ಅವರನ್ನು ಎಸ್ಪಿಯಾಗಿ ನೇಮಿಸಲಾಗಿದೆ.

ವಿವಿಧ ಪೊಲೀಸ್ ಠಾಣೆಗೆ ಭೇಟಿ

ಜಿಲ್ಲೆಗೆ ಹೊಸದಾಗಿ ಎಸ್ಪಿಯಾಗಿ ಬಂದಿರುವ ಕನ್ನಿಕಾ ಸಿಕ್ರಿವಾಲ್ ಅವರು ಈಗಾಗಲೇ ಎಲ್ಲಾ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದಿದ್ದಾರೆ. ಅಲ್ಲದೇ ವೇಮಗಲ್ ನರಸಾಪುರ ಔಟ್ಪೋಸ್ಟ್ ಶ್ರೀನಿವಾಸಪುರ ಮುಳಬಾಗಿಲು ತಾಲ್ಲೂಕಿನ ಪೊಲೀಸ್ ಠಾಣೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.