ನಲ್ಲೂರು ಹಾಗೂ ನತ್ತ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಪಾಲರ್ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ
ಸಚಿವ ಸತೀಶ ಜಾರಕಿಹೊಳಿ ಅವರು ಸಾಹುಕಾರ ಎಂಬುದನ್ನು ಕೇಳಿದ್ದೆ. ಆದರೆ ಅವರು ಮನಸ್ಸಿನಿಂದ ಸಾಹುಕಾರರು ವಿಶಾಲ ಮನಸ್ಸು ಹೊಂದಿದವರು ರೂಪಕಲಾ.
– ಶಶಿಧರ್, ಕೆಜಿಎಫ್ ಶಾಸಕಿ
ಜಿಲ್ಲೆಯಲ್ಲಿ ರೈಲು ಯೋಜನೆ ಜಾರಿಗೊಳಿಸುವ ಜವಾಬ್ದಾರಿ ಸಂಸದರಾದ ಕೋಲಾರದ ಮಲ್ಲೇಶ್ ಬಾಬು ಚಿಕ್ಕಬಳ್ಳಾಪುರ ಡಾ.ಕೆ.ಸುಧಾಕರ್ ಮೇಲಿದೆ. ಕೇಂದ್ರದ ಮೇಲೆ ಒತ್ತಡ ತರಬೇಕು.
– ಕೆ.ಎಚ್.ಮುನಿಯಪ್ಪ, ಆಹಾರ ಸಚಿವ
ರಾಜಕೀಯವಾಗಿ ಬೆಳೆಯಲು ಅಪ್ಪ ಕಾರಣ
ತಂದೆ ಕೆ.ಎಚ್.ಮುನಿಯಪ್ಪ 40 ವರ್ಷಗಳ ರಾಜಕೀಯ ಜೀವನದಲ್ಲಿ ಬಹಳ ಕಷ್ಟಪಟ್ಟಿದ್ದಾರೆ ಹಲವಾರು ಸವಾಲು ಎದುರಿಸಿದ್ದಾರೆ. ಅವರು ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ನಮಗೂ ಕಲಿಸಿದ್ದಾರೆ. ನಿತ್ಯ ಭಗವದ್ಗೀತೆ ಶ್ಲೋಕ ಓದಿಯೇ ರಾತ್ರಿ ಊಟ ಮಾಡುತ್ತಾರೆ. ನನಗೆ 15ನೇ ವಯಸ್ಸಿನಲ್ಲಿ ವಾಲ್ಮೀಕಿ ರಾಮಾಯಣ ಪರಿಚಯಿಸಿ ಸುಂದರಖಾಂಡ ಹೇಳಿಕೊಟ್ಟರು. ಗುರುವಾಗಿ ನಿಂತು ಅವರು ಮಾಡಿದ ಪಾಠ ನಾನು ರಾಜಕೀಯದಲ್ಲಿ ಗಟ್ಟಿಯಾಗಿ ನಿಲ್ಲಲು ಕಾರಣವಾಗಿದೆ ಎಂದು ಶಾಸಕಿ ರೂಪಕಲಾ ಶಶಿಧರ್ ಭಾವುಕವಾಗಿ ನುಡಿದರು.
ರೂಪಮ್ಮಗೆ ಸೀಟು ಕೊಡಿ
ಎಸ್‌ಎನ್‌ಎನ್ ವೇದಿಕೆ ಕಾರ್ಯಕ್ರಮದಲ್ಲಿ ಶಾಸಕಿ ರೂಪಕಲಾ ಶಶಿಧರ್ ನಿಂತುಕೊಂಡೇ ಸಚಿವರನ್ನು ಹಾಗೂ ಗಣ್ಯರನ್ನು ವಿಚಾರಿಸುತ್ತಿದ್ದರು. ಆಗ ಶಾಸಕ ಎಸ್.ಎನ್.ನಾರಾಯಣಸ್ವಾಮಿ ತಮ್ಮ ಆಸನದಿಂದ ಎದ್ದು ನಿಂತು ರೂಪಮ್ಮಗೆ ಸೀಟು ಕೊಡಿ. ನೀನು ಕುತ್ಕೊಮ್ಮ ಕುತ್ಕೊಮ್ಮ ಎಂದು ಹಟ ಹಿಡಿದರು. ರೂಪಕಲಾ ಕುಳಿತುಕೊಳ್ಳದೆ ಕಾರ್ಯಕ್ರಮದ ನಿರ್ವಹಣೆಯಲ್ಲಿ ತೊಡಗಿದ್ದರು.