ಮೈಸೂರು: ನಿವಾನ್ ರಾಘವೇಂದ್ರ ಹಾಗೂ ಆರುಷ್ ಭಟ್ ಇಲ್ಲಿ ನಡೆದಿರುವ ‘ರೋಟರಿ ಬೃಂದಾವನ 16 ವರ್ಷದೊಳಗಿನವರ ಮುಕ್ತ ರೇಟಿಂಗ್ ಚೆಸ್ ಟೂರ್ನಿ’ಯಲ್ಲಿ ಆರನೇ ಸುತ್ತಿನ ಅಂತ್ಯಕ್ಕೆ ಅಗ್ರಸ್ಥಾನದಲ್ಲಿ ಮುನ್ನಡೆದಿದ್ದಾರೆ.

ಬುಧವಾರ ಐದನೇ ಸುತ್ತಿನ ಹಣಾಹಣಿಯಲ್ಲಿ ಯು.ಡಿ. ಆಕಾಂಕ್ಷ್ ಎದುರಿನ ಪಂದ್ಯವನ್ನು ಡ್ರಾ ಮಾಡಿಕೊಂಡ ನಿವಾನ್, ಆರನೇ ಸುತ್ತಿನಲ್ಲಿ ಆರ್. ಋತ್ವಿಕ್ರನ್ನು ಮಣಿಸಿ ಅಂಕಗಳ ಮುನ್ನಡೆ ಹೆಚ್ಚಿಸಿಕೊಂಡರು. ಆರುಷ್ ಐದನೇ ಸುತ್ತಿನಲ್ಲಿ ಸಾತ್ವಿಕ್ ವಿಶ್ವನಾಥ್ರನ್ನು ಮಣಿಸಿದರೆ, ಆರನೇ ಸುತ್ತಿನಲ್ಲಿ ಯು.ಡಿ. ಆಕಾಂಕ್ಷ್ ಎದುರು ಡ್ರಾಗೆ ಸಮಾಧಾನಪಟ್ಟರು.

ಯು.ಡಿ. ಆಕಾಂಕ್ಷ್, ಎಸ್. ವಿಶ್ವಜಿತ್, ಸಾತ್ವಿಕ್ ವಿಶ್ವನಾಥ್, ಪಿ. ಅಭಿನವ ಹಾಗೂ ರೋಹನ್ ಗೌಡ ತಲಾ 5 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಮುನ್ನಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.