ಶ್ರೀನಿವಾಸಪುರ: ಈಗಾಗಲೇ ನನ್ನ ಅನುದಾನದಲ್ಲಿ ₹ 5 ಕೋಟಿಯನ್ನು ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗಾಗಿ ಕೊಟ್ಟಿದ್ದೇನೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ತಿಳಿಸಿದರು.

ಪಟ್ಟಣ ಹೊರವಲಯದ ಹೊಗಳಗೆರ ತೋಟಗಾರಿಕೆ ಇಲಾಖೆಯ ವಿಶ್ವವಿದ್ಯಾನಿಲಯದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಕೆಡಿಪಿ ಸಭೆಯಲ್ಲಿ ಮಾತನಾಡಿದರು.

ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ₹ 100 ಕೋಟಿ ಅನುದಾನ ಬರಬೇಕಿದ್ದು, ಈ ಕುರಿತು ನ್ಯಾಯಾಲಯದಲ್ಲಿ ದಾವೆ ಸಲ್ಲಿಸಿದ್ದೇನೆ. ತೀರ್ಪು ಬಂದ ನಂತರ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಹಮ್ಮಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕ್ಷೇತ್ರಕ್ಕೆ ಸಂಬಂದಿದಂತೆ ಎಲ್ಲಾ ಬಹುತೇಕ ಗ್ರಾಮಗಳಲ್ಲಿ ಹೈಮಾಸ್ಟ್ ಲೈಟ್ಗಳನ್ನು ಅಳವಡಿಸಲಾಗಿದೆ. ಕೋಲಾರ ತಾಲ್ಲೂಕು ಪಂಚಾಯಿತಿಗೆ ಸಂಬಂಧಿಸಿದಂತೆ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಕಾರ್ಯಗಳು ನಡೆಸಲು ಬೇಕಾಗಿರುವುದನ್ನ ಇಒ ಮಂಜುನಾಥ್ ಗಮನಿಸಬೇಕು ಎಂದರು.

ಕೆಲ ಹಳ್ಳಿಗಳಲ್ಲಿನ ರಸ್ತೆಗಳ ಬದಿಯಲ್ಲಿನ ಗಿಡಗಳು ಬೆಳೆದಿದ್ದು ಸ್ವಚ್ಛ ಮಾಡಬೇಕು. ಯಾವ ಪಂಚಾಯಿತಿಯಲ್ಲಿಯಾದರೂ ಶುದ್ಧ ನೀರಿನ ಘಟಕಗಳ ಕೆಟ್ಟು ನಿಂತಿದ್ದರೆ, ಹೈಮಾಸ್ಟ್ ಲೈಟ್ಗಳು ಕೆಟ್ಟುಹೋಗಿದ್ದರೆ ಸ್ಥಳೀಯ ಪಿಡಿಒಗಳು ಸರಿಪಡಿಸಬೇಕು ಎಂದು ಸೂಚನೆ ನೀಡಿದರು.

ಇಲಾಖೆಯ ಅಧಿಕಾರಿಗಳು ಯಾವುದೇ ಕಾರಣಕ್ಕೂ ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸಬೇಡಿ, ತಕ್ಷಣ ಸ್ಪಂದಿಸಿ, ಅವರ ಕೆಲಸ ಕಾರ್ಯಗಳನ್ನು ಮಾಡಿಸಿಕೊಡಿ ಎಂದರು.

ಜಿ.ಪಂ.ಮಾಜಿ ಅಧ್ಯಕ್ಷ ತೂಪಲ್ಲಿ ಆರ.ನಾರಾಯಣಸ್ವಾಮಿ, ತಾ.ಪಂ ಆಡಳಿತಾಧಿಕಾರಿ ಎಂ.ವಿ.ಮಂಜುಳಾ, ಇಒ ಕೆ.ಸರ್ವೆಶ್, ಕೋಲಾರ ತಾಲ್ಲೂಕು ಪಂಚಾಯಿತಿ ಇಒ ಮಂಜುನಾಥ್, ಕೆಡಿಪಿ ಸದಸ್ಯ ಹೊಗಳಗೆರೆ ಆಂಜಿ, ಶ್ರೀನಿವಾಸಪುರ ತಾ.ಪಂ.ಎಡಿ ರಾಮಪ್ಪ, ಸಿಬ್ಬಂದಿಗ ಅರುಣದೇವಿ, ಕೆ.ಎಂ.ಶ್ರೀನಾಥ್, ಸುದರ್ಶನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.