ಶ್ರೀನಿವಾಸಪುರ ತಾಲ್ಲೂಕಿನ ಗೌಡತಾತಗಡ್ಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಭರವಸೆ ಇಟ್ಟು ಪ್ರಶಸ್ತಿ ಕೊಟ್ಟಿದ್ದು ಅದನ್ನು ಉಳಿಸಿಕೊಳ್ಳಬೇಕು. ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ಶಾಲಾ ಶಿಕ್ಷಣ ಇಲಾಖೆಯವರು ನನ್ನನ್ನು ಗುರುತಿಸಿರುವುದು ಖುಷಿ ಉಂಟು ಮಾಡಿದೆ
ಜಿ.ಮಂಜುನಾಥ್ ಶಿಕ್ಷಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೌಡತಾತಗಡ್ಡ
ವಿದ್ಯಾರ್ಥಿಗಳು ಶಿಕ್ಷಕರಿಗೆ ಅರ್ಪಣೆ
ಈ ಪ್ರಶಸ್ತಿಯನ್ನು ನಮ್ಮ ಶಾಲೆಯ ವಿದ್ಯಾರ್ಥಿಗಳು ವರ ಪೋಷಕರು ಹಾಗೂ ಬಾಲ್ಯದ ಶಿಕ್ಷಕ ಗೋವಿಂದಪ್ಪ ಅವರಿಗೆ ಅರ್ಪಿಸುತ್ತೇನೆ ಎಂದು ಮಂಜುನಾಥ್ ಹೇಳಿದರು. ‘ಶಿಕ್ಷಕನಾಗಬೇಕು ಎಂಬ ಹಂಬಲ ಮೊದಲಿನಿಂದಲೂ ಇತ್ತು. ಗುಣಮಟ್ಟದ ಶಿಕ್ಷಣ ಕೊಡಲು ಪ್ರಯತ್ನಿಸುತ್ತಿದ್ದೇನೆ. ದಾನಿಗಳು ಹಳೆ ವಿದ್ಯಾರ್ಥಿಗಳ ನೆರವಿನಿಂದ ಶಾಲೆಗೆ ಈವರೆಗೆ ಸುಮಾರು ₹ 20 ಲಕ್ಷ ಮೊತ್ತದಲ್ಲಿ ಸೌಲಭ್ಯ ಕಲ್ಪಿಸಿದ್ದೇವೆ. ರಂಗ ಮಂದಿರ ಎರಡು ತರಗತಿಗಳಲ್ಲಿ ಸ್ಮಾರ್ಟ್ ಕ್ಲಾಸ್ ಎಲ್ಲಾ ತರಗತಿಗಳಲ್ಲಿ ಹಸಿರು ಬೋರ್ಡ್ ನಿರ್ಮಿಸಲಾಗಿದೆ’ ಎಂದರು.