ರಾಜ್ಯ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಿಂದ ಈ ಸೌಲಭ್ಯ ಕಲ್ಪಿಸಲಾಗುತ್ತಿದೆ. ಜಿಲ್ಲೆಯ ಬ್ಯಾಸ್ಕೆಟ್‌ಬಾಲ್ ಆಟಗಾರರಿಗೆ ಅಭ್ಯಾಸಕ್ಕೆ ಅನುಕೂಲವಾಗಲಿದೆ
ಆರ್.ಗೀತಾ ಸಹಾಯಕ ನಿರ್ದೇಶಕಿ ಕ್ರೀಡಾ ಇಲಾಖೆ
ಗುಣಮಟ್ಟದ ಆಟ ಮೂಡಿಬರಲಿದೆ
ಸಿಂಥೆಟಿಕ್ ಬ್ಯಾಸ್ಕೆಟ್‌ಬಾಲ್ ಅಂಕಣ ನಿರ್ಮಾಣ ಮಾಡುವುದರಿಂದ ಆಟಗಾರರಿಗೆ ತುಂಬಾ ಅನುಕೂಲವಾಗಲಿದೆ. ಬಿದ್ದರೂ ಗಾಯ ಆಗಲ್ಲ. ಇಲ್ಲಿ ಅಭ್ಯಾಸ ಮಾಡುವುದರಿಂದ ದೊಡ್ಡ ಮಟ್ಟದ ಟೂರ್ನಿಗಳಿಗೆ ಅನುಕೂಲವಾಗಲಿದೆ. ಗುಣಮಟ್ಟದ ಆಟ ಮೂಡಿಬರುತ್ತದೆ. ತರಬೇತಿ ಶಿಬಿರ ಕೂಡ ಆಯೋಜಿಸಬಹುದು ಎಂದು ಕನಕ ಬ್ಯಾಸ್ಕೆಟ್‌ಬಾಲ್ ಕ್ಲಬ್‌ನ ಅಂಚೆ ಅಶ್ವಥ್ ‘ಪ್ರಜಾವಾಣಿ’ಗೆ ತಿಳಿಸಿದರು.