ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾವಿದರ ಪ್ರತಿಭೆ ರಾಷ್ಟ್ರಮಟ್ಟಕ್ಕೆ ಪಸರಿಸಲಿ

ಜನಪದ ಜಾತ್ರೆಗೆ ಮೆರಗು ನೀಡಿದ ಕಲಾ ತಂಡಗಳು
Last Updated 9 ಫೆಬ್ರುವರಿ 2020, 13:20 IST
ಅಕ್ಷರ ಗಾತ್ರ

ಕೋಲಾರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ತಾಲ್ಲೂಕಿನ ವಕ್ಕಲೇರಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಜನಪದ ಜಾತ್ರೆ ವಿವಿಧ ಕಲಾ ತಂಡಗಳು ಮೆರಗು ನೀಡಿದವು.

ಆರ್‌.ಸಂತೋಷ್ ಮತ್ತು ತಂಡದಿಂದ ಡೊಳ್ಳು ಕುಣಿತ, ಮಂಜುನಾಥ್ ತಂಡದಿಂದ ತಮಟೆ ವಾದನ, ಶಿವಣ್ಣ ತಂದಿಂದ ಪೂಜ ಕುಣಿತ, ಹರೀಶ್ ತಂಡದಿಂದ ನಾದಸ್ವರ, ಜಾತ್ರೆಯ ಸೊಗಡು ಅನಾವರಣಗೊಂಡು ಮೆರಗು ಹೆಚ್ಚಿಸಿತು. ಗಾಯಕರಾದ ಡಿ.ಆರ್.ರಾಜಪ್ಪ ತಂಡ ಸುಗಮ ಸಂಗೀತ, ವೈ.ಜಿ.ಉಮಾ ತಂಡದವರು ಜನಪದ ಗೀತೆಗಳ ಮೂಲಕ ಪ್ರೇಕ್ಷಕರ ಗಮನಸೆಳೆದರು.

ಜನಪದ ಜಾತ್ರೆಗೆ ಚಾಲನೆ ನೀಡಿ ಮಾತನಾಡಿದ ಸಂಸದ ಎಸ್.ಮುನಿಸ್ವಾಮಿ, ‘ಕಲಾವಿದರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವಂತ ಕಾರ್ಯಕ್ರಮಗಳು ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಆಯೋಜನೆಯಾಗಬೇಕು’ ಎಂದು ತಿಳಿಸಿದರು.

‘ಗ್ರಾಮೀಣ ಭಾಗದಲ್ಲಿ ಸಾಕಷ್ಟು ಮಂದಿ ಕಲಾವಿದರ ಎಲೆಮರಿ ಕಾಯಿಯಂತೆ ಇದ್ದಾರೆ. ಅವರಲ್ಲಿ ಪ್ರತಿಭೆ ಗುರುತಿಸುವ ಕೆಲಸ ಇಂತಹ ಕಾರ್ಯಕ್ರಮಗಳಿಂದ ಅಗಬೇಕು. ರಾಜ್ಯದ ಯಾವುದೇ ಭಾಗದಲ್ಲಿ ಸಾಂಸ್ಕೃತಿಕ ಕಾರ್ಯದಲ್ಲಿ ಭಾಗಿಯಾದರೂ ಜಿಲ್ಲೆಯ ಕಲಾವಿದರು ನೆನಪಿಗೆ ಬರುತ್ತಾರೆ’ ಎಂದರು.

‘ಕರಗ, ಜನಪದ, ಕಲೆ, ಗಾಯನ ಕಾಲವಿದರು ಜಿಲ್ಲೆಯಲ್ಲಿ ಸಾಕಷ್ಟು ಮಂದಿ ಇದ್ದಾರೆ. ರಾಜಕೀಯ ಪಕ್ಷಗಳಿಂತ ಹೆಚ್ಚಾಗಿ ಕಲಾವಿದರ ಗುಂಪುಗಳಿವೆ. ಮೈಸೂರು ದಸರಾದಲ್ಲೂ ಕಲಾ ತಂಡಗಳು ಭಾಗಿಯಾಗಿ ಮೆರಗು ನೀಡುತ್ತವೆ’ ಎಂದು ಸಂತಸ ವ್ಯಕ್ತಪಡಿಸಿದರು.

‘ಉಬ್ಬಿಸಿದರೆ ನುಗ್ಗೆ ಮರ ಹತ್ತಲ್ಲ, ಹುಣಸೆ ಮರದಂತೆ ಜಿಡ್ಡಿನಂತೆ ಇರುತ್ತೆನೆ. ಹೆದರಿಕೆ ಬೆದರಿಕೆಗಳಿಗೆ ಎದರುವವನಲ್ಲ. ಜಿಲ್ಲೆಯ ಕಲಾವಿದರ ಪ್ರತಿ ರಾಷ್ಟ್ರಾದ್ಯಂತ ಪಸರಿಸಬೇಕು. ಕಲಾವಿದರ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ನಾವು ಮಾಡುತ್ತೆವೆ’ ಎಂದು ಭರವಸೆ ನೀಡಿದರು.

ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ನಿರ್ದೇಶನವಾಗುತ್ತಿರುವ ಸಿನಿಮಾಗಳು ಯುವಕರ ಬೆಳವಣಿಗೆಯ ಮೇಲೆ ಪ್ರಭಾರ ಬೀರುವ ರೀತಿ ಇವೆ’ ಎಂದು ವಿಷಾದಿಸಿದರು.

‘ಹಿಂದಿನ ಸಿನಿಮಾಗಳು ಸಮಾಜದ ಅಭಿವೃದ್ಧಿಗೆ ಪೂರಕವಾಗಿದ್ದವು, ನಾಗೇಶ್ವರ್ ರಾವ್, ಎನ್‌ಟಿಆರ್, ರಾಜ್‌ಕುಮಾರ್, ವಿಷ್ಣುವರ್ಧನ್ ಸಿನಿಮಾನಗಳು ಬಂದರೆ ಜನ ಕಿಕಿರುದು ಸೇರುತ್ತಿದ್ದರು, ಆ ದಿನಗಳು ಮರಳಿ ಬರುವಂತಾಗಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಮಾತನಾಡಿ, ‘ಕನ್ನಡವೇ ಜಾತಿ, ದೇವರು, ಧರ್ಮ ಎಂಬ ಅಡಿಯಲ್ಲಿ ಜನಪದ ಜಾತ್ರೆ ನಡೆಯಬೇಕು. ಇದರ ಅರಿವು ಮೂಡಿಸಿದರೆ ವೇದಿಕೆಗಳ ಮೇಲೆ ಕಲಾವಿದರು ಪ್ರತಿಭೆ ಪ್ರದರ್ಶಿಸಲು ಮುಂದಾಗುತ್ತಾರೆ’ ಎಂದು ತಿಳಿಸಿದರು.

‘ಗ್ರಾಮೀಣ ಭಾಗದಲ್ಲಿ ಯಾವುದೇ ಕಾರ್ಯಕ್ರಮ ರಾಜಕೀಯ ರಹಿತವಾಗಿ ನಡೆದರೆ ಯಶಸ್ವಿಯಾಗುತ್ತದೆ. ಕಲೆ ಯಾರ ಅಸ್ತಿಯೂ ಅಲ್ಲ, ಅವರಲ್ಲಿನ ಪ್ರತಿಭೆಯನ್ನು ಗುರುತಿಸುವ ಕೆಲಸ ಗ್ರಾಮದಿಂದ ಅಗಬೇಕು. ಇದಕ್ಕೆ ಇಲಾಖೆಯ ಅಧಿಕಾರಿಗಳು ಸಹಕಾರ ನೀಡಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಅರುಣ್ ಪ್ರಸಾದ್ ಮಾತನಾಡಿ, ‘ಅಳಿವಿನ ಹಂಚಿನಲ್ಲಿರುವ ಗ್ರಾಮೀಣ ಕಲೆಗಳನ್ನು ಶಾಶ್ವತವಾಗಿ ಉಳಿಸುವ ಕೆಲ ಜನಪದ ಜಾತ್ರೆಯ ಉದ್ದೇಶ’ ಎಂದು ತಿಳಿಸಿದರು.

‘ಗ್ರಾಮೀಣ ಭಾಗದ ಕಲಾವಿದರನ್ನು ಗುರುತಿಸುವ ಉದ್ದೇಶದಿಂದ ಜಾತ್ರೆ ನಡೆಸಲಾಗುತ್ತಿದೆ. ಇಂತಹ ಕಾರ್ಯಕ್ರಮಗಳನ್ನು ನಡೆಸುವುದರಿಂದ ಕಲಾವಿದರು ಎದುರಿಸುತ್ತಿರುವ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶ ನೀಡಿದಂತಾಗುತ್ತದೆ. ಸ್ಥಳೀಯ ಕಲಾವಿದರು ಕಾರ್ಯಕ್ರಮದ ಪ್ರಯೋಜನೆ ಪಡೆದುಕೊಳ್ಳಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಪಾಲಾಕ್ಷ ಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ಡಿ.ಎಂ.ರವಿಕುಮಾರ್, ವಕ್ಕಲೇರಿ ಗ್ರಾಮ ಪಂಚಾಯತಿ ಅಧ್ಯಕ್ಷ ಚಂದ್ರಪ್ಪ, ಅಭಿವೃದ್ಧಿ ಅಧಿಕಾರಿಗಳಾದ ಆರ್.ಮಂಜುನಾಥ್ ಪ್ರಸಾದ್, ಸರಿತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT