ಮಾಲೂರು: ನಗರದಲ್ಲಿ ನ.26ರಂದು ಭೀಮ್ ಆರ್ಮಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಪಥ ಸಂಚಲನ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಯಿತು.

ಪಥ ಸಂಚಲನದಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದು, ನಗರ ಸಂಪೂರ್ಣ ನೀಲಿಮಯವಾಗಿರುತ್ತದೆ ಎಂದು ತಾ.ಪಂ.ಮಾಜಿ ಅಧ್ಯಕ್ಷ ಸಂಪಂಗೆರೆ ವಿ.ಮುನಿರಾಜ್ ಹೇಳಿದರು.

ದೇಶದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ಉಳಿವಿಗಾಗಿ ಪಥ ಸಂಚಲನವನ್ನು ಆಯೋಜಿಸಲಾಗಿದೆ ಇದಕ್ಕೆ ಸರ್ವ ಸದಸ್ಯರು ಒಪ್ಪಿಗೆ ನೀಡಿದ್ದಾರೆ. ತಾಲ್ಲೂಕಿನ 260ಕ್ಕೂ ಹೆಚ್ಚು ಹಳ್ಳಿಗಳ ಜನರು ಭಾಗವಹಿಸಲಿದ್ದಾರೆ. ನಗರದ ಹೋಂಡಾ ಕ್ರೀಡಾಂಗಣದಲ್ಲಿ ಪಥ ಸಂಚಲನ ನಡೆಯಲಿದೆ ಎಂದರು.

ತಾಲ್ಲೂಕು ಹಾಗೂ ಹೋಬಳಿ ಸಮಿತಿಗಳನ್ನು ರಚಿಸಿ ನಂತರ ಕಾರ್ಯಕ್ರಮದ ರೂಪುರೇಷೆಗಳನ್ನು ರೂಪಿಸಲಾಗುವುದು. ಎಲ್ಲರೂ ಪಕ್ಷಾತೀತವಾಗಿ ಕೆಲಸ ಮಾಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.

ಜಿ.ಪಂ.ಮಾಜಿ ಸದಸ್ಯ ಎಂ.ನಾರಾಯಣಸ್ವಾಮಿ, ತಾ.ಪಂ.ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವಿ.ನಾಗೇಶ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ನಯಿಂ ಉಲ್ಲಾ, ಎಂ.ವಿಜಯ ನರಸಿಂಹ, ಇಂತಿಯಾಜ್, ಸಂತೆಹಳ್ಳಿ ನಾರಾಯಣಸ್ವಾಮಿ, ನಾರಾಯಣಸ್ವಾಮಿ, ತಿಪ್ಪಸಂದ್ರ ಶ್ರೀನಿವಾಸ್, ಟೇಕಲ್ ವೆಂಕಟೇಶ್, ಎಸ್.ಎಂ.ವೆಂಕಟೇಶ್, ನೊಸಗೆರೆ ಅಶೋಕ್ ಕುಮಾರ್, ಅರಳೇರಿ ಸಂಪಂಗಿ, ಅಶೋಕ್, ಶಬ್ಬೀರ್, ಶ್ರೀನಿವಾಸ್, ನವೀನ್, ಎ.ಅಶ್ವಥ್ ರೆಡ್ಡಿ, ಮುನಿರಾಜ್ ಇನ್ನಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.