ಕೋಲಾರ: ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಮಾವು ಮಾರಾಟಕ್ಕೆ ನೋಂದಣಿ ಮಾಡಿಕೊಳ್ಳಲು ಜುಲೈ 24 ಕಡೆಯ ದಿನವಾಗಿದ್ದು, ಅವಧಿ ವಿಸ್ತರಣೆಗೆ ಜಿಲ್ಲೆಯ ಮಾವು ಬೆಳೆಗಾರರು ಹಾಗೂ ರೈತ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ. ತೋಟದಲ್ಲಿ ಮಾವು ಫಸಲು ಇದ್ದು, ಕಟಾವು ಹಾಗೂ ಸಾಗಣೆಗೆ ಸಮಯಾವಕಾಶ ನೀಡುವಂತೆ ಕೋರಿದ್ದಾರೆ. ಜೊತೆಗೆ ಖರೀದಿ ಪ್ರಮಾಣ ಹೆಚ್ಚಳಕ್ಕೂ ಆಗ್ರಹಿಸಿದ್ದಾರೆ.

ಮಾವು ಖರೀದಿ ಅವಧಿ ವಿಸ್ತರಣೆ ಹಾಗೂ ಪ್ರಮಾಣ ಹೆಚ್ಚಳಕ್ಕೆ ಈಗಾಗಲೇ ಸರ್ಕಾರಕ್ಕೆ ಜಿಲ್ಲಾಡಳಿತ ಪ್ರಸ್ತಾವ ಸಲ್ಲಿಸಿದೆ. ಬೆಂಗಳೂರಿನಲ್ಲಿ ಮಂಗಳವಾರ ಕೃಷಿ ಸಚಿವ ಎನ್.ಚಲುವನಾರಾಯಣಸ್ವಾಮಿ ನೇತೃತ್ವದ ಸಭೆಯಲ್ಲಿ ಚರ್ಚೆ ನಡೆದು ಕಾಲಾವಧಿ ವಿಸ್ತರಣೆಗೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆಯಲಾಗಿದೆ. ಆಗಸ್ಟ್ 12ರವರೆಗೆ ವಿಸ್ತರಣೆ ಮಾಡುವಂತೆ ಸಚಿವರು ಕೋರಿದ್ದಾರೆ. ಅಧಿಕಾರಿಗಳು ವಿಸ್ತರಣೆಯ ಆಶಾಭಾವದಲ್ಲಿದ್ದಾರೆ. ಆದರೆ, ರೈತರು ಮಾತ್ರ ಆತಂಕಗೊಂಡಿದ್ದು, ಶ್ರೀನಿವಾಸಪುರದ ಎಂಪಿಎಂಸಿ ಕೌಂಟರ್ಗಳಲ್ಲಿ ದಟ್ಟಣೆ ಕಂಡುಬಂತು.

ಹೆಚ್ಚಿನ ರೈತರು ನೋಂದಣಿ ಮಾಡಿಸಲು ಹಾಗೂ ಮಾರಾಟದ ದಾಖಲೆ ಸಲ್ಲಿಸಲು ಪ್ರತ್ಯೇಕ ಕೌಂಟರ್ಗಳಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದರು. ಜೊತೆಗೆ ಸರ್ವರ್ ಸಮಸ್ಯೆ ಕಾರಣ ನೋಂದಣಿಗೆ ಸ್ವಲ್ಪ ತೊಂದರೆಯೂ ಆಯಿತು.

‘ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನೋಂದಣಿ ಮಾಡಿಕೊಳ್ಳಲು ಹಾಗೂ ದಾಖಲಾತಿ ಸಲ್ಲಿಸಲು ಯಾವುದೇ ಸಮಸ್ಯೆ ಆಗಿಲ್ಲ. ಗಡುವು ಮುಗಿಯುವುದರೊಳಗೆ ರೈತರು ಸಮರ್ಪಕ ದಾಖಲೆ ಸಲ್ಲಿಸಿ ಬೇಗನೇ ನೋಂದಣಿ ಮಾಡಿಕೊಂಡು, ಬಿಲ್ ನೀಡಬೇಕು. ಅವಧಿ ವಿಸ್ತರಣೆ ಆಗುತ್ತೋ ಇಲ್ಲವೋ ಎಂಬುದು ಖಚಿತವಾಗಿಲ್ಲ’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಸ್.ಆರ್.ಕುಮಾರಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮಾವು ಧಾರಣೆ ಕುಸಿತದಿಂದ ಸಂಕಷ್ಟದಲ್ಲಿರುವ ಬೆಳೆಗಾರರಿಗೆ ಸರ್ಕಾರವು ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಕೆ.ಜಿಗೆ ₹ 4 ಬೆಂಬಲ ಬೆಲೆ ಕೊಡುತ್ತಿದೆ. ಈ ಯೋಜನೆಯಡಿ ಪ್ರತಿ ಎಕರೆಗೆ 20 ಕ್ವಿಂಟಲ್ನಂತೆ ಗರಿಷ್ಠ 5 ಎಕರೆಗೆ 100 ಕ್ವಿಂಟಲ್ವರೆಗೆ ಮಿತಿಗೊಳಿಸಿ ವ್ಯತ್ಯಾಸದ ಮೊತ್ತವನ್ನು ಪಾವತಿ ಮಾಡಲಾಗುತ್ತಿದೆ. ಖರೀದಿ ಪ್ರಮಾಣ ಹೆಚ್ಚಿಸಲೂ ಜಿಲ್ಲಾಡಳಿತವು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವ ಕಳಿಸಿದೆ.

ನೀಲಂ ಮತ್ತು ತೋತಾಪುರಿ ತಳಿಯ ಮಾವನ್ನು ರೈತರು ಹೆಚ್ಚಾಗಿ ಮಾರಾಟ ಮಾಡುತ್ತಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಕೆ.ಜಿ ನೀಲಂ ತಳಿಗೆ ₹ 3ರಿಂದ 4, ತೋತಾಪುರಿಗೆ ₹ 5ರಿಂದ 7 ದರ ಸಿಗುತ್ತಿದೆ. ಜೊತೆಗೆ ಬೆಂಬಲ ಬೆಲೆ ಲಭ್ಯವಾಗುತ್ತದೆ. ಮಾರುಕಟ್ಟೆಯಲ್ಲಿ ಕೆ.ಜಿ ಮಾವಿಗೆ ₹ 16ಕ್ಕಿಂತ ಹೆಚ್ಚು ದರ ಲಭಿಸಿದರೆ ಬೆಂಬಲ ಬೆಲೆ ಸಿಗಲ್ಲ.

ಈವರೆಗೆ ಸುಮಾರು 14,500 ಮಾವು ಬೆಳೆಗಾರರು ನೋಂದಣಿ ಮಾಡಿಕೊಂಡಿದ್ದು, ಸುಮಾರು ಸುಮಾರು 9 ಸಾವಿರ ಮಂದಿ ಬಿಲ್ ಸಲ್ಲಿಸಿದ್ದಾರೆ. ಕೆಲವರು ನೋಂದಣಿ ಮಾಡಿಕೊಂಡಿದ್ದು, ಬಿಲ್ ಸಲ್ಲಿಸಿಲ್ಲ. ಹಲವು ರೈತರು ತಮ್ಮ ತೋಟದಲ್ಲಿನ ಮಾವು ಕಟಾವು ಮಾಡಬೇಕಿದೆ. ಅದನ್ನು ಮಾರುಕಟ್ಟೆಗೆ ತರಲು ಸಮಯಬೇಕಿದೆ. ಹೀಗಾಗಿ, ಅನುದಾನ ವಾಪಸ್ ಹೋಗುವ ಆತಂಕ ವ್ಯಕ್ತಪಡಿಸಿ ಕಾಲಾವಕಾಶ ವಿಸ್ತರಿಸಲು ಕೋರಿದ್ದಾರೆ.

‘ಒಂದು ಎಕರೆಯಲ್ಲಿ ಸುಮಾರು 40ರಿಂದ 50 ಕ್ವಿಂಟಲ್ ಮಾವಿನ ಫಸಲು ಬರುತ್ತದೆ. ಆದರೆ, ಸರ್ಕಾರ ಬೆಂಬಲ ಬೆಲೆಯಡಿ ಎಕರೆಗೆ 2 ಟನ್ ಮಾವು ಮಾತ್ರ ಖರೀದಿ ಮಾಡುತ್ತಿದೆ. ಇದರಿಂದ ನಮಗೆ ನಷ್ಟವಾಗಿದೆ. ಪ್ರಮಾಣ ಹೆಚ್ಚಿಸಬೇಕು ’ ಎಂದು ಮಾವು ಬೆಳೆಗಾರ ತೊಟ್ಲಿ ರಮೇಶ್ ಮನವಿ ಮಾಡಿದರು.

ಬೆಂಬಲ ಬೆಲೆ ಯೋಜನೆಯಡಿ ಎಪಿಎಂಸಿಯಲ್ಲಿ ಮಾರಾಟವಾದ ಉತ್ಪನ್ನದ ಧಾರಣೆಯ ಆಧಾರದ ಮೇಲೆ ವ್ಯತ್ಯಾಸದ ಮೊತ್ತವನ್ನು ಪಾವತಿಸಲಾಗುತ್ತದೆ. ಸರ್ಕಾರದ ಮಾರ್ಗಸೂಚಿಯನ್ವಯ ರೈತರು ಮಾವು ಮಾರಾಟಕ್ಕೂ ಮೊದಲು ನೋಂದಣಿ ಮಾಡಿಕೊಳ್ಳಬೇಕು. ಮಾವಿನ ಉತ್ಪನ್ನವನ್ನು ಮಾರಾಟ ಮಾಡಿದ ನಂತರ ಆನ್ಲೈನ್ ನೋಂದಣಿ ಪ್ರಮಾಣ ಪತ್ರದ ಜೊತೆ ಚೆಕ್ ಪೋಸ್ಟ್ನಲ್ಲಿ ಪಡೆದ ವಾಹನ ಪ್ರವೇಶ ಪತ್ರ, ತೂಕದ ಚೀಟಿ, ಎಪಿಎಂಸಿ ಮಂಡಿ ಅಥವಾ ಸಂಸ್ಕರಣಾ ಘಟಕದ ಬಿಲ್, ಆಧಾರ್ ಪ್ರತಿಯನ್ನು ಎಪಿಎಂಸಿ ಕಚೇರಿಯ ದಾಖಲಾತಿ ಸ್ವೀಕೃತಿ ಕೇಂದ್ರದಲ್ಲಿ ಸಲ್ಲಿಸಬೇಕು.

ಕೆ.ಜಿಗೆ ₹ 4 ಬೆಂಬಲ ಬೆಲೆಯಡಿ ಮಾವು ಖರೀದಿ | ಆಗಸ್ಟ್ 12ರವರೆಗೆ ಅವಧಿ ವಿಸ್ತರಣೆಗೆ ಮನವಿ | ಕೇಂದ್ರ ಕೃಷಿ ಸಚಿವರಿಗೆ ಚಲುವನಾರಾಯಣಸ್ವಾಮಿ ಪತ್ರ

ರೈತರು ಜುಲೈ 24ರೊಳಗೆ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿಗೆ ಯಾವುದೇ ಸಮಸ್ಯೆ ಇಲ್ಲ. ಕೌಂಟರ್ ಹೆಚ್ಚು ಮಾಡಲು ಸೂಚಿಸಲಾಗಿದೆ. ದಿನಾಂಕ ವಿಸ್ತರಣೆಗೆ ಪ್ರಸ್ತಾವ ಸಲ್ಲಿಸಲಾಗಿದೆ
ಎಸ್.ಆರ್.ಕುಮಾರಸ್ವಾಮಿ ಉಪನಿರ್ದೇಶಕ ತೋಟಗಾರಿಕೆ ಇಲಾಖೆ

ಬೆಂಬಲ ಬೆಲೆಯಡಿ ಮಾವು ಖರೀದಿ ನೋಂದಣಿ ಗಡುವು ವಿಸ್ತರಣೆ ಮಾಡುವುದರ ಜೊತೆಗೆ ಖರೀದಿ ಪ್ರಮಾಣವನ್ನೂ ಹೆಚ್ಚಿಸಬೇಕು. ಈಗ ಇರುವ ಮಿತಿ ತೆಗೆಯಬೇಕು
ರಮೇಶ್ ಮಾವು ಬೆಳೆಗಾರ ತೊಟ್ಲಿ

ಕಾಲಾವಧಿ ವಿಸ್ತರಣೆಗೆ ಸರ್ಕಾರಕ್ಕೆ ಪ್ರಸ್ತಾವ

‘ಬೆಂಬಲ ಬೆಲೆ ಯೋಜನೆಯಡಿ ಮಾವು ಖರೀದಿ ನೋಂದಣಿ ಅವಧಿ ವಿಸ್ತರಿಸುವಂತೆ ರೈತರ ಮನವಿ ಮಾಡಿದ್ದು ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ತಿಳಿಸಿದ್ದಾರೆ. ‘ಯಾವುದಕ್ಕೂ ಕಾಯದೆ ನೋಂದಣಿ ಮಾಡಿಕೊಂಡು ಎಪಿಎಂಸಿಗೆ ಮಾರಾಟ ಮಾಡಿದವರು ಬೇಗನೇ ಬಿಲ್ ಕೊಡಬೇಕು. ಈಗಾಗಲೇ ಬಿಲ್ ಸಲ್ಲಿಸಿದವರ ಖಾತೆಗೆ ಹಣ ಹೋಗಲು ಪ್ರಾರಂಭವಾಗಿದೆ. ಬೆಂಬಲ ಬೆಲೆಯಡಿ ಸರ್ಕಾರ ₹ 100 ಕೋಟಿ ಅನುದಾನ ನೀಡಿದೆ’ ಎಂದಿದ್ದಾರೆ.

Cut-off box - ಎಕರೆಗೆ 40 ಕ್ವಿಂಟಲ್ ಖರೀದಿಗೆ ಆಗ್ರಹ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಎಕರೆಗೆ 40 ಕ್ವಿಂಟಲ್ನಂತೆ ಗರಿಷ್ಠ 5 ಎಕರೆಗೆ 200 ಕ್ವಿಂಟಲ್ವರೆಗೆ ಖರೀದಿಸಬೇಕೆಂದು ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನೀಲಟೂರು ಚಿನ್ನಪ್ಪ ರೆಡ್ಡಿ ಆಗ್ರಹಿಸಿದ್ದಾರೆ. ಇದು ನಮ್ಮ ಮೊದಲ ಬೇಡಿಕೆಯಾಗಿದ್ದು ಹೆಚ್ಚಳ ಮಾಡದಿದ್ದರೆ ಮತ್ತೆ ಹೋರಾಟಕ್ಕ ಇಳಿಯುವುದಾಗಿ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಅವಧಿ ವಿಸ್ತರಣೆಗೂ ಒತ್ತಾಯಿಸಿದ್ದಾರೆ. ಖರೀದಿ ಪ್ರಮಾಣ ಹೆಚ್ಚಿಸಲೂ ಜಿಲ್ಲಾಡಳಿತವು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವ ಕಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.