ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾರಪೇಟೆ: ಜೆಡಿಎಸ್‌–ಬಿಜೆಪಿ ಸಮನ್ವಯ ಸಭೆಗೆ ‌ಮುನಿಸ್ವಾಮಿ ಬೆಂಬಲಿಗರು ಗೈರು

Published 2 ಏಪ್ರಿಲ್ 2024, 15:05 IST
Last Updated 2 ಏಪ್ರಿಲ್ 2024, 15:05 IST
ಅಕ್ಷರ ಗಾತ್ರ

ಬಂಗಾರಪೇಟೆ: ತಾಲ್ಲೂಕಿನ ಕೆಸಿಆರ್ ಕಚೇರಿಯಲ್ಲಿ ಮಂಗಳವಾರ ಜೆಡಿಎಸ್‌–ಬಿಜೆಪಿ ಸಮನ್ವಯ ಸಭೆ ನಡೆದಿದ್ದು, ಸಭೆಗೆ ಸಂಸದ ಎಸ್‌.ಮುನಿಸ್ವಮಿ ಬೆಂಬಲಿಗರ ಗೈರು ಹಾಜರಿ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.

ಈ ಬಾರಿ ಕೋಲಾರ ಕ್ಷೇತ್ರದಿಂದ ಸಂಸದ ಎಸ್‌.ಮುನಿಸ್ವಾಮಿ ಅವರಿಗೆ ಟಿಕೆಟ್ ಸಿಗುವ ನಿರೀಕ್ಷೆ ಇತ್ತು. ಆದರೆ, ಜೆಡಿಎಸ್‌ ಅಬ್ಯರ್ಥಿ ಎಂ.ಮಲ್ಲೇಶ್‌ ಬಾಬು ಅವರಿಗೆ ಟಿಕೆಟ್ ಸಿಕ್ಕಿರುವ ಮುನಿಸ್ವಾಮಿ ಬೆಂಬಲಿಗರಲ್ಲಿ ಅಸಮಾಧಾನ ಮೂಡಿಸಿದೆ. ಈ ನಿಟ್ಟಿನಲ್ಲಿ ಎರಡು ಪಕ್ಷಗಳ ಅಸಮಾಧಾನ ತೊಲಗಿಸಲು ಸಭೆ ಕರೆಯಲಾಗಿತ್ತು. ಆದರೆ ಅದಕ್ಕೆ ಸಂಸದ ಎಸ್‌. ಮುನಿಸ್ವಾಮಿ ಬೆಂಬಲಿಗರು ಗೈರಾಗಿದ್ದಾರೆ.

ಬಿಜೆಪಿ ಮುಖಂಡರಾದ ಬಿ.ಪಿ.ವೆಂಕಟಮುನಿಯಪ್ಪ, ಕೆ.ಚಂದ್ರಾರೆಡ್ಡಿ, ಶಿವುಕುಮಾರ್, ಸಂಪಂಗಿರೆಡ್ಡಿ, ಬಿ.ವಿ.ಮಹೇಶ್, ಜೆಡಿಎಸ್ ಮುಖಂಡರಾದ ಮುನಿರಾಜು, ವಡಗೂರ್ ಹರೀಶ್ ಮತ್ತಿತ್ತರರು ಸಭೆಯಲ್ಲಿ ಭಾಗವಹಿಸಿದ್ದರು.

ಬಿಜೆಪಿ ಮುಖಂಡರಾದ ಬಿ.ಪಿ.ವೆಂಕಟಮುನಿಯಪ್ಪ ಕೆ.ಚಂದ್ರಾರೆಡ್ಡಿ ಶಿವುಕುಮಾರ್ ಸಂಪಂಗಿರೆಡ್ಡಿ ಬಿ.ವಿ.ಮಹೇಶ್  ಜೆಡಿಎಸ್ ಮುಖಂಡರಾದ ಮುನಿರಾಜು ವಡಗೂರ್ ಹರೀಶ್ ಮತ್ತಿತ್ತರರು ಸಭೆಯಲ್ಲಿ ಇತರರು ಭಾಗವಹಿಸಿ
ಬಿಜೆಪಿ ಮುಖಂಡರಾದ ಬಿ.ಪಿ.ವೆಂಕಟಮುನಿಯಪ್ಪ ಕೆ.ಚಂದ್ರಾರೆಡ್ಡಿ ಶಿವುಕುಮಾರ್ ಸಂಪಂಗಿರೆಡ್ಡಿ ಬಿ.ವಿ.ಮಹೇಶ್ ಜೆಡಿಎಸ್ ಮುಖಂಡರಾದ ಮುನಿರಾಜು ವಡಗೂರ್ ಹರೀಶ್ ಮತ್ತಿತ್ತರರು ಸಭೆಯಲ್ಲಿ ಇತರರು ಭಾಗವಹಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT