ಎಪಿಎಂಸಿಗೆ 100 ಎಕರೆ ಜಾಗಕ್ಕೆ ಮನವಿ
ಹೊಸ ಕೃಷಿ ಮಾರುಕಟ್ಟೆಗೆ 100 ಎಕರೆ ಜಾಗದ ಅವಶ್ಯವಿದ್ದು ಇದಕ್ಕಾಗಿ ಐದು ಬಾರಿ ಪ್ರಯತ್ನ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಹೇಳಿದರು. ಪ್ರಸ್ತುತ ಮಾರುಕಟ್ಟೆಗೆ ಸೂಕ್ತವಾದ 60 ಎಕರೆ ಕಂದಾಯ ಜಾಗವನ್ನು ಗುರುತಿಸಲಾಗಿದೆ. ಇದಕ್ಕೆ ಹೊಂದಿಕೊಂಡಿರುವ 20 ಎಕರೆ ಅರಣ್ಯ ಪ್ರದೇಶವನ್ನು ಪರಿವರ್ತಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಗುರುತಿಸಲಾದ 60 ಎಕರೆ ಜಾಗ ಮಂಜೂರಾತಿಗಾಗಿ ರಾಜ್ಯ ಸರ್ಕಾರಕ್ಕೆ ಶೀಘ್ರದಲ್ಲೇ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಪ್ರಸ್ತಾವನೆಯ ಎಲ್ಲಾ ವಿವರಗಳನ್ನು ಸಮಿತಿಗೆ ಸಲ್ಲಿಸಿದರೆ ಸಂಸದರ ನಿಯೋಗವನ್ನು ಕಳುಹಿಸಿ ಜಾಗ ಮಂಜೂರಾತಿಗೆ ಪ್ರಯತ್ನಿಸುವುದಾಗಿ ಸಮಿತಿ ಅಧ್ಯಕ್ಷರು ಭರವಸೆ ನೀಡಿದರು.