ಅಕ್ಕ ಕೆಫೆಯನ್ನು ಪ್ರಾರಂಭಿಸಲು ಇದುವರೆಗೂ ಯಾರೂ ಬಾರದೆ ಇರುವ ಕಾರಣ ಬೀಗವನ್ನು ಜಡಿದಿರುವುದು.
ಕೆಫೆ ಆರಂಭಿಸಲು ಮುಂದಾಗುವವರು ಮುಂಗಡವಾಗಿ ₹30 ಸಾವಿರ ಪಾವತಿಸಬೇಕು. ಆರಂಭದಲ್ಲಿ ಮಾಸಿಕ 5500 ಬಾಡಿಗೆ ನೀಡಬೇಕು. ಅಂಥ ಅರ್ಹರಿಗೆ ಕೆಫೆ ಹಸ್ತಾಂತರಿಸಲಾಗುವುದು
ಡಾ.ಕೆ. ಸರ್ವೇಶ್ ಕಾರ್ಯ ನಿರ್ವಾಹಕ ಅಧಿಕಾರಿ ತಾ. ಪಂ
ಮುಳಬಾಗಿಲು ನಗರದಲ್ಲಿ ಇಂದಿರಾ ಕ್ಯಾಂಟೀನ್ಆಹಾರ ಪದಾರ್ಥಗಳು ರಿಯಾಯಿತಿ ದರದಲ್ಲಿ ಲಭ್ಯವಾಗುತ್ತಿದೆ. ಅಕ್ಕ ಕೆಫೆಯಿಂದ ಮತ್ತಷ್ಟು ರಿಯಾಯಿತಿ ಸಿಗಲಿದ್ದು ಜನಸಾಮಾನ್ಯರಿಗೆ ಅನುಕೂಲವಾಗಲಿದೆ
ನೀಲಮ್ಮ ಸ್ಥಳೀಯರು
ಸಂಘದ ಸದಸ್ಯರಿಗೆ ಮಾಹಿತಿ ಕೊರತೆ
ಅಕ್ಕ ಕೆಫೆಯ ಕಟ್ಟಡ ನಿರ್ಮಾಣ ಕಾಮಗಾರಿ ಮುಗಿದು ಒಂದೆರಡು ತಿಂಗಳು ಕಳೆಯುತ್ತಿದೆ. ಆದರೆ ಇದುವರೆಗೆ ಮಹಿಳಾ ಸ್ವಸಹಾಯದ ಗುಂಪಿನ ಯಾವುದೇ ಸದಸ್ಯರು ಕೆಫೆ ನಿರ್ವಹಿಸಲು ಮುಂದೆ ಬಂದಿಲ್ಲ. ಅಕ್ಕ ಕೆಫೆ ಕಟ್ಟಡ ಕಾಮಗಾರಿ ಮುಕ್ತಾಯವಾಗಿದೆ ಮತ್ತು ಅಕ್ಕ ಕೆಫೆಯನ್ನು ಯಾರು ನಿರ್ವಹಿಸಬಹುದು ಎಂಬ ಕುರಿತು ಸರಿಯಾದ ರೀತಿಯಲ್ಲಿ ಪ್ರಚಾರ ಮಾಡದೆ ಇರುವುದು ಅಕ್ಕ ಕೆಫೆ ಆರಂಭಕ್ಕೆ ಹಿನ್ನಡೆಗೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ. ಅಕ್ಕ ಕೆಫೆಯ ಬಗ್ಗೆ ತಾಲ್ಲೂಕಿನ 30 ಗ್ರಾಮ ಪಂಚಾಯಿತಿಗಳಲ್ಲಿ ಭಿತ್ತಿಪತ್ರಗಳು ಅಥವಾ ಇನ್ನಿತರ ಸಮೂಹ ಮಾಧ್ಯಮಗಳ ಮೂಲಕ ಪ್ರಚಾರ ಮಾಡಬೇಕಿತ್ತು. ಜನರಲ್ಲಿ ಜಾಗೃತಿ ಮೂಡಿಸಬೇಕಿತ್ತು. ಆದರೆ ಇದ್ಯಾವುದನ್ನೂ ಮಾಡಿಲ್ಲ ಎಂದು ದೂರುತ್ತಾರೆ ಸ್ಥಳೀಯರು. ಕೆಫೆಯ ಕಟ್ಟಡ ಕಾಮಗಾರಿ ಪೂರ್ಣವಾಗಿರುವ ಕುರಿತು ತಾಲ್ಲೂಕು ಪಂಚಾಯಿತಿ ವಾಟ್ಸ್ಆ್ಯಪ್ ಗುಂಪುಗಳಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ಕೆಲವರು ಬಂದು ನೋಡಿಕೊಂಡು ಹೋಗಿದ್ದಾರೆ. ಅರ್ಹರು ಬಂದಲ್ಲಿ ಕೆಫೆಯನ್ನು ಹಸ್ತಾಂತರಿಸಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದಾರೆ.