ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್‌: ರಸ್ತೆ ಅವ್ಯವಸ್ಥೆಗೆ ಆಕ್ರೋಶ

Last Updated 24 ಸೆಪ್ಟೆಂಬರ್ 2021, 6:53 IST
ಅಕ್ಷರ ಗಾತ್ರ

ಕೆಜಿಎಫ್‌: ಬೆಮಲ್ ನಗರದ ಬಳಿ ಕಿತ್ತುಹೋಗಿರುವ ಲೋಕೋಪಯೋಗಿ ರಸ್ತೆಯನ್ನು ದುರಸ್ತಿ ಮಾಡಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಸಿಂಹ ಗರ್ಜನೆ ವೇದಿಕೆ ಕಾರ್ಯಕರ್ತರು ಗುರುವಾರ ಅಧಿಕಾರಿಗಳ ಮತ್ತು ಗುತ್ತಿಗೆದಾರನ ಶವ ಯಾತ್ರೆ ನಡೆಸಿ ಪ್ರತಿಭಟನೆ ನಡೆಸಿದರು.

ಬಂಗಾರಪೇಟೆ–ಕೆಜಿಎಫ್‌ ಮಾರ್ಗವಾಗಿ ವಿ. ಕೋಟೆಗೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಡಾಂಬರು ಕಿತ್ತು ಬಂದು ರಸ್ತೆಗಳು ತೀರಾ ಅಧ್ವಾನವಾಗಿವೆ. ವಾಹನ ಸವಾರರು ಕಷ್ಟಪಟ್ಟು ಸಂಚಾರ ನಡೆಸುತ್ತಿದ್ದಾರೆ. ಒಂದೊಂದು ಕಡೆ ಒಂದು ಅಡಿಗಿಂತ ಹೆಚ್ಚು ಆಳ ಇದೆ. ಮಳೆ ಬೀಳುತ್ತಿರುವ ಸಂದರ್ಭದಲ್ಲಿ ಹಳ್ಳದಲ್ಲಿ ನೀರು ತುಂಬಿ ರುವುದನ್ನು ಗಮನಿಸದ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ ಎಂದರು.

ಮುಖಂಡರಾದ ಪ್ರಸನ್ನಕುಮಾರ ಸ್ವಾಮಿ, ಎನ್‌. ಮಂಜುನಾಥ್, ರವಿಕುಮಾರ್ ನಾಯಕ್‌, ಉರಗಲಿ ಚಲಪತಿ, ರಮೇಶ್ ಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT