ಬೆಂಗಳೂರಿನಿಂದ ಬಂದು ಹೋಗುವ ರಿಯಲ್ ಎಸ್ಟೇಟ್‌ದಾರ ನಾನಲ್ಲ
‘ನಾನು 1986ರಿಂದ ಮಾಲೂರು ತಾಲ್ಲೂಕಿನಲ್ಲಿ ರಾಜಕಾರಣದಲ್ಲಿದ್ದೇನೆ. ಕ್ಷೇತ್ರದ ಜನ ನನಗೆ ಹಲವು ಅವಕಾಶ ಮಾಡಿಕೊಟ್ಟಿದ್ದಾರೆ. ಹೈಕೋರ್ಟ್ ಆದೇಶ ಬಂದ ದಿನ ಮಧ್ಯರಾತ್ರಿವರೆಗೆ ಜನರು ನನ್ನ ಮನೆ ಬಳಿ ಇದ್ದರು ಬೆಳಿಗ್ಗೆ ಮತ್ತೆ ಸಾವಿರಾರು ಜನ ಸೇರಿದ್ದರು. ಬೆಂಗಳೂರಿನಿಂದ ಮಾಲೂರು ಕ್ಷೇತ್ರಕ್ಕೆ ಬಂದು ಹೋಗುವ ರಿಯಲ್ ಎಸ್ಟೇಟ್‌ದಾರರಂತೆ ನಾನು ಅಲ್ಲ’ ಎಂದು ನಂಜೇಗೌಡ ಹೇಳಿದರು. ‘ಹಣೇಲಿ ಬರೆದಿದ್ದರೆ ಮುಂದೆ ಮಂತ್ರಿ ಆಗುತ್ತೇನೆ ಇಲ್ಲದಿದ್ದರೆ ಮನೆಯಲ್ಲಿರುತ್ತೇನೆ. ಅ.31ಕ್ಕೆ ಮಾಲೂರು ಕ್ಷೇತ್ರದಲ್ಲಿ ನಿಗದಿಯಾಗಿರುವ ಮುಖ್ಯಮಂತ್ರಿ ಕಾರ್ಯಕ್ರಮ ನಡೆಯುತ್ತದೆ’ ಎಂದರು.