ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಆರಂಭದಲ್ಲಿ ನೆಲಕಚ್ಚಿದ್ದ ಕೋಳಿ ಉದ್ಯಮ; ಮಾಂಸಕ್ಕೆ ಹೆಚ್ಚಿದ ಬೇಡಿಕೆ

Last Updated 1 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಮುಳಬಾಗಿಲು: ಕೊರೊನಾ ವೈರಸ್‌ನಿಂದ ಭಯಭೀತರಾಗಿದ್ದ ಜನರು ರೋಗ ನಿರೋಧಕ ಶಕ್ತಿ ಮಾಂಸಹಾರಕ್ಕಿದೆ ಎಂದು ವೈದ್ಯರ ಸೂಚನೆಗೆ, ಮಾಂಸಾಹಾರದ ಕಡೆಗೆ ಜನ ಒಲವು ತೋರಿಸುತ್ತಿದ್ದಾರೆ. ಕೊರೊನಾ ಕಾಲದಲ್ಲಿ ಸ್ವಲ್ಪ ಸಮಯ ಸಂಪೂರ್ಣವಾಗಿ ನೆಲಕಚ್ಚಿದ ಮಾಂಸದ ವ್ಯಾಪಾರ ಈಗ ಬೇಡಿಕೆ ಗಣನೀಯವಾಗಿ ಹೆಚ್ಚಿಸಿಕೊಳ್ಳುತ್ತಿದೆ.

ಮೊದಲ ಹಂತದಲ್ಲಿ ಮಾಂಸದಿಂದ ಕೊರೊನಾ ಹರಡುತ್ತದೆಂಬ ಅಭಿಪ್ರಾಯದಿಂದ ಬೆಲೆ ಕಡಿಮೆಯಾಯಿತು. ತಾಲ್ಲೂಕಿನಲ್ಲಿ ಮೂರು ಲಕ್ಷ ಕೋಳಿ ಮೊಟ್ಟೆಗಳ ವ್ಯಾಪಾರವಾಗುತ್ತಿತ್ತು. ಎರಡು ಲಕ್ಷ ಕೋಳಿಮೊಟ್ಟೆಗಳ ವ್ಯಾಪಾರವೂ ಸಾಧ್ಯವಾಗಲಿಲ್ಲ. ಕೊರೊನಾ ಪ್ರಾರಂಭದ ಸಮಯದಲ್ಲಿ ಉದ್ಯಮಕ್ಕೆ ಬಾರಿ ಹೊಡೆತ ಬಿದ್ದಿತು. ಆಗ ಹೆಚ್ಚಿನ ಸಂಖ್ಯೆಯ ಕೋಳಿ, ಮೊಟ್ಟೆಗಳನ್ನು ಕಡಿಮೆ ದರಕ್ಕೆ ಮಾರಾಟ ಮಾಡಬೇಕಾಯಿತು. ಕೆಲವರು ಉಚಿತವಾಗಿಯೂ ಹಂಚಿದ್ದರು.

ಈಗ ಪರಿಸ್ಥಿತಿ ಬದಲಾಗಿದೆ. ವೈದ್ಯಾಧಿಕಾರಿಗಳೇ ಚಿಕನ್, ಮಟನ್, ಕೋಳಿಮೊಟ್ಟೆ ತಿನ್ನಲು ಸೂಚಿಸಿದ್ದಾರೆ. ಅಂದಿನಿಂದ ಜನ ಮಾಂಸ ಕೊಳ್ಳಲು ಮುಂದಾದರು. ಕೊರೊನಾ ಹರಡುವಿಕೆ ಜಾಸ್ತಿಯಾದ ಸಮಯದಲ್ಲಿ ಹೆಚ್ಚಿನ ಬೇಡಿಕೆ ಮಾಂಸಕ್ಕೆ ಬಂದಿದೆ. ಚಿಕನ್ ₹200ವರೆಗೆ, ಮೊಟ್ಟೆ ₹2ರಿಂದ ₹5ಕ್ಕೆ ಹೆಚ್ಚಿದೆ. ಬೆಲೆ ಹೆಚ್ಚಾದರೂ ಬೇಡಿಕೆ ಕಡಿಮೆಯಾಗಿಲ್ಲ. ಕೊರೊನಾ ಸಮಯದಲ್ಲಿ ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಲು ವೈದ್ಯರು ಸೂಚಿಸುತ್ತಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿಯೂ ನಾಟಿಕೋಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ನಾಟಿ ಕೋಳಿ ಮಾಂಸ ಕೆ.ಜಿಗೆ ₹ 500ಕ್ಕೆ ಬಂದು ನಿಂತಿದೆ. ಇದರ ಜತೆಗೆ ಕೋಳಿ ಮೊಟ್ಟೆಗಳಿಗೂ ಬೇಡಿಕೆ ಹೆಚ್ಚಿದೆ. ಮಟನ್ ಕೆ.ಜಿಗೆ ₹600ರಿಂದ ₹700ರವರೆಗೂ ಮಾರಾಟವಾಗುತ್ತಿದೆ. ಕೊರೊನಾ ಮೊದಲ ಅವಧಿಯಲ್ಲಿ ಸಂಪೂರ್ಣವಾಗಿ ನಷ್ಟಹೊಂದಿದ ಮಾಂಸ ವ್ಯಾಪಾರ ಈಗ ಅರ್ಥಿಕವಾಗಿ ಚೇತರಿಗೆ ಕಂಡುಕೊಂಡಿದೆ.

ಕೊರೊನಾ ಪ್ರಾರಂಭದ ದಿನಗಳಲ್ಲಿ ಕೋಳಿ ಕೊಳ್ಳುವವರಿಲ್ಲದೆ ಉಚಿತವಾಗಿ ನೀಡಬೇಕಾಯಿತು. ಈಗ ಅಂತಹ ಪರಿಸ್ಥಿತಿ ಇಲ್ಲ. ಮಾಂಸದ ವ್ಯಾಪಾರ ಚೇತರಿಕೆ ಕಾಣುತ್ತಿದೆ ಎನ್ನುತ್ತಾರೆ ಕಸಬಾ ಹೋಬಳಿ ಸೊನ್ನವಾಡಿ ಗ್ರಾಮದ ಸೈಯದ್ ಖಲೀಂ ಉಲ್ಲಾ.

ಕೊರೊನಾ ಸಮಯದಲ್ಲಿ ಚಿಕನ್, ಕೋಳಿಮೊಟ್ಟಿ ತಿನ್ನಬಾರದೆಂಬ ಅಪಪ್ರಚಾರದ ಕಾರಣ ನಷ್ಟ ಹೊಂದಬೇಕಾಯಿತು ಎಂದು ಕೋಳಿ ವ್ಯಾಪಾರಿ ನಾರಾಯಣಪ್ಪ ತಿಳಿಸಿದರು.

ಕೊರೊನಾ ಸೋಂಕು ತಗುಲಿದವರು ಮತ್ತು ಕೊರೊನಾ ಬರದಂತಿರಲು ಕೋಳಿ ಮೊಟ್ಟೆ ತಿನ್ನುವುದು ಒಳ್ಳೆಯದು. ಬೇಯಿಸಿದ ಕೋಳಿಮೊಟ್ಟೆ ದಿನಕ್ಕೆ 2ರಿಂದ ನಾಲ್ಕರವರೆಗೂ ಸೇವಿಸಬಹುದು. ಅನಾರೋಗ್ಯವಿಲ್ಲದ ವೇಳೆ 200ರಿಂದ 300 ಗ್ರಾಂ ಮಾಂಸ ಸೇವನೆ ಮಾಡಬಹುದು. ಕೋಳಿಮೊಟ್ಟೆಯ ಬಿಳಿ ಭಾಗದಲ್ಲಿ ಹೆಚ್ಚಿನ ಪೋಷಕಾಂಶಗಳಿರುತ್ತದೆ ಎಂದು ಡಾ.ಸ್ವಾಮಿ ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT