ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಮರುಪಾವತಿ ಮಾಡದಿದ್ದರೆ ಆಸ್ತಿ ಹರಾಜು

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಎಚ್ಚರಿಕೆ
Last Updated 2 ಫೆಬ್ರುವರಿ 2020, 11:12 IST
ಅಕ್ಷರ ಗಾತ್ರ

ಕೋಲಾರ: ‘ಡಿಸಿಸಿ ಬ್ಯಾಂಕ್‌ನಲ್ಲಿ ಪಡೆದುಕೊಂಡಿರುವ ಅಡಮಾನ ಸಾಲ ಮರುಪಾವತಿ ಮಾಡದಿದ್ದರೆ ಯಾವುದೇ ಮುಲಾಜಿಗೆ ಒಳಗಾಗದೆ ಆಸ್ತಿಯನ್ನು ಹರಾಜು ಮಾಡಲಾಗುತ್ತದೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಎಚ್ಚರಿಕೆ ನೀಡಿದರು.

ಬ್ಯಾಂಕಿನಲ್ಲಿ ಅಡಮಾನ ಸಾಲ ಪಡೆದುಕೊಂಡು ಮರುಪಾವತಿ ಮಾಡದೆ ಇರುವವರ ಮನೆಗೆ ಭಾನುವಾರ ಭೇಟಿ ನೀಡಿ ಸಾಲ ಕಟ್ಟುವಂತೆ ಮನವೊಲಿಸಿ ಮಾತನಾಡಿ, ‘ಬ್ಯಾಂಕಿನಿಂದ ಪಡೆದುಕೊಂಡಿರುವ ಸಾಲ ಎಂದಿಗೂ ಆಸ್ತಿಯಾಗುವುದಿಲ್ಲ. ಮನುಷ್ಯತ್ವದಿಂದ ಸಾಲ ಮರುಪಾವತಿ ಮಾಡಿ, ಆಸ್ತಿ ಉಳಿಸಿಕೊಳ್ಳಿ’ ಎಂದು ಸಲಹೆ ನೀಡಿದರು.

‘ಬ್ಯಾಂಕಿನಿಂದ ಎರಡೂ ಜಿಲ್ಲೆಯ ರೈತರಿಗೆ, ಮಹಿಳಯರಿಗೆ ವಿವಿಧ ರೀತಿಯ ಸಾಲ ನೀಡಲಾಗಿದ್ದು, ಅವರು ಶೇ.100ರಷ್ಟು ಮರುಪಾವತಿ ಮಾಡುತ್ತಿದ್ದಾರೆ. ಅವರಲ್ಲಿ ಇರುವ ಪ್ರಮಾಣಿಕತೆ ನಿಮಗಿಲ್ಲವೇ, ಮರುಪಾವತಿಸಿ ಗೌರವ ಉಳಿಸಿಕೊಳ್ಳಿ, ಇಲ್ಲವಾದಲ್ಲಿ ನಿಮ್ಮ ಆಸ್ತಿಗಳ ಜಪ್ತಿಗೆ ಈಗಾಗಲೇ ಅಂತಿಮ ನೋಟೀಸ್ ನೀಡಲಾಗಿದ್ದು, ಶಿಫಾರಸ್ಸು, ಪ್ರಭಾವಗಳಿಗೆ ಒಳಗಾಗದೇ ಹರಾಜು ಹಾಕಲಾಗುವುದು’ ಎಂದು ತಾಕೀತು ಮಾಡಿದರು.

‘ಬ್ಯಾಂಕಿಗೆ ಆರ್ಥಿಕ ಶೈಕ್ಷಣಿಕ ಅಂತ್ಯ ಮಾರ್ಚ್ 31 ಅಗಿರುತ್ತದೆ. 32 ಮಂದಿ ಎನ್‌ಪಿಎ ಅಗುವ ಸಾಧ್ಯತೆಗಳಿವೆ. ಸಾಲ ಕಟ್ಟದಿದ್ದರೆ ಕ್ರೂಡಿಕೃತ ನಷ್ಟ ಒಳಗಾಗುತ್ತವೆ. ಒಂದು ವೇಳೆ ಇದಾದರೆ ಇದಕ್ಕೆ ನೀವೆ ಹೊಣೆಗಾರರು. ಬ್ಯಾಂಕ್ ಸಿಬ್ಬಂದಿ ಪದೇ ಪದೇ ಅವರ ಮನೆಗಳಿಗೆ ಅಲೆದು ಒತ್ತಡ ಹಾಕಿದರೂ ಲೆಕ್ಕಿಸದೇ ಸಾಲ ಬಾಕಿ ಉಳಿಸಿಕೊಂಡಿರುವುದು ಎಷ್ಟು ಮಾತ್ರ ಸರಿ’ ಎಂದು ಪ್ರಶ್ನಿಸಿದರು.

‘ಈಗಾಗಲೇ ಇಂತಹವರಿಗೆ ಸ್ಥಿರ ಸ್ವತ್ತುಗಳನ್ನು ಜಪ್ತಿ ಮಾಡಲು ಸರ್‌ಪ್ರೈಸ್ ಆ್ಯಕ್ಟ್ ಅನ್ವಯ ತಗಾದೇ ನೋಟೀಸ್ ಜಾರಿ ಮಾಡಲಾಗಿದೆ. ಇದಕ್ಕು ಮಣಿಯದಿದ್ದರೆ ಆಸ್ತಿ ಕಳೆದುಕೊಳ್ಳುತೀರಾ. ಸಾಲದ ಕಂತು ಮರುಪಾವತಿಸದವರ ವಸತಿ, ನಿವೇಶನ, ವಾಣಿಜ್ಯ ಆಸ್ತಿಗಳ ಜಪ್ತಿಗೆ ಈಗಾಗಲೇ ವಕೀಲರ ಮೂಲಕ ಲೀಗಲ್ ನೋಟೀಸ್ ಜಾರಿ ಮಾಡಲಾಗಿದೆ. ಇದು ಅಂತಿಮ ಎಚ್ಚರಿಕೆಯಾಗಿದೆ’ ಎಂದು ಹೇಳಿದರು.

‘ಸಾಲ ಬಾಕಿ ಉಳಿಸಿಕೊಂಡಿರುವವರು ನಗರದಲ್ಲಿ ಆಸ್ತಿ ಹೊಂದಿರುವವರೇ ಆಗಿರುವುದರ ಜತೆಗೆ ಇವರಿಗೆ ಹೆಚ್ಚು ಸರ್ಕಾರಿ ನೌಕರರೇ ಭಧ್ರತೆ ಹಾಕಿದ್ದಾರೆ. ಅವರಿಗೆ ಗೌರವ ಕೊಟ್ಟು ಸಾಲ ಮರುಪಾವತಿ ಮಾಡಬೇಕು ಎಂಬ ಮನಸ್ಥಿತಿ ಬರಲಿಲ್ಲವೇ’ ಎಂದು ಆಕ್ರೋಶವ್ಯಕ್ತಪಡಿಸಿದರು.

ಬ್ಯಾಂಕಿನ ವ್ಯವಸ್ಥಾಪಕ ಅಂಬರೀಶ್, ಸೂಪರ್ ವೈಸರ್ ಅಮಿನಾ, ಸಾಲ ವಸೂಲಿ ಅಧಿಕಾರಿಗಳಾದ ನಾಗರಾಜ್, ರಘು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT