ಕೋಲಾರ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುರುವಾರ ಸಂಜೆ ಅರ್ಧ ತಾಸು ಜೋರು ಮಳೆಯಾಯಿತು.
ಮಧ್ಯಾಹ್ನದಿಂದಲೇ ಮೋಡಿ ಕವಿದ ವಾತಾವರಣವಿತ್ತು. ಸಂಜೆ ವೇಳೆಗೆ ಜೋರು ಗಾಳಿ ಬೀಸಲಾರಂಭಿಸಿತು. ಗಾಳಿಯ ಆರ್ಭಟಕ್ಕೆ ದೂಳು ಇಡೀ ವಾತಾವರಣವನ್ನು ಆವರಿಸಿಕೊಂಡಿತು. ಕೆಲ ನಿಮಿಷಗಳಲ್ಲಿ ಧಾರಾಕಾರ ಮಳೆಯಾಯಿತು. ಕೋಲಾರ ತಾಲ್ಲೂಕಿನ ಒಕ್ಕಲೇರಿ ಹೋಬಳಿಯಲ್ಲಿ ಆಲಿಕಲ್ಲು ಸಮೇತ ಮಳೆ ಸುರಿಯಿತು.
ಸುತ್ತ ಕಸ ಕಟ್ಟಿಕೊಂಡಿದ್ದರಿಂದ ರಸ್ತೆಯಲ್ಲಿ ನೀರು ಉಕ್ಕು ಹರಿಯಿತು. ಜೊತೆಗೆ ಕಸವೂ ಹರಿದು ಬಂದಿದ್ದರಿಂದ ರಸ್ತೆ ತ್ಯಾಜ್ಯಮಯವಾಯಿತು. ವ್ಯಾಪಾರಿಗಳು ಹಾಕಿಕೊಂಡಿದ್ದ ತಾತ್ಕಾಲಿಕ ಟೆಂಟ್‌ಗಳು, ಟಾರ್ಪಲ್‌ಗಳು ಮಳೆ ಗಾಳಿಯಿಂದಾಗಿ ಕಿತ್ತು ಬಂದವು.
ಬಿಸಿಲ ಧಗೆ ಹಾಗೂ ರಸ್ತೆ ದೂಳಿನಿಂದ ಬಸವಳಿದಿದ್ದ ಜನರಲ್ಲಿ ತುಸು ನೆಮ್ಮದಿ ಮೂಡಿತು. ಹಲವರು ಮಳೆಯಲ್ಲಿಯೇ ಆಲಿಕಲ್ಲು ಎತ್ತಿಕೊಳ್ಳಲು ರಸ್ತೆಗೆ ಬಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.