ಭಾನುವಾರ, ಸೆಪ್ಟೆಂಬರ್ 25, 2022
22 °C

ಅಸ್ವಸ್ಥ ಗಂಡು ಚಿರತೆ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಸಂದ್ರ (ಕೋಲಾರ): ಕಾಲು ನೋವಿನಿಂದ ಅಸ್ವಸ್ಥಗೊಂಡಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ರಕ್ಷಣೆ ಮಾಡಿದ್ದಾರೆ.

ಗ್ರಾಮದ ಬಳಿ ಹುಲ್ಲಿನ ಮೆದೆಯಡಿ ಸಿಲುಕಿ ಒಂದು ವರ್ಷದ ಗಂಡು ಚಿರತೆಯು ಅಸ್ವಸ್ಥಗೊಂಡಿತ್ತು. ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಬನ್ನೇರುಘಟ್ಟದಿಂದ ಬಂದಿದ್ದ ಉಮಾಶಂಕರ್‌ ಹಾಗೂ ಕೋಲಾರ ಆರ್‌ಎಫ್‌ಒ ವಾಸುದೇವಮೂರ್ತಿ ಅವರನ್ನು ಒಳಗೊಂಡ ತಂಡದ ಸದಸ್ಯರು ರಕ್ಷಿಸಿದ್ದಾರೆ.

ಬಲೆಯ ನೆರವಿನಿಂದ ಬೋನಿಗೆ ಹಾಕಿಕೊಂಡು ಚಿಕಿತ್ಸೆ ನೀಡಲು ವಾಹನದಲ್ಲಿ ಬನ್ನೇರು ಘಟ್ಟಕ್ಕೆ 
ಕೊಂಡೊಯ್ದರು.

‘ವಾರದಿಂದ ಗ್ರಾಮದ ಸುತ್ತಮುತ್ತ ಓಡಾಡಿಕೊಂಡಿತ್ತು. ಕಾಲು ಹಾಗೂ ಸೊಂಟದ ನೋವಿನಿಂದ ಬಳಲುತಿತ್ತು. ಕರು ತಿನ್ನಲು ಬಂದಿದ್ದು, ಸ್ಥಳೀಯರು ಓಡಿಸಿದ್ದಾರೆ. ಆಗ ಹುಲ್ಲಿನ ಮೆದೆ ಅಡಿಗೆ ತೆರಳಿತು. ಬರಲು ಸಾಧ್ಯವಾಗಲಿಲ್ಲ. ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದೆವು. ಈ ಭಾಗದಲ್ಲಿ ಇನ್ನೂ ಎರಡು ಚಿರತೆಗಳಿವೆ. ನಾಯಿ, ಕರು, ಕುರಿ, ಮೇಕೆ ಹಿಡಿಯುತ್ತಿದ್ದು ನಮಗೆ ರಾತ್ರಿ ನಿದ್ದೆ ಇಲ್ಲದಂತಾಗಿದೆ. ಈ ಬಗ್ಗೆ ಅರಣ್ಯಾಧಿಕಾರಿಗಳು ಕ್ರಮವಹಿಸಬೇಕು’ ಎಂದು ಗ್ರಾಮಸ್ಥರು
ಆಗ್ರಹಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು