ಕೋಲಾರ: ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ರಾಜ್ಯಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಜಿಲ್ಲೆಯಿಂದ ಭಾಗವಹಿಸಿದ ಸ್ಪರ್ಧಿಗಳು ಎರಡು ಬಂಗಾರ, ಎರಡು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಜಯಿಸಿದ್ದಾರೆ.

17 ವರ್ಷದೊಳಗಿನವರ ಬಾಲಕಿಯ ವಿಭಾಗದಲ್ಲಿ ವಿ.ಮರಿಯಾ ಶರೋನ್ (ಪೀಪ್ ಸೈಟ್ ಸ್ಪರ್ಧೆ) ಹಾಗೂ ಶಿಯೋನಾ ಲಿಲ್ಲಿ (ಓಪನ್ ಸೈಟ್ ಸ್ಪರ್ಧೆ) ಚಿನ್ನ ಹಾಗೂ ರಿಕಾ ಕಂಚಿನ ಪದಕ ಜಯಿಸಿದ್ದಾರೆ. ಬಾಲಕರ ವಿಭಾಗದಲ್ಲಿ ದಿನೇಶ್ವರನ್ (ಪೀಪ್ ಸೈಟ್) ಬೆಳ್ಳಿ ಗೆದ್ದಿದ್ದಾರೆ. 14 ವರ್ಷದೊಳಗಿನವರ ಬಾಲಕಿಯರ ವಿಭಾಗದಲ್ಲಿ ದೀಕ್ಷಾ ಬೆಳ್ಳಿ ಜಯಿಸಿದ್ದಾರೆ.

ಅಲ್ಲದೇ, ಇವರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ರಾಷ್ಟ್ರಮಟ್ಟದಲ್ಲಿಯೂ ಉತ್ತಮ ಸಾಧನೆ ಮೂಡಿಬರುವ ವಿಶ್ವಾಸವಿದ್ದು, ಸ್ಪರ್ಧಿಗಳನ್ನು ಡಿಡಿಪಿಐ ಅಭಿನಂದಿಸಿದ್ದಾರೆ ಎಂದು ಇಲಾಖೆಯ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಕೆ.ಆರ್.ಚಂದ್ರಶೇಖರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.