ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಮುಖ್ಯ ಶಿಕ್ಷಕರ ವರ್ಗಾವಣೆಯಲ್ಲಿ ಗೊಂದಲ

Published 12 ಜುಲೈ 2023, 7:39 IST
Last Updated 12 ಜುಲೈ 2023, 7:39 IST
ಅಕ್ಷರ ಗಾತ್ರ

ಕೋಲಾರ: 2022-23ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ವರ್ಗಾವಣೆ ಸಂಬಂಧ ಗೊಂದಲ ಉಂಟಾಗಿದೆ. 

ಉರಿಗಾಂಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರ ಸ್ಥಾನ ಖಾಲಿ ಇದೆ. ಹಿಂದೆ ಇದ್ದವರಿಗೆ ಇದೇ ಕೌನ್ಸೆಲಿಂಗ್‌ನಲ್ಲಿ ಬೇರೆ ಶಾಲೆಗೆ ವರ್ಗಾವಣೆ ಆಗಿತ್ತು. ಆದರೆ, ಗಣಕೀಕೃತ ಕೌನ್ಸೆಲಿಂಗ್‌ನಲ್ಲಿ ಖಾಲಿ ಇರುವ ಆ ಸ್ಥಾನ ತೋರಿಸುತ್ತಿಲ್ಲ. ಕೆಜಿಎಫ್‌ ವಲಯದ ಶಿಕ್ಷಣಾಧಿಕಾರಿಗಳ ನಿರ್ಲಕ್ಷ್ಯ ಇದಕ್ಕೆ ಕಾರಣ ಎನ್ನಲಾಗಿದೆ. ಈ ಸಂಬಂಧ ವಾಗ್ವಾದವೂ ನಡೆದು ಸ್ಥಗಿತಗೊಂಡಿದೆ.

‘ಆ ಶಾಲೆಗೆ ವರ್ಗಾವಣೆಗೆ ಕೆಲವರು ಹಟ ಹಿಡಿದರು. ಆದರೆ, ನ್ಯಾಯಾಲಯದಲ್ಲಿ ಪ್ರಕರಣ ಇದ್ದ ಕಾರಣ ಕೈಬಿಡಲಾಗಿದೆ. ಬುಧವಾರ ಎಲ್ಲವೂ ಸರಿ ಹೋಗಲಿದೆ’ ಎಂದು ಡಿಡಿಪಿಐ ಕೃಷ್ಣಮೂರ್ತಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT