ಮಾಲೂರು: ಆರಂಭವಾಗದ ಶಿಕ್ಷಕರ ಭವನ

ಮಾಲೂರು: ಪಟ್ಟಣದಲ್ಲಿ ಶಿಕ್ಷಕರ ಭವನ ನಿರ್ಮಾಣ ಮಾಡಬೇಕು ಎಂಬ ಕನಸಿಗೆ ಎರಡು ದಶಕ ಪೂರ್ಣವಾಗಿದೆ. 2017ರಲ್ಲಿ ಕಾಮಗಾರಿ ಆರಂಭವಾಗಿ ಸಿಮೆಂಟ್ ಪಿಲ್ಲರ್‌ಗಳ ಹಂತಕ್ಕೆ ಬಂದು ಮತ್ತೆ ಸ್ಥಗಿತಗೊಂಡಿದೆ.
ಪಟ್ಟಣದ ಕೋರ್ಟ್ ವಸತಿ ಗೃಹಗಳ ಪಕ್ಕದಲ್ಲೇ ಇರುವ 20 ಗುಂಟೆ ಜಮೀನು 1975-76ರಲ್ಲಿ ಸರ್ಕಾರದಿಂದ ಮಂಜೂರಾಗಿದೆ. ಶಿಕ್ಷಕರ ಸಂಘಗಳಲ್ಲಿನ ಹೊಂದಾಣಿಕೆ ಕೊರತೆ, ಅಧಿಕಾರಿಗಳ ಅಸಡ್ಡೆ , ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆ ಫಲವೆನ್ನುವಂತೆ ಶಿಕ್ಷಕರ ಭವನ ಕಾಮಗಾರಿ 2016ರವರೆಗೂ ಆರಂಭವಾಗಿರಲಿಲ್ಲ. 2017ರಲ್ಲಿ ಅಂದಿನ ಜೆಡಿಎಸ್ ಶಾಸಕ ಕೆ.ಎಸ್.ಮಂಜುನಾಥ್ ಗೌಡ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿ, ಶಿಕ್ಷಕರ ಸಂಘದ ಅಧ್ಯಕ್ಷರುಗಳನ್ನು ಪದಾಧಿಕಾರಿಗಳನ್ನಾಗಿ ನೇಮಕ ಮಾಡಲಾಯಿತು.
ಶಿಕ್ಷಕರ ಕಟ್ಟಡ ಕಾಮಗಾರಿ ನಿರ್ಮಾಣಕ್ಕೆ ₹1.25 ಕೋಟಿ ಯೋಜನೆ ರೂಪಿಸಿದ್ದು, ತಾಲ್ಲೂಕಿನ ಪ್ರೌಢ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರು ತಮ್ಮ ಒಂದು ದಿನ ವೇತನವನ್ನು ಕಟ್ಟಡ ಕಾಮಗಾರಿಗೆ ನೀಡಿದ್ದಾರೆ. ಇದರ ಜೊತೆಗೆ ಕೆ.ಎಸ್.ಮಂಜುನಾಥಗೌಡರ ಸಹಕಾರದಿಂದ ಸುಮಾರು ₹17 ಲಕ್ಷ ವೆಚ್ಚದಲ್ಲಿ ಕಾಮಗಾರಿ ಆರಂಭಿಸಿ, ಪಿಲ್ಲರ್‌ಗಳ ಹಂತಕ್ಕೆ ಕಾಮಗಾರಿ ಬಂದಿದೆ. ನಂತರ ಎರಡು ವರ್ಷಗಳು ಕಳೆದರೂ ಶಿಕ್ಷಕರ ಭವನ ಕಟ್ಟಡ ಕಾಮಗಾರಿ ಆರಂಭವಾಗದೆ, ಗಿಡಗಳು ಬೆಳೆದು ಸಾರ್ವಜನಿಕರ ಮೂತ್ರ ವಿಸರ್ಜನೆ ತಾಣವಾಗಿದೆ.
ದೇಣಿಗೆ ಸಂಗ್ರಹ: ಕಳೆದ ಎರಡು ವರ್ಷದಲ್ಲಿ ಸಮಿತಿ ಒಂದೇ ಒಂದು ಸಭೆ ನಡೆಸಿಲ್ಲ. ಶೇ 25ರಷ್ಟು ಹಣ ಕಟ್ಟಡ ಕಾಮಗಾರಿ ಪೂರ್ಣವಾಗಿದ್ದರೆ, ಶಿಕ್ಷಕರ ಕಲ್ಯಾಣ ನಿಧಿಯಿಂದ ಸುಮಾರು ₹ 50ಲಕ್ಷ ಬಿಡುಗಡೆ
ಯಾಗುತ್ತಿತ್ತು ಎನ್ನುತ್ತಾರೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್. ನರಸಿಂಹ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.